ಆರಾಮದಾಯಕ ನಿದ್ದೆಗಾಗಿ ತಕ್ಷಣ ಖರೀದಿಸಿ ಈ Smart Bed,ಬೆಲೆ ಕೂಡಾ ತೀರಾ ಕಡಿಮೆ

ನೀವು ಸ್ಮಾರ್ಟ್ ಬೆಡ್ ಬಗ್ಗೆ ಕೇಳಿದ್ದೀರಾ? ಇಲ್ಲದಿದ್ದರೆ ಇಂದು ನಾವು ಅದರ ಬಗ್ಗೆ  ಮಾಹಿತಿ ನೀಡಲಿದ್ದೇವೆ. ಇಂದಿನ ಯುಗದಲ್ಲಿ, ಅನೇಕ ಜನರು ಸ್ಮಾರ್ಟ್ ಹಾಸಿಗೆಗಳನ್ನು ಬಳಸುತ್ತಾರೆ.

Written by - Ranjitha R K | Last Updated : Aug 3, 2022, 10:54 AM IST
  • ಮನುಷ್ಯ ಆರೋಗ್ಯಕರವಾಗಿರಬೇಕಾದರೆ ನಿದ್ರೆ ಅತ್ಯಂತ ಮುಖ್ಯ.
  • ರಾತ್ರಿ ನಿದ್ದೆ ಸರಿಯಾಗಿ ಆದರೆ ದಿನವೂ ಚೆನ್ನಾಗಿ ಸಾಗುತ್ತದೆ.
  • ಆದರೆ ಇದಕ್ಕಾಗಿ ಉತ್ತಮ ಹಾಸಿಗೆಯ ಅಗತ್ಯವಿದೆ
ಆರಾಮದಾಯಕ ನಿದ್ದೆಗಾಗಿ ತಕ್ಷಣ ಖರೀದಿಸಿ ಈ Smart Bed,ಬೆಲೆ ಕೂಡಾ ತೀರಾ ಕಡಿಮೆ  title=
smart bed (file photo)

ಬೆಂಗಳೂರು : ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆಯಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಂತೆ ಇಲ್ಲದವರು ಯಾರಿದ್ದಾರೆ? ಆದರೆ ಮನುಷ್ಯ ಆರೋಗ್ಯಕರವಾಗಿರಬೇಕಾದರೆ ನಿದ್ರೆ ಅತ್ಯಂತ ಮುಖ್ಯ. ರಾತ್ರಿ ನಿದ್ದೆ ಸರಿಯಾಗಿ ಆದರೆ ದಿನವೂ ಚೆನ್ನಾಗಿ ಸಾಗುತ್ತದೆ. ಆದರೆ ಇದಕ್ಕಾಗಿ ಉತ್ತಮ ಹಾಸಿಗೆಯ ಅಗತ್ಯವಿದೆ. ನೀವು ಸ್ಮಾರ್ಟ್ ಬೆಡ್ ಬಗ್ಗೆ ಕೇಳಿದ್ದೀರಾ? ಇಲ್ಲ ಎಂದಾದರೆ ಆ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ಸ್ಮಾರ್ಟ್ ಹಾಸಿಗೆಗಳು ಬಹಳ ಕಡಿಮೆ ಸಮಯದಲ್ಲಿ ಜನಪ್ರಿಯವಾಗಿವೆ. ಈ ಸ್ಮಾರ್ಟ್ ಬೆಡ್‌ಗಳು ಸಮಯಕ್ಕೆ ಸರಿಯಾಗಿ ಎಚ್ಚರಗೊಳಿಸುವುದರಿಂದ  ಹಿಡಿದು ಅನೇಕ ಕೆಲಸಗಳನ್ನು ಮಾಡುತ್ತವೆ. 

