ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಪೋರ್ಟಬಲ್ ವಾಟರ್ ಹೀಟರ್.! ವಿದ್ಯುತ್ ಬಳಕೆ ಕೂಡಾ ಕಡಿಮೆ

Portable Water Heater : ಇಲ್ಲಿ ನಾವು ಪೋರ್ಟಬಲ್ ವಾಟರ್ ಹೀಟರ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ವಾಟರ್ ಹೀಟರ್ ಅನ್ನು ಅಳವಡಿಸುವ ಮೂಲಕ ಕಡಿಮೆ ವೆಚ್ಚದಲ್ಲಿ ಬಿಸಿ ನೀರನ್ನು ಪಡೆಯಬಹುದು. ಈ ಪೋರ್ಟಬಲ್ ವಾಟರ್ ಹೀಟರ್ ಬೆಲೆ ಕೂಡಾ ಕಡಿಮೆ. ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಈ ವಾಟರ್ ಹೀಟರ್ ಖರೀದಿಸಬಹುದು.

Written by - Ranjitha R K | Last Updated : Oct 18, 2022, 11:58 AM IST
  • ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಸುಲಭವಲ್ಲ.
  • ಇದಕ್ಕಾಗಿ ಬಹುತೇಕ ಮಂದಿ ಗೀಸರ್ ನತ್ತ ಮೊರೆ ಹೋಗುತ್ತಾರೆ.
  • ಇಲ್ಲಿದೆ ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಗೀಸರ್
 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಪೋರ್ಟಬಲ್ ವಾಟರ್ ಹೀಟರ್.! ವಿದ್ಯುತ್ ಬಳಕೆ ಕೂಡಾ ಕಡಿಮೆ  title=
Portable Water Heater

Portable Water Heater : ಇನ್ನೇನು ಚಳಿಗಾಲ ಶುರುವಾಗಿದೆ. ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಸುಲಭವಲ್ಲ. ಇದಕ್ಕಾಗಿ ಬಹುತೇಕ ಮಂದಿ ಗೀಸರ್ ನತ್ತ ಮೊರೆ ಹೋಗುತ್ತಾರೆ. ಆದರೆ ಗೀಸರ್ ಗಳ ಬೆಲೆ ಕೂಡಾ ಗಗನಕ್ಕೇರುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಗೀಸರ್‌ಗಳ ಬೆಲೆಯೂ ಏರಿಕೆಯಾಗಿದೆ. ಆದರೆ, ಇಲ್ಲಿ ನಾವು ಪೋರ್ಟಬಲ್ ವಾಟರ್ ಹೀಟರ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ವಾಟರ್ ಹೀಟರ್ ಅನ್ನು ಅಳವಡಿಸುವ ಮೂಲಕ ಕಡಿಮೆ ವಿದ್ಯುತ್ ಬಳಸಿ ಬಿಸಿ ನೀರನ್ನು ಪಡೆಯಬಹುದು. ಈ ಪೋರ್ಟಬಲ್ ವಾಟರ್ ಹೀಟರ್ ಬೆಲೆ ಕೂಡಾ ಕಡಿಮೆ. ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಈ ವಾಟರ್ ಹೀಟರ್ ಖರೀದಿಸಬಹುದು. ಅದರಲ್ಲೂ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಪೋರ್ಟಬಲ್ ವಾಟರ್ ಹೀಟರ್‌ನ ಬೆಲೆ ಕೂಡಾ ತುಂಬಾ ಕಡಿಮೆಯಾಗಿದೆ. 

