Share Tweets Directly On Snapchat: ಮೈಕ್ರೋಬ್ಲಾಗಿಂಗ್ ಸೈಟ್ Twitter ಇತ್ತೀಚೆಗಷ್ಟೇ ತನ್ನ ಬಳಕೆದಾರರಿಗಾಗಿ ಆಪ್ ನಲ್ಲಿ Tweet Fleets ಸೇರಿದಂತೆ ಹಲವು ವಿಶಿಷ್ಟಗಳನ್ನು ಪರಿಚಯಿಸಿದೆ. Tweet Fleets ವೈಶಿಷ್ಟ್ಯದ ಮೂಲಕ 24ಗಂಟೆಗಳಲ್ಲಿ ಟ್ವೀಟ್ ಮಾಡಲಾಗಿರುವ ಭಾವಚಿತ್ರ ಅಥವಾ ವಿಡಿಯೋ ಸ್ವಯಂಚಾಲಿತವಾಗಿ ಕಣ್ಮರೆ ಆಗಲಿವೆ. Facebook, Instagram Story ಹಾಗೂ WhatsAppನ ಸ್ಟೇಟಸ್ ರೀತಿಯಲ್ಲೇ Twitter ನಲ್ಲಿಯೂ ಕೂಡ ಫೋಟೋ ಹಾಗೂ ವಿಡಿಯೋಗಳು ಕಣ್ಮರೆಯಾಗಲಿವೆ. ಇದೀಗ ಟ್ವಿಟ್ಟರ್ ತನ್ನ ಬಳಕೆದಾರರಿಗೆ ಫೋಟೋ ಹಂಚಿಕೆಯ ಆಪ್ ಆಗಿರುವ Snapchat ಮೇಲೆ ನೇರವಾಗಿ tweet ಗಳನ್ನೂ ಹಂಚಿಕೊಳ್ಳುವ ಅನುಮತಿ ನೀಡಿದೆ. ಹೀಗಾಗಿ ಇನ್ಮುಂದೆ ಬಳಕೆದಾರರು ಸ್ನಾಪ್ ಚಾಟ್ ಮೇಲೆ ಟ್ವೀಟ್ ಸ್ಕ್ರೀನ್ ಶಾಟ್ ಹಂಚಿಕೊಳ್ಳುವ ಅವಶ್ಯಕತೆ ಇರುವದಿಲ್ಲ.
ಪಬ್ಲಿಕ್ ಟ್ವೀಟ್ ಗಳ ಮೇಲೆ ಸಿಗಲಿದೆ ಈ ಸೌಕರ್ಯ
ವರದಿಯ ಪ್ರಕಾರ, ಪ್ರಸ್ತುತ ಈ ವೈಶಿಷ್ಟ್ಯವು ಐಒಎಸ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ ಮತ್ತು ಶೀಘ್ರದಲ್ಲೇ ಕಂಪನಿಯು ಆಂಡ್ರಾಯ್ಡ್ ಬಳಕೆದಾರರಿಗೆ ಇದನ್ನು ನೀಡಲಿದೆ ಎನ್ನಲಾಗಿದೆ. ಆದರೆ, ಸಾರ್ವಜನಿಕ ಟ್ವೀಟ್ನಲ್ಲಿ ಶೇರ್ ಬಟನ್ ಒತ್ತುವ ಮೂಲಕ, ಬಳಕೆದಾರರು ಸ್ನ್ಯಾಪ್ಚಾಟ್ನಲ್ಲಿ ಟ್ವೀಟ್ ಹಂಚಿಕೊಳ್ಳುವ ಆಯ್ಕೆಯನ್ನು ಪಡೆಯಲಿದ್ದಾರೆ. ಖಾಸಗಿ ಟ್ವೀಟ್ನಲ್ಲಿ ಈ ಆಯ್ಕೆಯು ಸಿಗುವುದಿಲ್ಲ.
ಇದನ್ನು ಓದಿ- Twitter ಗೆ ಟಕ್ಕರ್ ನೀಡಲು ಬಂದ ದೇಶಿ ಪ್ಲಾಟ್ಫಾರ್ಮ್ Tooter, ಖಾತೆ ತೆರೆದ Modi, ಅಮಿತ್ ಷಾ
ಶೀಘ್ರದಲ್ಲಿ ಇನ್ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿಯೂ ಕೂಡ ಟ್ವೀಟ್ ಹಂಚಿಕೊಳ್ಳಬಹುದು
ವರದಿಯ ಪ್ರಕಾರ, ಬಳಕೆದಾರರು ಟ್ವೀಟ್ನ ಸ್ನ್ಯಾಪ್ ಅನ್ನು ತಯಾರಿಸಿ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಇದಲ್ಲದೆ, ಬಳಕೆದಾರರು ಸ್ನ್ಯಾಪ್ಚಾಟ್ನಲ್ಲಿನ ತಮ್ಮ ಕಥೆಗೂ ಕೂಡ ಟ್ವೀಟ್ಗಳನ್ನು ಸೇರಿಸಬಹುದು. ಅಷ್ಟೇ ಅಲ್ಲ ಐಒಎಸ್ ಬಳಕೆದಾರರು ಗ್ರೂಪ್ ಇನ್ಸ್ಟಾಗ್ರಾಮ್ ಸ್ಟೋರೀಸ್ ಮೇಲೆ ಟ್ವೀಟ್ಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ ಮತ್ತು ಅದನ್ನು ಆದಷ್ಟು ಬೇಗ ಆಂಡ್ರಾಯ್ಡ್ ಬಳಕೆದಾರರಿಗೂ ಕೂಡ ಬಿಡುಗಡೆ ಮಾಡಲಾಗುವುದು ಎಂದು ಟ್ವಿಟರ್ ಹೇಳಿಕೊಂಡಿದೆ.
ಇದನ್ನು ಓದಿ- ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ?
ಥ್ರೆಡೆಡ್ ರಿಪ್ಲೈ ಬಂದ್ ಮಾಡಲಾಗಿದೆ
ಕೆಲ ದಿನಗಳ ಹಿಂದೆಯಷ್ಟೇ ಟ್ವಿಟ್ಟರ್ ಥ್ರೆಡೆಡ್ ರಿಪ್ಲೈ ಪರೀಕ್ಷೆಯನ್ನು ಆರಂಭಿಸಿತ್ತು. ಆದರೆ, ಬಳಕೆದಾರರಿಗೆ ಇದರಿಂದ ಟ್ವೀಟ್ ಗಳನ್ನು ಓದಲು ಆಗುತ್ತಿರುವ ತೊಂದರೆಯನ್ನು ಪರಿಗಣಿಸಿ ಅದನ್ನು ಮೊಟಕುಗೊಳಿಸಿತ್ತು. ಅದಲ್ಲದೆ ಬಳಕೆದಾರರಿಂದಲೂ ಕೂಡ ಟ್ವಿಟ್ಟರ್ ನ ಈ ವೈಶಿಷ್ಟ್ಯಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಹೀಗಾಗಿ ಟ್ವಿಟ್ಟರ್ (Twitter) ಅದನ್ನು ಬಂದ್ ಮಾಡುವ ನಿರ್ಣಯ ಕೈಗೊಂಡಿದೆ.