BSNL Offers: ತನ್ನ ಬಳಕೆದಾರರಿಗೆ ಭಾರಿ ಉಡುಗೊರೆ ನೀಡಿದ BSNL, ನಾಲ್ಕು ತಿಂಗಳಿಗೆ ಉಚಿತ ಸೇವೆ

New Broadband OfferBSNL - ತನ್ನ ಹೊಸ ಕೊಡುಗೆಯಲ್ಲಿ, ಕೆಲವು ವಿಶೇಷ ಬಳಕೆದಾರರು ನಾಲ್ಕು ತಿಂಗಳವರೆಗೆ ಉಚಿತ ಬ್ರಾಡ್‌ಬ್ಯಾಂಡ್ ಸೇವೆಗಳನ್ನು (BSNL Broadband Services) ನೀಡಲಿದೆ. ಈ ಆಫರ್ ಯಾವ ಬಳಕೆದಾರರಿಗಾಗಿ ಇದೆ ಮತ್ತು ನೀವು ಇದರ ಲಾಭವನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Oct 16, 2021, 10:44 AM IST
  • BSNL ಹೊಸ ಕೊಡುಗೆ
  • ಈ ಕೊಡುಗೆಯ ಅಡಿ ನಿಮಗೆ ಸಿಗಲಿದೆ 4 ತಿಂಗಳ ಉಚಿತ ಇಂಟರ್ನೆಟ್.
  • ಈ ವಿಶೇಷ ಗ್ರಾಹಕರಿಗೆ ಈ ಕೊಡುಗೆ ಅನ್ವಯಿಸಲಿದೆ.
BSNL Offers: ತನ್ನ ಬಳಕೆದಾರರಿಗೆ ಭಾರಿ ಉಡುಗೊರೆ ನೀಡಿದ BSNL, ನಾಲ್ಕು ತಿಂಗಳಿಗೆ ಉಚಿತ ಸೇವೆ  title=
BSNL Free services (File Photo)

ನವದೆಹಲಿ: New Broadband Offer - ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ತನ್ನ ಕೆಲವು ಆಯ್ದ ಬಳಕೆದಾರರಿಗೆ ನಾಲ್ಕು ತಿಂಗಳ ಕಾಲ ಉಚಿತ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ. ಈ ಸೌಲಭ್ಯವನ್ನು BSNL ನ ಭಾರತ್ ಫೈಬರ್ ಮತ್ತು ಡಿಜಿಟಲ್ ಚಂದಾದಾರರ ಲೈನ್ (DSL) ಗ್ರಾಹಕರಿಗೆ ಪ್ರತ್ಯೇಕವಾಗಿ ನೀಡಲಾಗುವುದು ಎನ್ನಲಾಗಿದೆ. ಈ ಕುರಿತು (BSNL Broadband Plans) ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

BSNL ಯಾರಿಗೆ ಈ ಉಚಿತ ಬ್ರಾಡ್ ಬ್ಯಾಂಡ್ ಸೇವೆ ನೀಡಲಿದೆ
BSNL ನ ಈ ಸೇವೆಯನ್ನು ಭಾರತ್ ಫೈಬರ್ ಮತ್ತು ಡಿಜಿಟಲ್ ಸಬ್‌ಸ್ಕ್ರೈಬರ್ ಲೈನ್ (DSL) ಗ್ರಾಹಕರಿಗೆ ಹಾಗೂ BSNL ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಓವರ್ ವೈಫೈ (BBoWiFi) ಚಂದಾದಾರರಿಗೆ ಒದಗಿಸಲಾಗುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ವೃತ್ತವನ್ನು ಹೊರತುಪಡಿಸಿ ದೇಶದ ಇತರ ಎಲ್ಲಾ ವಲಯಗಳಲ್ಲಿ BSNL ಈ ಸೇವಯ ಹಾಗೂ  ಬ್ರಾಡ್‌ಬ್ಯಾಂಡ್ ಸೇವಾ ದರಗಳನ್ನು ಪರಿಷ್ಕರಿಸಿದೆ.

