ನಿಮ್ಮ ಫೋನ್ ಅನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸುತ್ತೆ ವಾಟ್ಸಾಪ್- ಹೇಗೆ ಗೊತ್ತಾ?

WhatsApp: ನಿಮಗೆ ಗೊತ್ತೇ! ನಿಮ್ಮ ವಾಟ್ಸಾಪ್ ಸಹ ನಿಮ್ಮ ಫೋನ್ ಅನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸುತ್ತದೆ. ವಾಸ್ತವವಾಗಿ, ವಾಟ್ಸಾಪ್ ಗ್ರೂಪ್ ಮಾಡರೇಟರ್‌ಗಳಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುವ ಗುರಿಯನ್ನು ಹೊಂದಿದೆ. ಇದರಿಂದ ಅವರು ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಚಲಾಯಿಸಬಹುದು.

Written by - Yashaswini V | Last Updated : Aug 8, 2022, 09:31 AM IST
  • ಹ್ಯಾಕರ್‌ಗಳಿಂದ ಫೋನ್ ಅನ್ನು ರಕ್ಷಿಸಲು ವಾಟ್ಸಾಪ್ ವಿಶೇಷ ಯೋಜನೆಯನ್ನು ರೂಪಿಸುತ್ತಿದೆ
  • ವಾಟ್ಸಾಪ್ ಗ್ರೂಪ್ ಮಾಡರೇಟರ್‌ಗಳಿಗೆ ಹೆಚ್ಚಿನ ನಿಯಂತ್ರಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.
  • ಇದಲ್ಲದೆ ಫೇಸ್‌ಬುಕ್, ಗೂಗಲ್ ಮತ್ತು ಅಮೆಜಾನ್ ಖಾತೆಗಳಂತೆ ಟು-ವೇ ವೆರಿಫಿಕೇಶನ್ ನಂತಹ ಸೌಲಭ್ಯವನ್ನೂ ಒದಗಿಸುವ ಸಾಧ್ಯತೆ ಇದೆ
ನಿಮ್ಮ ಫೋನ್ ಅನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸುತ್ತೆ ವಾಟ್ಸಾಪ್- ಹೇಗೆ ಗೊತ್ತಾ? title=
WhatsApp features

ವಾಟ್ಸಾಪ್ ಅಪ್ಡೇಟ್: ಮುಂಬರು ದಿನಗಳಲ್ಲಿ ವಾಟ್ಸಾಪ್ ಬಳಕೆದಾರರು ಹ್ಯಾಕರ್‌ಗಳು ತಮ್ಮ ಖಾತೆಗಳನ್ನು ಪ್ರವೇಶಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ವಾಟ್ಸಾಪ್ ಪ್ಲಾಟ್‌ಫಾರ್ಮ್ 'ಲಾಗಿನ್ ಅನುಮೋದನೆ' ಎಂದು ಕರೆಯಲ್ಪಡುವ ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಬಳಕೆದಾರರಿಗೆ ಯಾರಾದರೂ ತಮ್ಮ ವಾಟ್ಸಾಪ್ ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸಿದರೆ ಅದು ಸೂಚನೆ ನೀಡುತ್ತದೆ.

ಪ್ರಸ್ತುತ ಫೇಸ್‌ಬುಕ್, ಗೂಗಲ್ ಮತ್ತು ಅಮೆಜಾನ್ ಖಾತೆಗಳಿಗಾಗಿ ಯಾಂತ್ರಿಕ ವ್ಯವಸ್ಥೆ ಲಭ್ಯವಿದೆ. ಇದರ ಬಹಳ ಮುಖ್ಯ ಪ್ರಯೋಜನವೆಂದರೆ  ಬೇರೊಬ್ಬರು ತಮ್ಮ ಖಾತೆಯನ್ನು ಮತ್ತೊಂದು ಸಾಧನದಲ್ಲಿ ಬಳಸಿದಾಗ ಖಾತೆಯ ಬಳಕೆದಾರರ ಒಪ್ಪಿಗೆ ಅಗತ್ಯವಿರುತ್ತದೆ. ಇನ್ನು ಮುಂದೆ ವಾಟ್ಸಾಪ್ ಬಳಕೆದಾರರಿಗೂ ಸಹ ಶೀಘ್ರದಲ್ಲೇ ಇಂತಹ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!

