New Mobile Portability Rule - ಇನ್ಮುಂದೆ ಕೇವಲ 1 ರೂ.ಗಳಲ್ಲಿ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಿ, ಹೊಸ ನಿಯಮದ ಮಾಹಿತಿ ಇಲ್ಲಿದೆ

New Mobile Portability Rule - ಈ ಮೊದಲು ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಬಳಕೆದಾರರಿಗೆ ದೀರ್ಘ ಪ್ರಕ್ರಿಯೆ ಅನುಸರಿಸಬೇಕಾಗುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರದ ಹೊಸ ನಿರ್ಣಯದ ಬಳಿಕ ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಬಹುದು. ಇದಕ್ಕಾಗಿ ನೀವು ಕೇವಲ 1 ರೂ. ಮಾತ್ರ ಪಾವತಿಸಬೇಕಾಗಲಿದೆ.

Written by - Nitin Tabib | Last Updated : Sep 20, 2021, 03:09 PM IST
  • ಮೊಬೈಲ್ ಬಳಕೆದಾರರಿಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
  • ಮೊಬೈಲ್ ಸಂಪರ್ಕ ಪಡೆಯುವ ಪ್ರಕ್ರಿಯೆ ಪೋರ್ಟೆಬಿಲಿಟಿ ಪ್ರಕ್ರಿಯೆಯನ್ನು ಮೋದಿ ಸರ್ಕಾರ ಸರಳೀಕೃತಗೊಳಿಸಿದೆ.
  • ಅಷ್ಟೇ ಅಲ್ಲ ಇದೀಗ ನೀವು ನಿಮ್ಮ ಸಂಖ್ಯೆಯನ್ನು ಪೋಸ್ಟ್-ಪೇಡ್ ನಿಂದ ಪ್ರೀಪೇಡ್ ಗೆ ಬದಲಾಯಿಸಲು ನೀವು ಹೊರಗೆ ಹೋಗಬೇಕಾಗಿಲ್ಲ.
New Mobile Portability Rule - ಇನ್ಮುಂದೆ ಕೇವಲ 1 ರೂ.ಗಳಲ್ಲಿ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಿ, ಹೊಸ ನಿಯಮದ ಮಾಹಿತಿ ಇಲ್ಲಿದೆ title=
New Mobile Portability Rule(File Photo)

New Mobile Portability Rule - ನವದೆಹಲಿ:  ಮೊಬೈಲ್ ಬಳಕೆದಾರರಿಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ವಾಸ್ತವವಾಗಿ, ಮೊಬೈಲ್ ಸಂಪರ್ಕಪಡೆಯುವ  ಪ್ರಕ್ರಿಯೆಯನ್ನು ಅಥವಾ ಅದನ್ನು ಪ್ರಿ-ಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ (How To Port MObile Number) ಅನ್ನು ಪ್ರಿ-ಪೇಯ್ಡ್ ಗೆ (Prepaid Number) ಬದಲಾಯಿಸುವ ಪ್ರಕ್ರಿಯೆಯನ್ನು ಮೋದಿ ಸರ್ಕಾರವು (Modi Government) ಬಹಳ ಸರಳೀಕೃತಗೊಳಿಸಿದೆ. ಅಷ್ಟೇ ಅಲ್ಲ ಇದೀಗ ನೀವು ನಿಮ್ಮ ಸಂಖ್ಯೆಯನ್ನು ಪೋಸ್ಟ್-ಪೇಡ್ (Postpaid Number) ನಿಂದ ಪ್ರೀಪೇಡ್ ಗೆ ಬದಲಾಯಿಸಲು ನೀವು ಹೊರಗೆ ಹೋಗಬೇಕಾಗಿಲ್ಲ. ಇದೀಗ ನೀವು ಮನೆಯಲ್ಲಿಯೇ ಕುಳಿತು ಎಲ್ಲಾ KYC ಕೆಲಸವನ್ನು ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಾಗಲಿದೆ. ಇದಕ್ಕಾಗಿ ನೀವು ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.