ಸ್ಮಾರ್ಟ್ ಬೆಡ್ ಎಂದರೇನು? : 
ಸ್ಮಾರ್ಟ್ ಬೆಡ್‌ಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ರಿಕ್ಲೈನರ್‌ಗಳನ್ನು ಒದಗಿಸಲಾಗಿದೆ. ಅದರ ಮೇಲೆ ಕುಳಿತು ಅಥವಾ ಮಲಗಿ ನಿಮ್ಮ ಕೆಲಸವನ್ನು ಸುಲಭವಾಗಿ ಮಾಡಬಹುದು. ತಿನ್ನುವುದು, ಟಿವಿ ನೋಡುವುದು ಮುಂತಾದ ಕೆಲಸಗಳನ್ನು ಕೂಡಾ ಬಹಳ ಆರಾಮಾಗಿ ಮಾಡಬಹುದು.ಶೂನ್ಯ ಗುರುತ್ವಾಕರ್ಷಣೆ  ಸೇರಿದಂತೆ ಇದರಲ್ಲಿ ಹಲವು ಮೋಡ್ ಗಳನ್ನು ನೀಡಲಾಗಿದೆ. ಇದರಲ್ಲಿ ಆಂಟಿ ಸ್ನೋರ್ ಪೋಸಿಶನ್ ಎಂಬ ವೈಶಿಷ್ಟ್ಯವನ್ನು ನೀಡಲಾಗಿದೆ.  ಹಾಗಾಗಿ ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಕೂಡಾ ಸುಧಾರಿಸುತ್ತದೆ. ಈ ಹಾಸಿಗೆಗಳು 5 ವರ್ಷಗಳ ಖಾತರಿಯೊಂದಿಗೆ ಬರುತ್ತವೆ. ಮೋಟಾರ್ ವಾರಂಟಿ ಎರಡು ವರ್ಷಗಳವರೆಗೆ ಮತ್ತು ರಿಮೋಟ್ ವಾರಂಟಿ ಒಂದು ವರ್ಷಕ್ಕೆ ಲಭ್ಯವಿದೆ.

ಇದನ್ನೂ ಓದಿ : Moto G32: ಭಾರತೀಯ ಮಾರುಕಟ್ಟೆಗೆ ಮೊಟೊರೊಲಾದ ಹೊಸ ಸ್ಟೈಲಿಶ್ ಸ್ಮಾರ್ಟ್‌ಫೋನ್!

ಸ್ಲೀಪ್ ಕಂಪನಿ Elev8 ಸ್ಮಾರ್ಟ್ ಬೆಡ್ : 
ಸ್ಲೀಪ್ ಕಂಪನಿ Elev8 ಸ್ಮಾರ್ಟ್ ಬೆಡ್ ಪ್ರೀಮಿಯಂ ಸ್ಮಾರ್ಟ್ ಬೆಡ್ ಆಗಿದೆ. ಇದರ ಬೆಲೆ  80,990. ಆದರೆ Amazonನಲ್ಲಿ ಇದನ್ನು  46,999 ರೂಪಾಯಿಗೆ  ಖರೀದಿಸಬಹುದು. ಅಂದರೆ, ಅದನ್ನು ಅರ್ಧದಷ್ಟು ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ. EMIನಲ್ಲಿಯೂ ಈ ಸ್ಮಾರ್ಟ್ ಬೆಡ್ ಅನ್ನು ಖರೀದಿಸಬಹುದು.  ಇದಕ್ಕಾಗಿ ಪ್ರತಿ ತಿಂಗಳು 2,212 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ವ ಮೂಲಕ ಸ್ಲೀಪ್ ಕಂಪನಿ Elev8 ಸ್ಮಾರ್ಟ್ ಬೆಡ್ ಅನ್ನು ಪಡೆಯಬಹುದು.

ನಿಲ್ಕಮಲ್ ಮ್ಯಾಟ್ರಿಕ್ಸ್ ಸ್ಮಾರ್ಟ್ ಬೆಡ್‌:
ನಿಲ್ಕಮಲ್ ಮ್ಯಾಟ್ರಿಕ್ಸ್ ಸ್ಮಾರ್ಟ್ ಬೆಡ್‌ನ ಡಾಕ್ಟರ್ ಡ್ರೀಮ್ಸ್ ಕಸ್ಟಮೈಸ್ ಮಾಡಿದ ಆರಾಮದಾಯಕ ಬೆಡ್ ಆಗಿದೆ. ಇದರ ಬೆಲೆ 84,999 ರೂ. ಆದರೆ ಭಾರೀ ರಿಯಾಯಿತಿ ಮೂಲಕ ಇದನ್ನು 48,576 ರೂ. ಗೆ ಖರೀದಿಸಬಹುದು. EMI ಮೂಲಕ ಖರೀದಿಸಬೇಕಾದರೆ  ಪ್ರತಿ ತಿಂಗಳು 2,287 ರೂಪಾಯಿಗಳನ್ನು ಪಾವತಿಸಬೇಕು.

ಇದನ್ನೂ ಓದಿ : ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್- 3 ತಿಂಗಳ ಯೋಜನೆಯ ಬೆಲೆ ₹150ರಷ್ಟು ಇಳಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News