Vi ಗ್ರಾಹಕರಿಗೆ 51 ರೂಪಾಯಿ ರೀಚಾರ್ಜ್ ನಲ್ಲಿ ಸಿಗಲಿದೆ Health insurance

Vi ಗ್ರಾಹಕರಿಗೆ ಒಂದು ಒಳ್ಳೆಯ ಸುದ್ದಿಯಿದೆ. 51 ರುಪಾಯಿಗಳ ರಿಚಾರ್ಜ್ ಮಾಡಿಸಿದರೆ ಆರೋಗ್ಯ ವಿಮೆಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಈ ಆರೋಗ್ಯ ವಿಮೆ ಕರೋನಾ ಚಿಕಿತ್ಸೆಯನ್ನು ಸಹಾ ಒಳಗೊಂಡಿದೆ. 

Written by - Ranjitha R K | Last Updated : Mar 3, 2021, 04:02 PM IST
  • Vi ಬಳಕೆದಾರರಿಗೆ ನೀಡುತ್ತಿದೆ ವಿಶೇಷ ಕೊಡುಗೆ
  • 51 ರೂಪಾಯಿಗಳ ರೀಚಾರ್ಜ್ ನಲ್ಲಿ ಸಿಗಲಿದೆ ಆರೋಗ್ಯ ವಿಮೆ
  • ಹೊಸ ರೀಚಾರ್ಜ್ ಯೋಜನೆಯ ಹೆಸರು Vi Hospicare
Vi ಗ್ರಾಹಕರಿಗೆ  51 ರೂಪಾಯಿ ರೀಚಾರ್ಜ್ ನಲ್ಲಿ ಸಿಗಲಿದೆ Health insurance title=
51 ರೂಪಾಯಿಗಳ ರೀಚಾರ್ಜ್ ನಲ್ಲಿ ಸಿಗಲಿದೆ ಆರೋಗ್ಯ ವಿಮೆ (file photo)

ನವದೆಹಲಿ : Vi ಬಳಕೆದಾರರಿಗೆ ಒಳ್ಳೆಯ ಸುದ್ದಿ ಬಂದಿದೆ. ಈಗ ಕೇವಲ 51 ರೂಪಾಯಿಗಳ ರೀಚಾರ್ಜ್ (Recharge) ಮೂಲಕ ಆರೋಗ್ಯ ವಿಮೆಯನ್ನು ಪಡೆಯಬಹುದು. ಅಂದರೆ, ಮೊಬೈಲ್ ರೀಚಾರ್ಜ್ ಮೂಲಕ ಆರೋಗ್ಯವನ್ನು ಸಹ ನೋಡಿಕೊಳ್ಳಬಹುದು. ಈ ಆರೋಗ್ಯ ವಿಮೆಯು (Health insurance) ಕರೋನಾ ವೈರಸ್ ಚಿಕಿತ್ಸೆಯನ್ನು ಸಹ ಒಳಗೊಂಡಿದೆ.

Vi ತನ್ನ ಗ್ರಾಹಕರನ್ನು ಸೆಳೆಯಲು ಈ  ಬಾರಿ ಸ್ವಲ್ಪ ವಿಭಿನ್ನ ಕೊಡುಗೆಯನ್ನೇ ನೀಡಿದೆ. ಕಂಪನಿಯು ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಮೊಬೈಲ್ ರೀಚಾರ್ಜ್ (Mobile recharge)ಜೊತೆಗೆ ಆರೋಗ್ಯ ವಿಮೆಯನ್ನು (Health insurance) ನೀಡಲು ನಿರ್ಧರಿಸಿದೆ. ಇದಕ್ಕಾಗಿ ಕಂಪನಿಯು 51 ಮತ್ತು 301 ರೂಗಳ ರೀಚಾರ್ಜ್ (Recharge) ಯೋಜನೆಯನ್ನು ಬಿಡುಗಡೆ ಮಾಡಿದೆ. ಕಂಪನಿಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹೊಸ ರೀಚಾರ್ಜ್ ಯೋಜನೆಯ ಹೆಸರು Vi Hospicare  ಎಂದು ಹೇಳಿದೆ. ಪ್ರಿಪೇಯ್ಡ್ ಗ್ರಾಹಕರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : Xiaomi : 3 ಸಾವಿರ ರೂ. ಅಗ್ಗದ ದರದಲ್ಲಿ ಖರೀದಿಸಿ Xiaomi Mi 10T Smartphone

ಟೆಲಿಕಾಂ ಕಂಪನಿಯು ಸಾಮಾನ್ಯ ಬಳಕೆದಾರರಿಗೆ ವಿಮೆ ಒದಗಿಸಲು ಆದಿತ್ಯ ಬಿರ್ಲಾ ಆರೋಗ್ಯ ವಿಮಾ ಕಂಪನಿಯೊಂದಿಗೆ (Aditya Birla Health Insurance) ಒಪ್ಪಂದ ಮಾಡಿಕೊಂಡಿದೆ. ಅಂದರೆ, ಆದಿತ್ಯ ಬಿರ್ಲಾ ಈ ಎರಡು ರೀಚಾರ್ಜ್ ಯೋಜನೆಗಳೊಂದಿಗೆ ವಿಮೆಯನ್ನು ಒದಗಿಸಲಿದ್ದಾರೆ. ಮಾಹಿತಿಯ ಪ್ರಕಾರ, 51 ಮತ್ತು 301 ರೂಗಳ ಈ ಎರಡು ಯೋಜನೆಗಳಲ್ಲಿ, ಬಳಕೆದಾರರಿಗೆ 1000 ರೂ.ಗಳ ಆರೋಗ್ಯ ವಿಮೆ ನೀಡಲಾಗುತ್ತಿದೆ. 24 ಗಂಟೆಗಳ ಕಾಲ ಆಸ್ಪತ್ರೆಗೆ (Hospital) ದಾಖಲಾಗುವವರಿಗೆ ಇದು ಮಾನ್ಯವಾಗಿರುತ್ತದೆ.

51 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ 500 SMS ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆಯ ವಾಲಿಡಿಟಿ 28 ದಿನಗಳು. 301 ರೂ.ಗಳ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಅಲ್ಲದೆ, ಪ್ರತಿದಿನ 1.5 ಜಿಬಿ data ನೀಡಲಾಗುತ್ತಿದೆ. ಬಳಕೆದಾರರು 100 ಎಸ್‌ಎಂಎಸ್ ಮಾಡಬಹುದು. ಇದರ Validity ಕೂಡಾ 28 ದಿನಗಳು.

ಇದನ್ನೂ ಓದಿ : Twitter rules- ಕರೋನಾ ಲಸಿಕೆ ಬಗ್ಗೆ ವದಂತಿ ಹರಡಿದರೆ ಹುಷಾರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News