ಇನ್ಸ್ಟಂಟ್ ಪೋರ್ಟಬಲ್ ವಾಟರ್ ಹೀಟರ್ ಗೀಸರ್ :
ಕ್ಯಾಪಿಟಲ್ 1ಲೀ  ಇನ್‌ಸ್ಟಂಟ್ ಪೋರ್ಟಬಲ್ ವಾಟರ್ ಹೀಟರ್ ಗೀಸರ್ ಬೆಲೆ 2,050 ರೂಪಾಯಿ. ಆದರೆ Amazon ನಲ್ಲಿ ಈ ವಾಟರ್ ಹೀಟರ್ ಕೇವಲ 949 ರೂಪಾಯಿಗೆ ಲಭ್ಯವಿದೆ. ಇದರೊಂದಿಗೆ 31 ರೂಪಾಯಿಗಳ ಕೂಪನ್ ಸಹ ಲಭ್ಯವಿದೆ. ಈ ಕೂಪನ್ ಬಳಸಿದರೆ ಗೀಸರ್‌ನ ಬೆಲೆ ಇನ್ನಷ್ಟು ಕಡಿಮೆ ಮಾಡಬಹುದು. ಆದರೆ MCBಯೊಂದಿಗೆ ಹೀಟರ್ ಅನ್ನು ಖರೀದಿಸುವುದಾದರೆ ವಾಟರ್ ಹೀಟರ್ ಬೆಲೆ 1,349 ರೂ. ಆಗಿರಲಿದೆ.  

ಇದನ್ನೂ ಓದಿ : Google Diwali Surprise: ಗೂಗಲ್‌ನಲ್ಲಿ ಈ ಒಂದು ಪದ ಸರ್ಚ್ ಮಾಡಿದರೆ ಬೆಳಗುತ್ತೆ ಸ್ಕ್ರೀನ್

ಸಾಕಷ್ಟು ಪ್ರಬಲ ಪ್ರಾಡಕ್ಟ್ : 
ಇದರಲ್ಲಿ ಕಟ್ ಆಫ್ ವೈಶಿಷ್ಟ್ಯವನ್ನು ನೀಡಲಾಗಿದೆ. ಅಂದರೆ, ನೀರು ಬಿಸಿಯಾದ ನಂತರ, ಗೀಸರ್ ಆಫ್ ಆಗುತ್ತದೆ. ಇದು ABS ಬಾಡಿಯೊಂದಿಗೆ ಬರುತ್ತದೆ. ಇದನ್ನು ಸರಳವಾಗಿ ಹೇಳುವುದಾದರೆ, ಗಟ್ಟಿಯಾದ ಪ್ಲಾಸ್ಟಿಕ್ ಅನ್ನು ಅದರಲ್ಲಿ ಬಳಸಲಾಗಿದೆ. ಇದು ಸುಲಭವಾಗಿ ಕೆಡುವುದಿಲ್ಲ. ನೀರಿನ ಸೋರಿಕೆಯ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗಿದೆ. ಇದು 20% ವರೆಗೆ ವಿದ್ಯುತ್ ಉಳಿತಾಯ ಮಾಡುತ್ತದೆ. 

ವಿದ್ಯುತ್ ಶಾಕ್  ಸಾಧ್ಯತೆ ಬಹಳ ಕಡಿಮೆ : 
ಹೆಚ್ಚಿನ ಪೋರ್ಟಬಲ್ ವಾಟರ್ ಹೀಟರ್‌ಗಳಲ್ಲಿ ಅವಘಡಕ್ಕೆ ಗುರಿಯಾಗುತ್ತವೆ. ಆದರೆ  ಈ ವಾಟರ್ ಹೀಟರ್ ಗಳು ಶಾಕ್ ಪ್ರೂಫ್ ಮತ್ತು ಹೀಟ್ ರೆಸಿಸ್ಟೆಂಟ್  ಆಗಿದೆ. ಇದರಲ್ಲಿ ಹಸಿರು ಮತ್ತು ಕೆಂಪು ಬೆಳಕಿನ ಸೂಚಕಗಳನ್ನು ನೀಡಲಾಗಿದೆ. ನೀರು ಬಿಸಿಯಾಗಿದ್ದರೆ, ಕೆಂಪು ಬೆಳಕು ತೋರಿಸುತ್ತದೆ. ಕೆಲವು ಸೆಕೆಂಡುಗಳಲ್ಲಿ ಅದು ನೀರನ್ನು ಬಿಸಿ ಮಾಡುತ್ತದೆ. ಅಂದರೆ ಟ್ಯಾಪ್ ಆನ್ ಮಾಡಿದ ಕೂಡಲೇ  ಬಿಸಿನೀರು ಲಭ್ಯವಾಗುತ್ತದೆ.  

ಇದನ್ನೂ ಓದಿ :  Guinness Book ಪ್ರಕಾರ ಇದು ವಾರದ ಅತ್ಯಂತ ಕೆಟ್ಟ ದಿನವಂತೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News