Telegram Premium ಸೇವೆ ಬಿಡುಗಡೆ, ಸಿಗಲಿವೆ ವಾಟ್ಸ್ ಆಪ್ ಗಿಂತ ಹಲವು ಜಬರ್ದಸ್ತ್ ವೈಶಿಷ್ಟ್ಯಗಳು

Telegram Premium ಸೇವೆ ಕೊನೆಗೂ ಬಿಡುಗಡೆಯಾಗಿದೆ. ವಾಟ್ಸ್ ಆಪ್ ಗಿಂತಲೂ ಹೆಚ್ಚು ಮತ್ತು ಸುಧಾರಿತ ವೈಶಿಷ್ಟ್ಯಗಳು ಇದರಲ್ಲಿ ಬಳಕೆದಾರರಿಗೆ ಸಿಗಲಿವೆ. ಪ್ರಸ್ತುತ ಈ ಸೇವಯನ್ನು ಕೇವಲ ಆಪಲ್ ಫೋನ್ ಬಳಕೆದಾರರಿಗಾಗಿ ಮಾತ್ರ ರೋಲೌಟ್ ಮಾಡಲಾಗಿದೆ. ಟೆಲಿಗ್ರಾಮ್ ಪ್ರೀಮಿಯಂನಲ್ಲಿ ಸಿಗುವ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jun 20, 2022, 01:04 PM IST
  • ಬಹುನಿರೀಕ್ಷಿತ ಟೆಲಿಗ್ರಾಮ್ ಪ್ರೀಮಿಯಂ ಸೇವೆ ಬಿಡುಗಡೆ
  • ವಾಟ್ಸ್ ಆಪ್ ಗಿಂತಲೂ ಹೆಚ್ಚು ಮತ್ತು ಸುಧಾರಿತ ವೈಶಿಷ್ಟ್ಯಗಳು ಇದರಲ್ಲಿವೆ.
  • ಟೆಲಿಗ್ರಾಮ್ ಪ್ರಿಮಿಯಂನ ಮಾಸಿಕ ಚಂದದಾರಿಕೆ ಶುಲ್ಕ ಎಷ್ಟು? ತಿಳಿಯಲು ಈ ವರದಿ ಓದಿ
Telegram Premium ಸೇವೆ ಬಿಡುಗಡೆ, ಸಿಗಲಿವೆ ವಾಟ್ಸ್ ಆಪ್ ಗಿಂತ ಹಲವು ಜಬರ್ದಸ್ತ್ ವೈಶಿಷ್ಟ್ಯಗಳು title=
Telegram Premium Launch

Telegram Premium: ವಾಟ್ಸ್ ಆಪ್ ನಂತೆಯೇ ಖ್ಯಾತಿ ಹೊಂದಿರುವ ತ್ವರಿತ ಸಂದೇಶ ರವಾನಿಸುವ ಅಪ್ಲಿಕೇಶನ್ ಟೆಲಿಗ್ರಾಮ್‌ನ ಪ್ರೀಮಿಯಂ ಸೇವೆಯನ್ನು ಪ್ರಾರಂಭಿಸಲಾಗಿದೆ. ಕಳೆದ ಕೆಲ ದಿನಗಳಿಂದ ಇದು ಭಾರಿ ಚರ್ಚೆಗೆ ಗ್ರಾಸವಾಗಿತು. ಕಂಪನಿಯು ಪ್ರಸ್ತುತ ಇದನ್ನು ಆಪಲ್ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಿದೆ. ಟೆಲಿಗ್ರಾಮ್ ಅಪ್ಲಿಕೇಶನ್‌ನ ಆಪ್ ಸ್ಟೋರ್ ಆವೃತ್ತಿ 8.8 ನೊಂದಿಗೆ ಬಳಕೆದಾರರು ಈ ಸೇವೆಯನ್ನು ಪಡೆಯಬಹುದಾಗಿದೆ. ಇದನ್ನು ಬಳಸಲು, ನೀವು ಪ್ರತಿ ತಿಂಗಳು $ 4.99 (ಸುಮಾರು ರೂ 388) ಪಾವತಿಸಬೇಕಾಗಲಿದೆ

ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಕಂಪನಿಯ ವತಿಯಿಂದ ಹಲವು ಹೊಸ ಮತ್ತು ಸುಧಾರಿತ ವೈಶಿಷ್ಟ್ಯಗಳು ಸಿಗಲಿವೆ. ಪ್ರೀಮಿಯಂ ಬಳಕೆದಾರರು ಈಗ 2GB ಬದಲಿಗೆ 4GB ಫೈಲ್‌ಗಳನ್ನು ಒಂದೇ ಬಾರಿಗೆ ಕಳುಹಿಸಲು ಸಾಧ್ಯವಾಗಲಿದೆ. WhatsApp ಇತ್ತೀಚೆಗೆ 2GB ಫೈಲ್ ಹಂಚಿಕೆ ವೈಶಿಷ್ಟ್ಯವನ್ನು ತನ್ನ ಬಳಕೆದಾರರಿಗೆ ಜಾರಿಗೊಳಿಸಿದೆ. ಇದಲ್ಲದೆ, ಯಾವುದೇ ವಿಷಯವನ್ನು ಮೊದಲಿಗಿಂತ ವೇಗವಾಗಿ ಡೌನ್‌ಲೋಡ್ ಮಾಡಬಹುದು (ಮೂಲ ಆವೃತ್ತಿ). ಬನ್ನಿ, ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಪ್ರೀಮಿಯಂ ಬಳಕೆದಾರರಿಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಸಿಗುವ ಪ್ರಯೋಜನಗಳು
- 4GB ವರೆಗೆ ಫೈಲ್‌ಗಳನ್ನು ಹಂಚಿಕೊಳ್ಳಬಹುದು.
- ಫೈಲ್ ಡೌನ್‌ಲೋಡ್ ವೇಗ ಹೆಚ್ಚಾಗಿರಲಿದೆ.
- ಒಂದೇ ಅಪ್ಲಿಕೇಶನ್‌ನೊಂದಿಗೆ 4 ಖಾತೆಗಳನ್ನು ಸಂಪರ್ಕಿಸಬಹುದು
- ಚಾಟ್‌ಗಳನ್ನು ವಿವಿಧ 20 ಫೋಲ್ಡರ್‌ಗಳಲ್ಲಿ ಆಯೋಜಿಸಬಹುದು.
- ನೀವು ಪ್ರತಿ ಫೋಲ್ಡರ್‌ನಲ್ಲಿ 200 ಚಾಟ್‌ಗಳನ್ನು ಉಳಿಸಬಹುದು.
- ಮುಖ್ಯ ಪಟ್ಟಿಯಲ್ಲಿ 10 ಚಾಟ್‌ಗಳನ್ನು ಪಿನ್ ಮಾಡಬಹುದು.
- 20 ಸಾರ್ವಜನಿಕ ಲಿಂಕ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗಲಿದೆ
- ನೀವು 10 ನೆಚ್ಚಿನ ಸ್ಟಿಕ್ಕರ್‌ಗಳು ಮತ್ತು 400 ನೆಚ್ಚಿನ GIF ಗಳನ್ನು ಉಳಿಸಬಹುದು.
- ಪ್ರೊಫೈಲ್ ಬಯೋದಲ್ಲಿನ ಪಠ್ಯದ ಮಿತಿ ಹೆಚ್ಚಿಸಲಾಗಿದೆ ಮತ್ತು ಲಿಂಕ್ ಅನ್ನು ನಮೂದಿಸುವ ಸ್ವಾತಂತ್ರ್ಯ ನೀಡಲಾಗಿದೆ.
- ಫೋಟೋ ಮತ್ತು ವೀಡಿಯೊಗಳಿಗಾಗಿ ದೀರ್ಘ ಶೀರ್ಷಿಕೆಗಳನ್ನು ಬರೆಯಬಹುದು.
- ಪ್ರೀಮಿಯಂ ಬಳಕೆದಾರರಿಗೆ ವಿಶೇಷ ಸ್ಟಿಕ್ಕರ್‌ಗಳು ಮತ್ತು ಪ್ರತಿಕ್ರಿಯೆ ವೈಶಿಷ್ಟ್ಯಗಳನ್ನು ನೀಡಲಾಗಿದೆ.
- ಪ್ರೊಫೈಲ್ ಮುಂದೆ ಪ್ರೀಮಿಯಂ ಬ್ಯಾಡ್ಜ್ ಲಭ್ಯವಿರಲಿದೆ
- ಪ್ರೊಫೈಲ್ ಫೋಟೋಗೆ ಇದೀಗ ವೀಡಿಯೊ ಬೆಂಬಲವನ್ನು ಕೂಡ ನೀಡಲಾಗಿದೆ.
- ಯಾವುದೇ ರೀತಿಯ ಜಾಹೀರಾತು ಕಾಣಿಸುವುದಿಲ್ಲ.
- ಇವೆಲ್ಲವುಗಳ ಜೊತೆಗೆ ನೀವು ಕಸ್ಟಮೈಸ್ ಮಾಡಿದ ಐಕಾನ್ ಅನ್ನು ಪಡೆಯುತ್ತೀರಿ. 

