ಯುವಕರೆ ಗಮನಿಸಿ, ನಿಮಗೆ ಇಷ್ಟವಾಗುವ ಪವರ್ ಫುಲ್ ಬೈಕ್​ಗಳು ಇಲ್ಲಿವೆ ನೋಡಿ!

00cc ನಿಂದ 400cc ವರೆಗಿನ ಎಂಜಿನ್‌ಗಳೊಂದಿಗೆ ಬರುವ ಐದು ಬೈಕ್ ಗಳ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ.

Written by - Channabasava A Kashinakunti | Last Updated : Nov 18, 2022, 04:40 PM IST
  • ಯುವಕರು ಶಕ್ತಿಶಾಲಿ, ಸ್ಟ್ಯಲಿಶ್ಟ್ ಬೈಕ್ ಇಷ್ಟಪಡುತ್ತಾರೆ
  • ಕೆಲವು ಶಕ್ತಿಶಾಲಿ ಬೈಕ್‌ಗಳ ಬಗ್ಗೆ ಮಾಹಿತಿ ತಂದಿದ್ದೇವೆ
  • 300cc ನಿಂದ 400cc ವರೆಗಿನ ಎಂಜಿನ್‌ಗಳೊಂದಿಗೆ ಬರುವ ಐದು ಬೈಕ್
ಯುವಕರೆ ಗಮನಿಸಿ, ನಿಮಗೆ ಇಷ್ಟವಾಗುವ ಪವರ್ ಫುಲ್ ಬೈಕ್​ಗಳು ಇಲ್ಲಿವೆ ನೋಡಿ! title=

Powerful Bikes : ಯುವಕರು ಶಕ್ತಿಶಾಲಿ, ಸ್ಟ್ಯಲಿಶ್ಟ್ ಬೈಕ್ ಇಷ್ಟಪಡುತ್ತಾರೆ. ಇಂದು ನಾವು ಅಂತಹ ಕೆಲವು ಶಕ್ತಿಶಾಲಿ ಬೈಕ್‌ಗಳ ಬಗ್ಗೆ ಮಾಹಿತಿ ತಂದಿದ್ದೇವೆ. 300cc ನಿಂದ 400cc ವರೆಗಿನ ಎಂಜಿನ್‌ಗಳೊಂದಿಗೆ ಬರುವ ಐದು ಬೈಕ್ ಗಳ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ.

ಜಾವಾ 42 ರಲ್ಲಿ 294.72 ಸಿಸಿ ಎಂಜಿನ್ ಲಭ್ಯವಿದೆ. ಈ ಎಂಜಿನ್ 20.1kW ಪವರ್ ಮತ್ತು 26.84Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಂಪನಿಯು ತನ್ನ ಬಾಬರ್ ಮಾದರಿಯನ್ನು ಸಹ ಬಿಡುಗಡೆ ಮಾಡಿದೆ. ಬೈಕ್ 30kmpl ಗಿಂತ ಹೆಚ್ಚು ಮೈಲೇಜ್ ನೀಡಬಲ್ಲದು. ಇದರ ವ್ಹೀಲ್ ಬೇಸ್ 1369 ಎಂಎಂ.

Powerful Bikes

ಹೋಂಡಾ H'ness CB350 348.36 cc ಎಂಜಿನ್‌ನೊಂದಿಗೆ ಬರುತ್ತದೆ, ಇದು 15.5 kwh ಪವರ್ ಮತ್ತು 30Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 15 ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ ಬರುತ್ತದೆ. ಬೈಕು 30 kmpl ಗಿಂತ ಹೆಚ್ಚು ಮೈಲೇಜ್ ನೀಡಬಲ್ಲದು.

Powerful Bikes

Yezdi Adventure ಲಾಂಗ್ ಜರ್ನಿಗೆ ಹೆಚ್ಚು ಉತ್ತಮವಾಗಿದೆ. Yezdi Adventure 334cc ಎಂಜಿನ್‌ ಹೊಂದಿದೆ, ಇದು 22.29 kwh ಪವರ್ ಮತ್ತು 29.84Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 30 kmpl ಗಿಂತಲೂ ಹೆಚ್ಚಿನ ಮೈಲೇಜ್ ಅನ್ನು ಸಹ ನೀಡುತ್ತದೆ.

Powerful Bikes

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಒಂದು ಶಕ್ತಿಶಾಲಿ ಬೈಕ್. ಇದು 349cc ಎಂಜಿನ್‌ನೊಂದಿಗೆ ಬರುತ್ತದೆ, ಇದು 20.2bhp ಪವರ್ ಮತ್ತು 27Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ 30kmpl ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತದೆ.

Powerful Bikes

ಬನೆಲ್ಲಿ ಇಂಪೀರಿಯಾಲ್ ಕ್ಲಾಸಿಕ್ ವಿನ್ಯಾಸದ ಬೈಕ್ ಆಗಿದೆ. ಇದು 374 cc ಎಂಜಿನ್ ಅನ್ನು ಪಡೆಯುತ್ತದೆ, ಇದು 21PS ಪವರ್ ಮತ್ತು 29Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 12 ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ ಬರುತ್ತದೆ. ಈ ಬೈಕ್ 30kmpl ಗಿಂತಲೂ ಹೆಚ್ಚು ಮೈಲೇಜ್ ನೀಡಬಲ್ಲದು.

Powerful Bikes

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News