Ola Electric Update: ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾದ ಓಲಾ ಎಲೆಕ್ಟ್ರಿಕ್!

Ola Electric Update: ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಚಾರ್ಜರ್‌ ವೆಚ್ಚವನ್ನು ಮರುಪಾವತಿಸುತ್ತಿರುವುದಾಗಿ ಘೋಷಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ ಎಂದು ಕಂಪನಿಯು ಟ್ವಿಟರ್‌ನಲ್ಲಿ ಹೇಳಿಕೆ ನೀಡಿದೆ.  

Written by - Nitin Tabib | Last Updated : May 4, 2023, 02:29 PM IST
  • ಈ ಹಂತವು EV ಕ್ರಾಂತಿಯ ಕಡೆಗೆ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುತ್ತದೆ,
  • ಇದರ ಜೊತೆಗೆ ಗ್ರಾಹಕರ ವಿಶ್ವಾಸವನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿದೆ.
  • ಆದರೆ, ಎಷ್ಟು ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂಬುದನ್ನು ಓಲಾ ತಿಳಿಸಿಲ್ಲ.
  • ಈ ಹಿಂದೆ ಕೆಲವು ಮಾಧ್ಯಮಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ, ಈ ಮೊತ್ತ ಸುಮಾರು 130 ಕೋಟಿ ಗಳಷ್ಟಾಗಿದೆ ಎಂದು ವರದಿ ಮಾಡಿದ್ದವು.
Ola Electric Update: ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾದ ಓಲಾ ಎಲೆಕ್ಟ್ರಿಕ್! title=

Ola Electric Latest News:  ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಚಾರ್ಜರ್‌ನ ವೆಚ್ಚವನ್ನು ಮರುಪಾವತಿಸುವುದಾಗಿ ಘೋಷಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ ಎಂದು ಕಂಪನಿಯು ಟ್ವಿಟರ್‌ನಲ್ಲಿ ಹೇಳಿಕೊಂಡಿದೆ. ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಓಲಾ,  “ಉದ್ಯಮ ಪ್ರಮುಖ ಸಂಸ್ಥೆಯಾಗಿ, ನಾವು ನಮ್ಮ ಗ್ರಾಹಕರಿಗೆ ಮೊದಲ ಆದ್ಯತೆ ನೀಡುತ್ತೇವೆ. ಆದ್ದರಿಂದ, ಇತರ ವಿಷಯಗಳನ್ನು ಬದಿಗಿಟ್ಟು, ಎಲ್ಲಾ ಅರ್ಹ ಗ್ರಾಹಕರಿಗೆ ಚಾರ್ಜರ್ ಹಣವನ್ನು ಮರುಪಾವತಿಸಲು ನಾವು ನಿರ್ಧರಿಸಿದ್ದೇವೆ" ಎಂದು ಹೇಳಿದೆ.

ಈ ಹಂತವು EV ಕ್ರಾಂತಿಯ ಕಡೆಗೆ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುತ್ತದೆ, ಇದರ ಜೊತೆಗೆ ಗ್ರಾಹಕರ ವಿಶ್ವಾಸವನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿದೆ. ಆದರೆ, ಎಷ್ಟು ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂಬುದನ್ನು ಓಲಾ ತಿಳಿಸಿಲ್ಲ. ಈ ಹಿಂದೆ ಕೆಲವು ಮಾಧ್ಯಮಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ, ಈ ಮೊತ್ತ ಸುಮಾರು 130 ಕೋಟಿ ಗಳಷ್ಟಾಗಿದೆ ಎಂದು ವರದಿ ಮಾಡಿದ್ದವು. 

ಮಾರ್ಚ್‌ನಲ್ಲಿ ಈ ದೊಡ್ಡ ಘೋಷಣೆ ಮೊಳಗಿಸಲಾಗಿತ್ತು
ಮಾರ್ಚ್‌ನಲ್ಲಿ, ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗೆ ಓಲಾ ಎಸ್1 ಸ್ಕೂಟರ್‌ನ ಮುಂಭಾಗದ ಫೋರ್ಕ್ ಆರ್ಮ್ ಅನ್ನು ಉಚಿತ-ವೆಚ್ಚದಲ್ಲಿ ಬದಲಿಸುವ ಆಯ್ಕೆಯನ್ನು ನೀಡುತ್ತಿದೆ ಎಂದು ಘೋಷಿಸಿತ್ತು. ವಾಸ್ತವದಲ್ಲಿ, ಅನೇಕ ಗ್ರಾಹಕರು ಸ್ಕೂಟರ್‌ನ ಮುಂಭಾಗದ ಫೋರ್ಕ್ ಆರ್ಮ್‌ನ ಸಮಸ್ಯೆಗಳ ಬಗ್ಗೆ ದೂರುಗಳನ್ನು ನೀಡಿದ್ದರು, ಇದನ್ನೇ ಪರಿಗಣಿಸಿ ಕಂಪನಿ ಈ ನಿರ್ಧಾರ ಕೈಗೊಂಡಿತ್ತು.

ಇದನ್ನೂ ಓದಿ-DA Hike: ಶೇ.45ಕ್ಕೆ ತಲುಪಿದ ತುಟ್ಟಿಭತ್ಯೆ, ಸರ್ಕಾರಿ ನೌಕರರಿಗೊಂದು ಭರ್ಜರಿ ಸುದ್ದಿ!

ಇದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು S1 ಗ್ರಾಹಕರಿಗೆ ಸ್ಕೂಟರ್‌ನ ಮುಂಭಾಗದ ಫೋರ್ಕ್ ಆರ್ಮ್ ಅನ್ನು ಬದಲಾಯಿಸುವ ಆಯ್ಕೆಯನ್ನು ನೀಡಿದೆ. ಆದಾಗ್ಯೂ, ಕಂಪನಿಯು S1 (Ola S1) ನ ಮುಂಭಾಗದ ಫೋರ್ಕ್ ಆರ್ಮ್‌ನ ಸುರಕ್ಷತಾ ಕಾಳಜಿಗಳನ್ನು 'ಆಧಾರರಹಿತ' ಎಂದು ಹೇಳಿದೆ.  ಆದರೂ ಕೂಡ ಕಂಪನಿ ಗ್ರಾಹಕರಿಗೆ ತಮ್ಮ ಸ್ಕೂಟರ್‌ ಗೆ ಹೊಸ ಮುಂಭಾಗದ ಫೋರ್ಕ್‌ಗಳಿಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಿತ್ತು.

ಇದನ್ನೂ ಓದಿ-New Bike Launch! ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಅಗ್ಗದ ಬೈಕ್ ಉಡುಗೊರೆ ನೀಡಲಿದೆ ಹೀರೋ, ಸ್ಪೋರ್ಟಿ ಲುಕ್ ಜೊತೆಗೆ ಅತ್ಯುತ್ತಮ ಮೈಲೇಜ್!

ಓಲಾ ಎಲೆಕ್ಟ್ರಿಕ್ ಪ್ರಕಾರ, ಇದು ಸ್ಕೂಟರ್ ಅನ್ನು ಹೆಚ್ಚು ಬಾಳಿಕೆ ಬರುವಂತೆ ಮತ್ತು ಹೆಚ್ಚು ದೃಢವಾಗಿಸಲು "ನಿರಂತರ ಇಂಜಿನಿಯರಿಂಗ್ ಮತ್ತು ವಿನ್ಯಾಸ ಸುಧಾರಣೆ ಪ್ರಕ್ರಿಯೆ" ಯ ಭಾಗವಾಗಿದೆ ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News