ಇದನ್ನೂ ಓದಿ-WhatsApp Updates: WhatsAppನಿಂದ ಶೀಘ್ರದಲ್ಲಿಯೇ ಈ ಅದ್ಭುತ ಹೊಸ ವಿಶಿಷ್ಟ ಬಿಡುಗಡೆ, ಬಳಕೆದಾರರು ಹೇಳಿದ್ದೇನು ?

ಮನೆಯಿಂದಲೇ KYC ಪ್ರಕ್ರಿಯೆ ಪೂರ್ಣಗೊಳಿಸಿ
ಇನ್ಮುಂದೆ ಮೊಬೈಲ್ ಬಳಕೆದಾರರು ತಮ್ಮ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ KYC ಮಾಹಿತಿಯನ್ನು ಪೂರ್ತಿಗೊಳಿಸಬಹುದು ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರದಲ್ಲಿ ಸ್ಪಷ್ಟಪಡ್ಸಿದಿದೆ. ಇನ್ನೊಂದೆಡೆ ಪ್ರೀಪೇಡ್ ನಿಂದ ಪೋಸ್ಟ್ ಪೇಡ್ ಗೆ ಮೈಗ್ರೆಟ್ ಆಗಲು ಹೊಸದಾಗಿ KYC ಸಲ್ಲಿಸುವ ಅವಶ್ಯಕತೆ ಕೂಡ ಇಲ್ಲ. ಅಂದರೆ, ಪದೇ ಪದೇ KYC ಪ್ರಕ್ರಿಯೆಯನ್ನು ಎದುರಿಸಬೇಕಾಗಿಲ್ಲ ಎಂದರ್ಥ.

ಇದನ್ನೂ ಓದಿ-Amazon Deal of the Day: ಇಂದು 5G Smartphones ಮೇಲೆ ಪಡೆಯಿರಿ ಬಂಪರ್ ರಿಯಾಯಿತಿ

ಸುದೀರ್ಘ ಪ್ರಕ್ರಿಯೆಯಿಂದ ನೆಮ್ಮದಿ
ಸರ್ಕಾರದ ಈ ನಿರ್ಧಾರದಿಂದ ಈ ಕೆಲಸಗಳಿಗಾಗಿ ದೀರ್ಘ ಪ್ರಕ್ರಿಯೆ ಅನುಸರಿಸಬೇಕಾದ ಗ್ರಾಹಕರಿಗೆ ಭಾರಿ ನೆಮ್ಮದಿಯೇ ಸಿಕ್ಕಂತಾಗಿದೆ. ಈ ಮೊದಲು ಇದ್ದ ಪ್ರಕ್ರಿಯೆಯಲ್ಲಿ ಹೊಸ ಪಾರ್ಮ್ ಭರ್ತಿ ಮಾಡುವುದರಿಂದ ಹಿಡಿದುಪೋರ್ಟ್ ಮಾಡಲು ದಾಖಲೆಗಳ ರೂಪದಲ್ಲಿ ಆಧಾರ್ ಸೇರಿದಂತೆ, ಫೋಟೋ ಹಾಗೂ ಸಿಗ್ನೇಚರ್ ಅವಶ್ಯಕತೆ ಬೀಳುತ್ತಿತ್ತು. ಇಂತಹ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳ (Telecom Companies) ವತಿಯಿಂದ ಡಿಜಿಟಲ್ KYC ಪ್ರಕ್ರಿಯೆ ನಡೆಯುತ್ತಿತ್ತು. ಈ ಪ್ರಕ್ರಿಯೆಯ ವೇಳೆ ಹಲವು ಬಾರಿ ತಪ್ಪಾದ ದಾಖಲೆಗಳು ಅಪ್ಲೋಡ್ ಆಗುತ್ತಿದ್ದವು ಹಾಗೂ KYC ಗಾಗಿ ಕಂಪನಿಗಳು ಪುನಃ ಗ್ರಾಹಕರನ್ನು ಸಂಪರ್ಕಿಸುತ್ತಿದ್ದವು. ಆದರೆ ಇದೀಗ ಈ ಎಲ್ಲಾ ಕೆಲಸ ಮನೆಯಿಂದಲೇ ನಡೆಯಲಿದೆ. 

ಇದನ್ನೂ ಓದಿ-WhatsApp: Group icon editor feature ಬಗ್ಗೆ ನಿಮಗೆಷ್ಟು ಗೊತ್ತು ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News