ಇಂದು ಬಿಡುಗಡೆಯಾಗುತ್ತಿದೆ OnePlus 12 ಸಿರೀಸ್ !ಏನಿರಲಿದೆ ಇದರ ವೈಶಿಷ್ಟ್ಯ?

OnePlus ನ ಲಾಂಚ್ ಕಾರ್ಯಕ್ರಮವು ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ. ಟಿಕೆಟ್‌ ಹೊಂದಿದ್ದರೆ ಈವೆಂಟ್ ನೇರವಾಗಿ ವೀಕ್ಷಿಸಬಹುದು. ಇಲ್ಲವಾದರೆ  ಯೂಟ್ಯೂಬ್‌ನಲ್ಲಿ ಲೈವ್ ಆಗಿ ಲಾಂಚಿಂಗ್ ಇವೆಂಟ್ ಅನ್ನು ವೀಕ್ಷಿಸಬಹುದು. 

Written by - Ranjitha R K | Last Updated : Jan 23, 2024, 01:18 PM IST
  • ಕೆಲವೇ ಗಂಟೆಗಳಲ್ಲಿOnePlus ನ ವರ್ಷದ ಮೊದಲ ಬಿಡುಗಡೆ ಕಾರ್ಯಕ್ರಮ
  • ಇದು ಭಾರತದಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.
  • ಲಾಂಚ್ ಕಾರ್ಯಕ್ರಮವು ಸಂಜೆ 7:30 ಕ್ಕೆ ಪ್ರಾರಂಭವಾಗುತ್ತದೆ.
ಇಂದು ಬಿಡುಗಡೆಯಾಗುತ್ತಿದೆ OnePlus 12 ಸಿರೀಸ್ !ಏನಿರಲಿದೆ ಇದರ ವೈಶಿಷ್ಟ್ಯ? title=

ಬೆಂಗಳೂರು : OnePlus ನ ವರ್ಷದ ಮೊದಲ ಬಿಡುಗಡೆ ಕಾರ್ಯಕ್ರಮವು ಕೆಲವೇ ಗಂಟೆಗಳಲ್ಲಿ ನಡೆಯಲಿದೆ. ಈವೆಂಟ್ ಅನ್ನು "ಸ್ಮೂತ್ ಬಿಯಾಂಡ್ ಬಿಲೀಫ್" ಎಂದು ಹೆಸರಿಸಲಾಗಿದೆ. ಇದು ಭಾರತದಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮವು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿದೆ. ಅಲ್ಲಿ ಕಂಪನಿಯು OnePlus 12, OnePlus 12R ಮತ್ತು OnePlus ಬಡ್ಸ್ 3 ಅನ್ನು ಪ್ರಾರಂಭಿಸುತ್ತದೆ.

OnePlus ನ ಲಾಂಚ್ ಕಾರ್ಯಕ್ರಮವು ಸಂಜೆ 7:30 ಕ್ಕೆ ಪ್ರಾರಂಭವಾಗುತ್ತದೆ. ಟಿಕೆಟ್‌ ಹೊಂದಿದ್ದರೆ ಈವೆಂಟ್ ನೇರವಾಗಿ ವೀಕ್ಷಿಸಬಹುದು. ಇಲ್ಲವಾದರೆ  ಯೂಟ್ಯೂಬ್‌ನಲ್ಲಿ ಲೈವ್ ಆಗಿ ಲಾಂಚಿಂಗ್ ಇವೆಂಟ್ ಅನ್ನು ವೀಕ್ಷಿಸಬಹುದು. 

ಇದನ್ನೂ ಓದಿ : Smartphone Hang Problem: ಪದೇ ಪದೇ ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ

OnePlus 12 ಬಿಡುಗಡೆ ಕಾರ್ಯಕ್ರಮ :
ಇಂದು ನಡೆಯಲಿರುವ OnePlusನ ಬಿಡುಗಡೆ ಕಾರ್ಯಕ್ರಮದ ಸ್ಟಾರ್ಸ್ ಅಂದರೆ  OnePlus 12 ಮತ್ತು OnePlus 12R ಎರಡು ಹೊಸ ಸೂಪರ್ ಫೋನ್‌ಗಳು.  OnePlus 12 ವೇಗವಾದ ಹೊಸ Snapdragon 8 Gen 3 ಪ್ರೊಸೆಸರ್ ಅನ್ನು ಹೊಂದಿದ್ದರೆ, OnePlus 12R ಶಕ್ತಿಯುತ Snapdragon 8 Gen 2 ಅನ್ನು ಸಹ ಪಡೆಯುತ್ತದೆ. 

OnePlus 12 ಅದರ ಹಿಂದಿನ ಫೋನ್‌ಗಿಂತ ಉತ್ತಮವಾಗಿರುತ್ತದೆ. ಇದು 4th ಜನರೇಶನ್ ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾ ಸಿಸ್ಟಮ್, 5,500 mAh ಬ್ಯಾಟರಿ, ವೈರ್‌ಲೆಸ್ ಚಾರ್ಜಿಂಗ್ ಮತ್ತು 2K ರೆಸಲ್ಯೂಶನ್‌ನೊಂದಿಗೆ AMOLED ಸ್ಕ್ರೀನ್ ನಂಥಹ  ಅನೇಕ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದು 120Hz ರಿಫ್ರೆಶ್ ರೇಟ್ ನೊಂದಿಗೆ  ಸ್ಮೂತ್ ಅನುಭವವನ್ನು ನೀಡುತ್ತದೆ.ಇದಲ್ಲದೆ OnePlus 12 ನಾಲ್ಕು ವರ್ಷಗಳವರೆಗೆ ಪ್ರಮುಖ ಸಾಫ್ಟ್‌ವೇರ್ ಅಪ್ಡೇಟ್ ಅನ್ನು ಪಡೆಯುತ್ತದೆ.

ಇದನ್ನೂ ಓದಿ : Cheapest Recharge Plan: ಜಿಯೋ ಗ್ರಾಹಕರಿಗೊಂದು ಸಂತಸದ ಸುದ್ದಿ, ಕೇವಲ ರೂ.19 ಮತ್ತು ರೂ.29 ಗ್ರಾಹಕರಿಗೆ ಸಿಗಲಿವೆ ಈ ಲಾಭಗಳು

ಈ ಬದಲಾವಣೆಗಳು OnePlus 12R ನಲ್ಲಿ ಕಂಡುಬರುತ್ತವೆ : 
OnePlus 12Rನಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಈಗ ಮೆಟಲ್ ಫ್ರೇಮ್ ಅನ್ನು ನೀಡಲಾಗಿದೆ. ಇದು OnePlus 12 ರಂತೆ ಸ್ಟ್ರಾಂಗ್  ಮತ್ತು ಸುಂದರವಾಗಿರುತ್ತದೆ. ಅಲ್ಲದೆ, ಬಡ್ಸ್ 3 ಇಯರ್‌ಬಡ್‌ಗಳು ಹಿಂದಿನ ಮಾದರಿಯಾದ OnePlus ಬಡ್ಸ್ 2 ಪ್ರೊಗಿಂತ ಉತ್ತಮವಾದ ಧ್ವನಿ ಹೊಂದಿರುವ ನಿರೀಕ್ಷೆ ಇದೆ. OnePlus ತನ್ನ  ಸೆಕೆಂಡ್ ಜನರೇಶನ್ ಸ್ಮಾರ್ಟ್‌ವಾಚ್ ಅನ್ನು ಸಹ  ಬಿಡುಗಡೆ ಮಾಡಬಹುದು ಎಂದು ಮೂಲಗಳು ಹೇಳುತ್ತಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News