Google: ಇತ್ತೀಚೆಗಷ್ಟೇ ಅಪಾಯಕಾರಿ ಎಂದು 150 ಆಪ್‌ಗಳನ್ನು ನಿಷೇಧಿಸಿದ್ದ ಗೂಗಲ್ ಇದೀಗ, ಮೂರು ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಇನ್ನೂ ಮೂರು ಆಪ್‌ಗಳನ್ನು ನಿಷೇಧಿಸಿದೆ. ಈ ಆಪ್‌ಗಳನ್ನು ತೆಗೆಯುವುದರಿಂದ ಮೋಸ ಹೋಗಿರುವ ಬಳಕೆದಾರರಿಗೆ ಲಾಭವಾಗುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ. ನಿಮ್ಮ ಸ್ಮಾರ್ಟ್ ಫೋನ್ ಕೂಡ ಈ ಆಪ್ ಗಳನ್ನು ಹೊಂದಿದ್ದರೆ, ಅದನ್ನು ತಕ್ಷಣವೇ ಡಿಲೀಟ್ ಮಾಡಿ. ಇಲ್ಲವೇ ನೀವೂ ಕೂಡ ಮೋಸ ಹೋಗಬಹುದು.
ಗೂಗಲ್ ಪ್ಲೇ ಸ್ಟೋರ್ (Google Play Store)ನಿಂದ ನಿಷೇಧಿಸಲ್ಪಟ್ಟ ಈ ಮೂರು ಆಪ್ ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಕದಿಯುತ್ತಿದ್ದವು. ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ಕಿ ಈ ಆಪ್‌ಗಳನ್ನು ಗುರುತಿಸಿದ್ದು, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಲಾಗಿನ್‌ಗಳ ಮೂಲಕ ಕದಿಯಲಾಗುತ್ತಿದೆ ಮತ್ತು ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲಾಗುತ್ತಿದೆ ಎಂದು ವಿವರಿಸಿದೆ.
ಇದನ್ನೂ ಓದಿ- BSNL ಗ್ರಾಹಕರಿಗೆ ದೀಪಾವಳಿ ಗಿಫ್ಟ್ , ಸಿಗಲಿದೆ ಸಣ್ಣ ರಿಚಾರ್ಜ್ ನ 30 ದಿನಗಳ ಪ್ಲಾನ್
ವಾಸ್ತವವಾಗಿ, ಅನೇಕ ವೆಬ್ ಸೇವೆಗಳು ಮತ್ತು ಅಪ್ಲಿಕೇಶನ್‌ಗಳಲ್ಲಿನ 'ಲಾಗಿನ್ ವಿಥ್ ಫೇಸ್‌ಬುಕ್' (Login With Facebook) ಬಟನ್ ಅನ್ನು ಬಳಕೆದಾರರನ್ನು ತ್ವರಿತವಾಗಿ ದೃಢೀಕರಿಸಲು ಬಳಸಲಾಗುತ್ತದೆ ಮತ್ತು ಇನ್ನೊಂದು ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ರಚಿಸದೆ ಸೇವೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಮತ್ತು ಇದನ್ನು ಸ್ಪಾಟಿಫೈ ಮತ್ತು ಟಿಂಡರ್‌ನಂತಹ ಜನಪ್ರಿಯ ವೇದಿಕೆಗಳು ಬಳಸುತ್ತವೆ. ಭದ್ರತಾ ಸಂಸ್ಥೆಯ ಪ್ರಕಾರ, ಈ ಅಪ್ಲಿಕೇಶನ್‌ಗಳು ಲಾಗಿನ್ ರುಜುವಾತುಗಳನ್ನು ಕದಿಯಲು ಮತ್ತು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಸೈನ್-ಇನ್ ಡೇಟಾವನ್ನು ಬಳಸುತ್ತಿವೆ.
ಗೂಗಲ್ ಈ ಮೂರು ಆಪ್‌ಗಳನ್ನು ನಿಷೇಧಿಸಿದೆ:
ಗ್ರಾಹಕರ ಮಾಹಿತಿಯನ್ನು ಕದ್ದು ಅವರನ್ನು ಮೋಸ ಗೊಳಿಸುತ್ತಿದ್ದ ಅಪ್ಲಿಕೇಷನ್ ಗಳನ್ನು ಇದೀಗ ಗೂಗಲ್ (Google) ನಿಷೇಧಿಸಿದೆ. ಈ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ನಿಷೇಧಿಸಲಾಗಿದೆ.
ನಿಷೇಧಿತ ಆಪ್‌ಗಳ ಹೆಸರುಗಳು:-
* ಮ್ಯಾಜಿಕ್ ಫೋಟೋ ಲ್ಯಾಬ್ - ಫೋಟೊ ಎಡಿಟರ್
* ಬ್ಲೆಂಡರ್ ಫೋಟೋ ಎಡಿಟರ್ - ಈಸಿ ಫೋಟೋ ಬ್ಯಾಕ್‌ಗ್ರೌಂಡ್ ಎಡಿಟರ್ ಮತ್ತು
* ಪಿಕ್ಸ್ ಫೋಟೋ ಮೋಷನ್ ಎಡಿಟ್ 2021.
ಇದನ್ನೂ ಓದಿ- Whatsapp Chat Backup 100%ನಲ್ಲಿ ಸಿಲುಕಿಕೊಳ್ಳುತ್ತಿದೆಯೇ? ಈ ರೀತಿ ಸಮಸ್ಯೆ ಪರಿಹರಿಸಿ
Google ನಿಂದ ನಿಷೇಧಿಸಲ್ಪಟ್ಟ ಈ ಅಪ್ಲಿಕೇಶನ್‌ಗಳಿಂದ ಸುರಕ್ಷಿತವಾಗಿರುವುದು ಹೇಗೆ?
ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿರುವ ಬಳಕೆದಾರರು ಅವುಗಳನ್ನು ತಮ್ಮ ಫೋನ್‌ಗಳಿಂದ ಹಸ್ತಚಾಲಿತವಾಗಿ ತೆಗೆದುಹಾಕಬೇಕು ಮತ್ತು ಅವರ ಫೇಸ್‌ಬುಕ್ ಲಾಗಿನ್ ವಿವರಗಳನ್ನು ಸಹ ಬದಲಾಯಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