ಕೇವಲ 11 ಸಾವಿರ ರೂಪಾಯಿಗೆ 5G Smartphone ಬಿಡುಗಡೆ ! ಧೂಳೆಬ್ಬಿಸುತ್ತಿದೆ Redmi 12 5G

 Redmi 12 5G 4GB RAM+128GB ಸ್ಟೋರೇಜ್ ವೆರಿಯೇಂಟ್ ಅನ್ನು ಬಿಡುಗಡೆ ಮಾಡಿದೆ. ಇದು ಅತ್ಯಂತ ಅಗ್ಗದ 5G ಫೋನ್ ಎನ್ನಬಹುದು. 

Written by - Ranjitha R K | Last Updated : Aug 22, 2023, 12:19 PM IST
  • Redmi 12 5G ಬಿಡುಗಡೆ
  • ಭಾರತದಲ್ಲಿ Redmi 12 5G ಬೆಲೆ
  • Redmi 12 5G ಬ್ಯಾಟರಿ
ಕೇವಲ 11 ಸಾವಿರ ರೂಪಾಯಿಗೆ 5G Smartphone ಬಿಡುಗಡೆ !  ಧೂಳೆಬ್ಬಿಸುತ್ತಿದೆ Redmi 12 5G title=

ಬೆಂಗಳೂರು : Redmi 12 5G ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಇತ್ತೀಚೆಗೆ ಕಂಪನಿಯು ಈ ಫೋನ್ ಅನ್ನು ಚೀನಾದಲ್ಲಿ ಪರಿಚಯಿಸಲಾಗಿದೆ. ಫೋನ್ 90Hz LCD ಡಿಸ್ಪ್ಲೇ, Qualcomm Snapdragon 4 Gen 2 ಚಿಪ್ ನೊಂದಿಗೆ ಬರುತ್ತದೆ. ಇಂದು ಕಂಪನಿಯು ಫೋನ್‌ನ 4GB RAM+128GB ಸ್ಟೋರೇಜ್ ವೆರಿಯೇಂಟ್ ಅನ್ನು ಬಿಡುಗಡೆ ಮಾಡಿದೆ. ಇದು ಅತ್ಯಂತ ಅಗ್ಗದ 5G ಫೋನ್ ಎನ್ನಬಹುದು. ಕಡಿಮೆ ಬೆಲೆಯ ಈ ಫೋನ್ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.  

ಭಾರತದಲ್ಲಿ Redmi 12 5G ಬೆಲೆ : 
Xiaomi ಮಾಲ್‌ನಲ್ಲಿ Redmi 12 5G (4GB+128GB) ಬೆಲೆ 949 ಯುವಾನ್ ಅಂದರೆ 10,800 ರೂಪಾಯಿ. ಚೀನಾದಲ್ಲಿ ಫೋನ್ ಹಲವು ರೂಪಾಂತರಗಳಲ್ಲಿ ಬರುತ್ತದೆ. 6GB + 128GB ರೂಪಾಂತರದ ಬೆಲೆ 999 ಯುವಾನ್ ಅಂದರೆ 11,215 ರೂ. 8GB + 128GB ಬೆಲೆ 1,099 ಯುವಾನ್ ಅಂದರೆ 12,461 ರೂಪಾಯಿ. 8GB + 256GB ಬೆಲೆ 1,299 ಯುವಾನ್ ಅಂದರೆ 14,953 ರೂಪಾಯಿ.  

ಇದನ್ನೂ ಓದಿ : ಎಚ್ಚರ! ಕಂಪ್ಯೂಟರ್ ಕೀಬೋರ್ಡ್ ಸದ್ದು ಕೇಳಿ ಪಾಸ್ವರ್ಡ್ ಪತ್ತೆಹಚ್ಚಿದ ಹ್ಯಾಕರ್! ಹೇಗೆ ಸಾಧ್ಯ ಅಂತೀರಾ?

Redmi 12 5G ಬ್ಯಾಟರಿ : 
ಫೋನ್ ಎರಡು ಬಣ್ಣಗಳಲ್ಲಿ ಬರುತ್ತದೆ. (ಗ್ಲೇಸಿಯರ್ ವೈಟ್ ಮತ್ತು ಸ್ಟಾರ್‌ಡಸ್ಟ್ ಗ್ರೇ). ಫೋನ್ ಸ್ಲೀಕ್ ಗ್ಲಾಸ್ ಬಾಡಿ  ಮತ್ತು ತೆಳ್ಳಗಿನ ಪ್ರೊಫೈಲ್ ನೊಂದಿಗೆ ಬರುತ್ತದೆ. ಇದು 8.17mm ಅಗಲ  6.79-ಇಂಚಿನ ಡಿಸ್ಪ್ಲೇ ಹೊಂದಿದೆ. Redmi 12 ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು LPDDR4X RAM ಮತ್ತು UFS 2.2 ಸ್ಟೋರೇಜ್ ನೊಂದಿಗೆ ಬರುತ್ತದೆ. ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪಡೆಯುತ್ತದೆ. 

Redmi 12 5G ಕ್ಯಾಮೆರಾ : 
Redmi 12 5G ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ.  ಇದರಲ್ಲಿ 50MP ಮೇನ್ ಕ್ಯಾಮೆರಾ ಮತ್ತು 2MP ಡೆಪ್ತ್-ಆಫ್-ಫೀಲ್ಡ್ ಲೆನ್ಸ್ ಲಭ್ಯವಿದೆ. ಫೋನ್ ರಿಮೋಟ್ ಕಂಟ್ರೋಲ್, ಅನುಕೂಲಕರ ಸೈಡ್ ಫಿಂಗರ್‌ಪ್ರಿಂಟ್ ಅನ್‌ಲಾಕಿಂಗ್, ಬಹುಮುಖ  ಮಲ್ಟಿ ಫುಂಕ್ಶನ್ NFC  ಸಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ : ಫ್ರಿಜ್ ಮತ್ತು ಗೋಡೆಯ ನಡುವಿನ ಅಂತರ ಎಷ್ಟಿರಬೇಕುಷ್ಟು?ನಿಮಗೆ ಗೊತ್ತಿರದ ಮಾಹಿತಿ ಇದು !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News