ನವದೆಹಲಿ : ಶುಕ್ರವಾರ ಬೆಳಗ್ಗೆ ವ್ಯಾಟ್ಸಾಪ್ (Whatsapp) ತನ್ನ ಪ್ರೈವೆಸಿ ಪಾಲಿಸಿ (privacy policy) ಮತ್ತೊಮ್ಮೆ ರಿಲೀಸ್ ಮಾಡಿದೆ. ಈ ಸಲ ತುಂಬಾ ಎಚ್ಚರಿಕೆಯಿಂದ ಶಬ್ದಗಳನ್ನು ಬಳಸಿದೆ. ಗೊಂದಲ ಕಡಿಮೆ ಇದೆ. ಜ. 5ರಂದು ಅದು ಪ್ರೈವೆಸಿ ಪಾಲಿಸಿ ಘೊಷಿಸಿದಾಗ ವಿವಾದ ಸೃಷ್ಟಿಯಾಗಿತ್ತು. ನಿಮ್ಮ ಪರ್ಸನಲ್ ಮೆಸೆಜ್, ವಿಡಿಯೋ, ಫೋಟೋ, ವಿಡಿಯೋ ಕಾಲ್ (Video Call), ವಾಯ್ಸ್ ಕಾಲ್ (Voice Call) ಮಾಹಿತಿಗಳು ಯಾರ ಜೊತೆ ಕೂಡಾ ಷೇರ್ ಆಗಲ್ಲ ಅನ್ನೋದನ್ನು ಈ ಸಲ ವಾಟ್ಸಾಪ್ ಹೇಳಿದೆ. ಆದರೆ, ಹೊಸ ಪ್ರೈವೆಸಿ ಪಾಲಿಸಿಯಲ್ಲಿ ಏನಿದೆ.?
ಈ ಹೊಸ ಪಾಲಿಸಿ ಬುಸಿನೆಸ್ ಅಕೌಂಟ್ ಗೆ ಮಾತ್ರ :
ಲಭ್ಯ ಮಾಹಿತಿ ಪ್ರಕಾರ ಕೇವಲ Whatsapp ಬುಸಿನೆಸ್ ಅಕೌಂಟ್ ಗೆ ಈ ಪ್ರೈವೆಸಿ ಪಾಲಿಸಿ ರಿಲೀಸ್ ಮಾಡಲಾಗಿದೆ. ``ನಾವು ನಮ್ಮ ಸೇವೆಯ ಷರತ್ತು ಮತ್ತು ಗೋಪ್ಯತಾ ನಿಯಮದಲ್ಲಿ ಬದಲಾವಣೆ ತರುತಿದ್ದೇವೆ. ಈ ಬದಲಾವಣೆ ಬಿಸಿನೆಸ್ ಮತ್ತು ಅವರ ಗ್ರಾಹಕರ ನಡುವಣ ವ್ಯಾಟ್ಸಾಪ್ ಮೆಸೆಜಿಂಗ್ ಗೆ ಮಾತ್ರ ಸಂಬಂಧಿಸಿರುತ್ತದೆ. ಹೊಸ ಪಾಲಿಸಿ ಪ್ರಕಾರ ಕಂಪನಿಯು ವಾಟ್ಸಾಪ್ ಬುಸಿನೆಸ್ ಬಳಕೆದಾರರ ಲೋಕೇಶನ್ (Location) ಮತ್ತು ಕಂಟ್ಯಾಕ್ಟ್ ಲಿಸ್ಟ್ (Contact list) ಪಡೆಯಬಹುದು'' ಎಂದು ಅದರಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.
ಇದನ್ನೂ ಓದಿ : Entertainer of the Year: ಉತ್ತಮ ಬ್ಯಾಟರಿ, ಡಿಸ್ ಪ್ಲೇ ಅನುಭವಕ್ಕಾಗಿ ಖರೀದಿಸಿ Galaxy M02
ಈ ಷರತ್ತು ಒಪ್ಪಲೇಬೇಕು ಎಂದೇನಿಲ್ಲ..!
ಈ ಹಿಂದೆ ವಾಟ್ಸಾಪ್ ಹೊಸ ಪ್ರೈವೆಸಿ (privacy policy) ಪಾಲಿಸಿ ತಂದಾಗ, ಎಲ್ಲರೂ ಅದನ್ನು ಒಪ್ಪಲೇ ಬೇಕಿತ್ತು. ಇಲ್ಲದೇ ಹೋದರೆ ವಾಟ್ಸಾಪ್ ಬಳಕೆ ಸಾಧ್ಯವಿರಲಿಲ್ಲ. ಆದರೆ ಈ ಸಲ ವಾಟ್ಸಾಪ್ ಸ್ವಲ್ಪ ಎಚ್ಚೆತ್ತುಕೊಂಡಿದೆ. ವಾಟ್ಸಾಪ್ ಬುಸಿನೆಸ್ ಹೊಸ ಪ್ರೈವೆಸಿ ಪಾಲಿಸಿಯನ್ನು ಒಪ್ಪಲೇ ಬೇಕೆಂಬ ಒತ್ತಡ ಏನೂ ಇಲ್ಲ ಎಂದೂ ಕಂಪನಿ ಹೇಳಿಕೊಂಡಿದೆ. ಷರತ್ತು ಒಪ್ಪದೇ ಹೋದರೂ ಕೂಡಾ ನೀವು ವಾಟ್ಸಾಪ್ ಬಳಸಬಹುದು.
ವಾಟ್ಸಾಪ್ ಡಾಟಾ ನೋಡುವುದಿಲ್ಲ:
ಗ್ರಾಹಕರ ವೈಯುಕ್ತಿಕ ಮಾಹಿತಿಗಳನ್ನು ವಾಟ್ಸಾಪ್ ನೋಡುವುದಿಲ್ಲ ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ. ಅಂದರೆ, ಸ್ನೇಹಿತರು, ಸಂಬಂಧಿಗಳಿಗೆ ಮಾಡಿದ ನಿಮ್ಮ ಮೆಸೆಜ್ ಯಾವತ್ತಿಗೂ ಸುರಕ್ಷಿತವಾಗಿರುತ್ತದೆ. ಇದು facebook, instagram ಜೊತೆ ಶೇರ್ ಆಗಲ್ಲ. ಯಾರು ಏನು ಮೆಸೆಜ್ ಮಾಡಿದ್ದಾರೆ, ಯಾರಿಗೆ ಕಾಲ್ ಮಾಡಿದ್ದಾರೆ ಇದರ ದಾಖಲೆ ಇಡಲಾಗುವುದಿಲ್ಲ.
ಇದನ್ನೂ ಓದಿ : ಪೆಟ್ರೋಲ್, ಗ್ಯಾಸ್ ಆಯಿತು.! ಈಗ Internet .! ದುಬಾರಿಯಾಗಲಿದೆ ಡೇಟಾ ಪ್ಲಾನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.