ವಾಟ್ಸಾಪ್ ಫೀಚರ್ ಟ್ರ್ಯಾಕರ್ Wabetinfo ಹೊಸ ಬೆಳವಣಿಗೆಯನ್ನು ಮೊದಲು ಗಮನಿಸಿದೆ. Wabetinfo ಪ್ರಕಾರ, ವಾಟ್ಸಾಪ್ ಈಗ ಬಳಕೆದಾರರನ್ನು ರಕ್ಷಿಸಲು ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ, ಇದರಿಂದಾಗಿ ಯಾರಾದರೂ ತಮ್ಮ ಖಾತೆಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದಾಗ ಅಪ್ಲಿಕೇಶನ್‌ನಲ್ಲಿ ಅಧಿಸೂಚನೆಗಳನ್ನು ಪಡೆಯಬಹುದು.  ಇದರೊಂದಿಗೆ ತಮ್ಮ ಖಾತೆ ಹ್ಯಾಕ್ ಆಗುವುದನ್ನೂ ತಪ್ಪಿಸಬಹುದು ಎಂದು ಹೇಳಲಾಗಿದೆ.

ವರದಿಯ ಪ್ರಕಾರ, ನಿಮ್ಮ ವಾಟ್ಸಾಪ್ ಖಾತೆಗೆ ಬೇರೊಬ್ಬರು ಲಾಗ್ ಇನ್ ಮಾಡಲು ಪ್ರಯತ್ನಿಸುತ್ತಿರುವಾಗ, ನಿಮಗೆ ಲಾಗಿನ್ ವಿನಂತಿ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಬೇರೆಯವರು ನಿಮ್ಮ ಖಾತೆಯನ್ನು ಲಾಗಿನ್ ಆಗಲು 6 ಅಂಕಿಯ ಕೋಡ್ ಕೂಡ ಅಗತ್ಯವಿರುತ್ತದೆ. ಈ ಆರು ಅಂಕಿಯ ಕೋಡ್ ಅನ್ನು ತಪ್ಪಾಗಿ ನಮೂದಿಸಿದರೆ ಲಾಗಿನ್ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ, ಈ ನಿರ್ದಿಷ್ಟ ಭದ್ರತಾ ಎಚ್ಚರಿಕೆಯು ಇತರ ಫೋನ್‌ಗಳ ಕುರಿತು ಸಮಯ ಮತ್ತು ಇತರ ಮಾಹಿತಿಯಂತಹ ಕೆಲವು ಉಪಯುಕ್ತ ವಿವರಗಳನ್ನು ಸಹ ವರದಿ ಮಾಡುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಐಫೋನ್ 13 ಪ್ರೊ ಮ್ಯಾಕ್ಸ್‌ನಲ್ಲಿ ಬಂಪರ್ ರಿಯಾಯಿತಿ!

ಇದಲ್ಲದೆ, ವಾಟ್ಸಾಪ್ ಗ್ರೂಪ್ ಮಾಡರೇಟರ್‌ಗಳಿಗೆ ಹೆಚ್ಚಿನ ನಿಯಂತ್ರಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರಿಂದ ಅವರು ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಚಲಾಯಿಸಬಹುದು ಮತ್ತು ಪ್ರಚಾರದ ಹರಡುವಿಕೆಯನ್ನು ತಡೆಯಬಹುದು.  ಇದನ್ನು ಸಾಧಿಸಲು, ಗ್ರೂಪ್ ಅಡ್ಮಿನ್ ಹೆಚ್ಚು ಜಾಗೃತರಾಗಿರಬೇಕು ಮತ್ತು ಗುಂಪಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿದಿರಬೇಕು.

Wabetainfo ಪ್ರಕಾರ, ವಾಟ್ಸಾಪ್ ಗ್ರೂಪ್ ಗಳ ನಿರ್ವಾಹಕರು ಶೀಘ್ರದಲ್ಲೇ ಗ್ರೂಪ್ ನ ಎಲ್ಲರಿಗೂ ಸಂದೇಶಗಳನ್ನು ಅಳಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ, ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಮುಕ್ತವಾಗಿದೆ. ಆದರೆ ವಾಟ್ಸಾಪ್ ಮುಂಬರುವ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News