ಇದನ್ನೂ ಓದಿ-WhatsApp New Features : ಈಗ ವಾಟ್ಸಾಪ್‌ ಕಾಲ್ ನಲ್ಲಿರುವಾಗಲೂ ಈ ಕೆಲಸಗಳನ್ನು ಮಾಡಬಹುದು

ಒಂದು ತಿಂಗಳ ಕಾಲ ಟೆಲಿಗ್ರಾಮ್ ಪ್ರೀಮಿಯಂ ಸೇವೆಯನ್ನು ಬಳಸಲು, ಬಳಕೆದಾರರು ನೆಟ್‌ಫ್ಲಿಕ್ಸ್‌ಗಿಂತ ಎರಡು ಪಟ್ಟು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. OTT ಪ್ಲಾಟ್‌ಫಾರ್ಮ್‌ಗಳ ಮೊಬೈಲ್ ಆವೃತ್ತಿಯ ಮೂಲ ಯೋಜನೆಗಾಗಿ, ಬಳಕೆದಾರರು ತಿಂಗಳಿಗೆ 149 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ, ಟೆಲಿಗ್ರಾಮ್ ನಲ್ಲಿ ಬಳಕೆದಾರರು ಮೇಲೆ ನೀಡಲಾದ ಅನೇಕ ವಿಶಿಷ್ಟ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ, ಇದು ವ್ಯಾಪಾರದಲ್ಲಿ ನಿರತರಾಗಿರುವ ಯಾವುದೇ  ಬಳಕೆದಾರರಿಗೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ.

ಇದನ್ನೂ ಓದಿ-ಭೂಮಿಗೆ ಅಪ್ಪಳಿಸಲಿದೆ 600 KM /ಸೆಕೆಂಡ್ ವೇಗದಲ್ಲಿ ಚಲಿಸುವ ಸೌರ ಮಾರುತ .! GPS ಮೇಲೆ ಬೀರಲಿದೆ ನೇರ ಪರಿಣಾಮ

ವ್ಯಾಪಾರ ಖಾತೆ ಬಳಕೆದಾರರಿಗಾಗಿ WhatsApp ಸಹ ಪ್ರೀಮಿಯಂ ಚಂದಾದಾರಿಕೆ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ WhatsApp ತನ್ನ ಪ್ರೀಮಿಯಂ ಸೇವೆಯನ್ನು ಸಹ ಪ್ರಾರಂಭಿಸಬಹುದು. ಇದರಲ್ಲಿಯೂ ಸಹ, ಬಳಕೆದಾರರು ಮೂಲಭೂತ ಅಂದರೆ ಪ್ರಮಾಣಿತ ಬಳಕೆದಾರರಿಗೆ ಹೋಲಿಸಿದರೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಪಡೆಯಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

Trending News