ನವದೆಹಲಿ: Xiaomi ತನ್ನ Mi Mix ಸ್ಮಾರ್ಟ್ ಫೋನಿನ ಮುಂದಿನ ಆವೃತ್ತಿಯನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಶಿಯೋಮಿ ಸಂಸ್ಥಾಪಕ ಲೀ ಜುನ್ ಮಂಗಳವಾರ ಮಿ ಪ್ಯಾಡ್ 5 (Mi Pad 5) ಮತ್ತು ಎಂಐ ಟಿವಿ ಒಎಲ್‌ಇಡಿ (Mi TV OLED) ಲೈನಪ್ ಜೊತೆಗೆ ಎಂಐ ಮಿಕ್ಸ್ 4 (Mi Mix 4) ಅನ್ನು ಬಿಡುಗಡೆ ಮಾಡಿದರು. ಕಂಪನಿಯು ಇದನ್ನು ಚೀನಾದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆ ಮಾಡಿತು. ಈ ಉತ್ಪನ್ನಗಳನ್ನು ಭಾರತ ಅಥವಾ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮಾರ್ಚ್ 2021 ರಲ್ಲಿ ಬಂದ ಎಂಐ 11 ಅಲ್ಟ್ರಾ (Mi 11 Altra) ನಂತರ ಈ ವರ್ಷ ಶಿಯೋಮಿ ಬಿಡುಗಡೆ ಮಾಡಿದ ಎರಡನೇ ಪ್ರಮುಖ ಸ್ಮಾರ್ಟ್‌ಫೋನ್ ಎಂದರೆ ಎಂಐ ಮಿಕ್ಸ್ 4. ಚೀನೀ ಟೆಕ್ ಮೇಜರ್ ಕೂಡ ಏಪ್ರಿಲ್‌ನಲ್ಲಿ ಫೋಲ್-ಆಫ್-ದಿ-ಲೈನ್ ವಿಶೇಷತೆಗಳೊಂದಿಗೆ ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಿತು.
ಎಂಐ ಮಿಕ್ಸ್ 4 ರ ವಿಶೇಷತೆಗಳು:
Xiaomi Mi Mix 4 ನ ಪ್ರಮುಖ ವಿಷಯವೆಂದರೆ ಅದರ ಮುಂಭಾಗ, ಇದರಲ್ಲಿ ಸೆಲ್ಫಿ ಕ್ಯಾಮರಾಕ್ಕೆ ಪಂಚ್ ಹೋಲ್ ನ ಕಟೌಟ್ ಇಲ್ಲ. ಮುಂಭಾಗದ ಶೂಟರ್ ಅನ್ನು ಡಿಸ್ಪ್ಲೇ ಕೆಳಗೆ ಇರಿಸಲಾಗಿದೆ. ಪರದೆಯು 6.67-ಇಂಚಿನ AMOLED ಪ್ಯಾನಲ್ ಆಗಿದ್ದು 120Hz ರಿಫ್ರೆಶ್ ದರವನ್ನು ಹೊಂದಿದೆ. ಡಿಸ್‌ಪ್ಲೇ ರೆಸಲ್ಯೂಶನ್ 1080 x 2400 ಪಿಕ್ಸೆಲ್‌ಗಳು ಮತ್ತು ಇದು HDR10+ ಮತ್ತು ಡಾಲ್ಬಿ ವಿಷನ್ ಪ್ರಮಾಣೀಕರಣದೊಂದಿಗೆ ಬರುತ್ತದೆ. ರಕ್ಷಣೆಗಾಗಿ ಪರದೆಯನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ಕವರ್ ಮಾಡಲಾಗಿದೆ.