ಯಾರಿಗೆ ಸಿಗಲಿದೆ ಉಚಿತ ಸೇವೆ
ಈ ಉಚಿತ ಸೇವೆಯ (BSNL Free Service) ಲಾಭ ಪಡೆಯಲು ಆಯ್ದ ಬಳಕೆದಾರರು 36 ತಿಂಗಳ ಚಂದಾ ಮೊತ್ತವನ್ನು ಏಕಕಾಲಕ್ಕೆ ಪಾವತಿಸಬೇಕು. ಈ  ರೀತಿ ಮಾಡಿದಲ್ಲಿ BSNL ನಿಮಗೆ ಒಟ್ಟು 40 ತಿಂಗಳ ಸೇವೆ ಒದಗಿಸಲಿದೆ. ಈ ಅಧಿಸೂಚನೆಯನ್ನು ಮೊಟ್ಟಮೊದಲಬಾರಿಗೆ TelecomTalk ನೀಡಿತ್ತು.

ಇದನ್ನೂ ಓದಿ-Vi ನಿಂದ ಅದ್ಭುತ ಆಫರ್! ಈ ಕಡಿಮೆ ವೆಚ್ಚದ ಪ್ಲಾನ್ ಜೊತೆ ಸಿಗಲಿದೆ 2GB ಡೇಟಾ Free 

ಇದಲ್ಲದೆ 24 ತಿಂಗಳುಗಳ ಮೊತ್ತವನ್ನು ಮುಂಗಡವಾಗಿ ಪಾವತಿಸುವ ಬಳಕೆದಾರರಿಗೂ ಕೂಡ BSNL ಮೂರು ಬ್ರಾಡ್ ಬ್ಯಾಂಡ್ ಸೇವೆ ಉಚಿತವಾಗಿ ನೀಡಲಿದೆ.

ಇದೇ ರೀತಿ 12 ತಿಂಗಳ ಅಡ್ವಾನ್ಸ್ ಚಂದಾ ಪಾವತಿಸುವ ಬಳಕೆದಾರರಿಗೂ ಕೂಡ ಒಂದು ತಿಂಗಳ ಬ್ರಾಡ್ ಬ್ಯಾಂಡ್ ಸೇವೆ ಉಚಿತವಾಗಿ ಸಿಗಲಿದೆ.

ಈ ಸೇವೆಯ ಲಾಭ ಹೇಗೆ ಪಡೆಯಬೇಕು
ಈ ಯೋಜನೆಯ ಲಾಭ ಪಡೆಯಲು, BSNL ಗ್ರಾಹಕರು ಟೆಲಿಕಾಂ ಕಂಪನಿಯ ಟೋಲ್-ಫ್ರೀ ಸಂಖ್ಯೆ 18000003451500 ಗೆ ಕರೆ ಮಾಡಬಹುದು ಅಥವಾ BSNL ಸೈಟ್ ಅನ್ನು ಭೇಟಿ ಮಾಡುವ ಮೂಲಕ ಹತ್ತಿರದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ-Google: 3 ಅಪಾಯಕಾರಿ ಆಪ್‌ಗಳನ್ನು ನಿಷೇಧಿಸಿದ ಗೂಗಲ್, ತಕ್ಷಣವೇ ಈ ಲಿಸ್ಟ್ ಪರಿಶೀಲಿಸಿ

ಬಿಎಸ್‌ಎನ್‌ಎಲ್ ತನ್ನ ಈ ಉಚಿತ ಸೇವೆಗಳನ್ನು ಮಹಾರಾಷ್ಟ್ರ ವೃತ್ತದ ಬಳಕೆದಾರರಿಗೆ ಮಾತ್ರ ಸೀಮಿತಗೊಳಿಸಿತ್ತು. ಆದರೆ, ಇದೀಗ ಈ ಸೇವೆಯನ್ನು  ಅಂಡಮಾನ್ ಮತ್ತು ನಿಕೋಬಾರ್ ಹೊರತುಪಡಿಸಿ ದೇಶಾದ್ಯಂತದ BSNL ಗ್ರಾಹಕರಿಗೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ-Whatsapp Chat Backup 100%ನಲ್ಲಿ ಸಿಲುಕಿಕೊಳ್ಳುತ್ತಿದೆಯೇ? ಈ ರೀತಿ ಸಮಸ್ಯೆ ಪರಿಹರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News