ಎಂಐ ಮಿಕ್ಸ್ 4 ಕ್ಯಾಮೆರಾ:
ಮುಂಭಾಗದ ಡಿಸ್‌ಪ್ಲೇ ಕೆಳಗೆ ಇರುವ ಕ್ಯಾಮರಾ 20MP ಶೂಟರ್ ಆಗಿದ್ದು, 1080p ನಲ್ಲಿ 30fps ಅಥವಾ 720p ಯಲ್ಲಿ 120fps ಮತ್ತು 960fps ನಲ್ಲಿ ವಿಡಿಯೋ ಚಿತ್ರೀಕರಿಸಬಹುದು. ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಪ್ರಾಥಮಿಕ ಕ್ಯಾಮೆರಾ 108 ಎಂಪಿ. ಇತರ ಎರಡು ಕ್ಯಾಮೆರಾಗಳು 8MP ಪೆರಿಸ್ಕೋಪ್ ಟೆಲಿಫೋಟೋ ಮತ್ತು 13MP ಅಲ್ಟ್ರಾವೈಡ್ ಸೆನ್ಸರ್. 8MP ಘಟಕವು PDAF, OIS ಮತ್ತು ಐದು ಪಟ್ಟು ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ.
ಎಂಐ ಮಿಕ್ಸ್ 4 ಅನ್ನು 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲಾಗುತ್ತದೆ:
ಎಂಐ ಮಿಕ್ಸ್ 4 (Mi Mix 4) ಫೋನ್ ಅನ್ನು ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 128GB ಸ್ಟೋರೇಜ್ ಮತ್ತು 8GB RAM, 256GB ಸ್ಟೋರೇಜ್ ಮತ್ತು 8GB RAM, 256GB ಸ್ಟೋರೇಜ್ ಮತ್ತು 12GB RAM ಅಥವಾ 512GB ಸ್ಟೋರೇಜ್ ಮತ್ತು 12GB RAM ನಲ್ಲಿ ಬಿಡುಗಡೆ ಮಾಡಲಾಗಿದೆ. Mi Mix 4 ಸ್ಮಾರ್ಟ್ಫೋನ್ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಶಿಯೋಮಿ ಎಂಐ ಮಿಕ್ಸ್ 4 ಅನ್ನು 15 ನಿಮಿಷಗಳಲ್ಲಿ ವೈರ್ಡ್ ಚಾರ್ಜಿಂಗ್ ಮತ್ತು 28 ನಿಮಿಷಗಳಲ್ಲಿ ವೈರ್ ಲೆಸ್ ಚಾರ್ಜಿಂಗ್ ನೊಂದಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಹೇಳಿಕೊಂಡಿದೆ.
ಇದನ್ನೂ ಓದಿ- Motorola Edge 20: ಆ. 17ರಂದು ಭಾರತದಲ್ಲಿ ಲಾಂಚ್ ಆಗಲಿದೆ ಅತ್ಯಂತ ತೆಳ್ಳನೆಯ 5G ಸ್ಮಾರ್ಟ್ಫೋನ್
ಎಂಐ ಮಿಕ್ಸ್ 4 ( Mi Mix 4) ಬೆಲೆ:
128 ಜಿಬಿ ಸ್ಟೋರೇಜ್ ಮತ್ತು 8 ಜಿಬಿ RAM ವೇರಿಯಂಟ್ ಎಂಐ ಮಿಕ್ಸ್ 4 ಬೆಲೆ (Mi Mix 4 Price) ಸಿಎನ್ವೈ 4,999 (ರೂ. 57,400 ಕ್ಕಿಂತ ಹೆಚ್ಚು), 256 ಜಿಬಿ ಸ್ಟೋರೇಜ್ ಮತ್ತು 8 ಜಿಬಿ ರ್ಯಾಮ್ ವೇರಿಯಂಟ್ ಬೆಲೆ ಸಿಎನ್ವೈ 5,299 (ರೂ. 60,850 ಕ್ಕಿಂತ ಹೆಚ್ಚು) ಬೆಲೆ ಹೊಂದಿದೆ. 256GB ಸ್ಟೋರೇಜ್ ಮತ್ತು 12GB RAM ಹೊಂದಿರುವ ಟ್ರಿಮ್ ಬೆಲೆ CNY 5,799 (ಅಂದಾಜು ರೂ 66,600). 512GB ಸ್ಟೋರೇಜ್ ಮತ್ತು 12GB RAM ಹೊಂದಿರುವ ಟಾಪ್ ಎಂಡ್ ವೆರಿಯಂಟ್ CNY 6,299 ಕ್ಕೆ (ರೂ. 72,300 ಕ್ಕಿಂತ ಅಧಿಕ) ದರದಲ್ಲಿ ಮಾರಾಟವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