WhatsApp Latest News: ದೀರ್ಘಕಾಲದ ನಿರೀಕ್ಷೆಗೆ ತೆರೆ ಎಳೆದ ವಾಟ್ಸ್ ಆಪ್, ಮಾಸ್ ಲೆವಲ್ ನಲ್ಲಿ ಈ ಅದ್ಬುತ ವೈಶಿಷ್ಟ್ಯದ ಬಿಡುಗಡೆ

WhatsApp Latest Update - ವಾಟ್ಸಾಪ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕಂಪನಿಯು ಅಂತಿಮವಾಗಿ Multi-Device Support ಅನ್ನು ಬೀಟಾ-ಅಲ್ಲದ ಬಳಕೆದಾರರಿಗೂ ಬಿಡುಗಡೆ ಮಾಡಲು ಆರಂಭಿಸಿದೆ. 

Written by - Nitin Tabib | Last Updated : Sep 15, 2021, 08:24 PM IST
  • ದೀರ್ಘಕಾಲದ ನಿರೀಕ್ಷೆಗೆ ತೆರೆ ಎಳೆದ ವಾಟ್ಸ್ ಆಪ್
  • ಬೀಟಾ ಅಲ್ಲದ ಬಳಕೆದಾರರಿಗೆ ಬಹು-ಸಾಧನ ವೈಶಿಷ್ಟ್ಯ ಬಿಡುಗಡೆ.
  • ಇದಕ್ಕೂ ಮೊದಲು ವಾಟ್ಸ್ ಆಪ್ ಈ ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗೆ ಮಾತ್ರ ಪರಿಚಯಿಸಿತ್ತು.
WhatsApp Latest News: ದೀರ್ಘಕಾಲದ ನಿರೀಕ್ಷೆಗೆ ತೆರೆ ಎಳೆದ ವಾಟ್ಸ್ ಆಪ್, ಮಾಸ್ ಲೆವಲ್ ನಲ್ಲಿ ಈ ಅದ್ಬುತ ವೈಶಿಷ್ಟ್ಯದ ಬಿಡುಗಡೆ title=
WhatsApp Latest Update (File Photo)

WhatsApp Latest Update - ವಾಟ್ಸಾಪ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕಂಪನಿಯು ಅಂತಿಮವಾಗಿ Multi-Device Support ಅನ್ನು ಬೀಟಾ-ಅಲ್ಲದ ಬಳಕೆದಾರರಿಗೂ ಬಿಡುಗಡೆ ಮಾಡಲು ಆರಂಭಿಸಿದೆ. ಇದುವರೆಗೆ ಕಂಪನಿಯ ಈ ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗೆ ಮಾತ್ರ ನೀಡುತ್ತಿತ್ತು. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಏಕಕಾಲಕ್ಕೆ  ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ನಂತಹ ಒಂದಕ್ಕಿಂತ ಹೆಚ್ಚು ಫೋನ್ ಅಲ್ಲದ ಸಾಧನಗಳಲ್ಲಿ ತಮ್ಮ WhatsApp ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗಲಿದೆ.

ಅಪ್ಡೇಟ್ ವರ್ಶನ್ ಸಂಖ್ಯೆ 2.21.19.9 (WhatsApp Multi-Device Support)
WABetaInfo ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ,  WhatsApp ನ ಈ ಇತ್ತೀಚಿನ ಅಪ್‌ಡೇಟ್‌ನ ಆವೃತ್ತಿ ಸಂಖ್ಯೆ 2.21.19.9. ಆಂಡ್ರಾಯ್ಡ್ ಮತ್ತು ಐಒಎಸ್ ನ ಸ್ಥಿರ ಆವೃತ್ತಿ ಬಳಕೆದಾರರಿಗಾಗಿ  ಬಿಡುಗಡೆ ಮಾಡಲಾಗಿದೆ. ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡುವ ಮೂಲಕ, ಬಳಕೆದಾರರು ತಮ್ಮ ಫೋನ್‌ಗಳಲ್ಲಿ WhatsApp ಬಹು-ಸಾಧನ ಬೆಂಬಲ ವೈಶಿಷ್ಟ್ಯವನ್ನು ಆನಂದಿಸಬಹುದು.  WABetaInfo ತನ್ನ ವರದಿಯಲ್ಲಿ WhatsApp ಭವಿಷ್ಯದದಲ್ಲಿನ ತನ್ನ ಅಪ್‌ಡೇಟ್‌ಗಳಿಗಾಗಿ ಬಹು-ಸಾಧನ ವೈಶಿಷ್ಟ್ಯ ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

WhatsApp New Feature - ಫೋನ್ ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಕೂಡ ಚಾಟಿಂಗ್ ಮಾಡಬಹುದು
ಕಳೆದ ಜುಲೈ ತಿಂಗಳಿನಲ್ಲಿ ಕಂಪನಿಯು ತನ್ನ ಬಹು-ಸಾಧನ ವೈಶಿಷ್ಟ್ಯವನ್ನು ಪರಿಚಯಿಸಿತ್ತು ಈ ವೈಶಿಷ್ಟ್ಯದ ವಿಶೇಷತೆ ಎಂದರೆ, ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಯನ್ನು ನಾಲ್ಕು ವಿಭಿನ್ನ ಸಾಧನಗಳ ಮೂಲಕ ಪ್ರವೇಶಿಸಬಹುದು. ಸ್ಮಾರ್ಟ್ಫೋನ್ ಇಂಟರ್ನೆಟ್ ಸಂಪರ್ಕ ಹೊಂದಿಲ್ಲದಿದ್ದರೂ ಸಹ. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಫೋನ್ ಆಫ್ ಮಾಡಿದಾಗಲೂ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ವಾಟ್ಸಾಪ್ ಚಾಟಿಂಗ್ ಅನ್ನು ಆನಂದಿಸಬಹುದು.

ವಾಟ್ಸ್ ಆಪ್ ನಲ್ಲಿ ಈ ರೀತಿ ಮಲ್ಟಿ ಡಿವೈಸ್ ಸಪೋರ್ಟ್ ಅನ್ನು ಸಕ್ರೀಯಗೊಳಿಸಿ
ಒಂದು ವೇಳೆ ನೀವೂ ಕೂಡ ಲೇಟೆಸ್ ಅಪ್ಡೇಟ್ ತಲುಪಿರುವ ಬಳಕೆದಾರರಾಗಿದ್ದಾರೆ, ಈ ಕೆಳಗೆ ಹೇಳಲಾಗಿರುವ ಸುಲಭ ವಿಧಾನದ ಮೂಲಕ ನೀವು ಮಲ್ಟಿ ಡಿವೈಸ್ ಬೀಟಾ ಅನ್ನು join ಮಾಡಬಹುದು. ಬನ್ನಿ ಹೆತೆ ತಿಳಿದುಕೊಳ್ಳೋಣ,

ಇದನ್ನೂ ಓದಿ- ಬಳಕೆದಾರರಿಗೆ ಶಾಕ್ ನೀಡಿದ Xiaomi! ಇದ್ದಕ್ಕಿದ್ದಂತೆ ಇಷ್ಟು ಜನರ ಫೋನ್‌ಗಳಿಗೆ ನಿರ್ಬಂಧ ..! ಕಾರಣ ಏನು ಗೊತ್ತಾ ?

ಅಂಡ್ರಾಯಿಡ್ ಬಳಕೆದಾರರು ಈ ಸ್ಟೆಪ್ ಗಳ ಅನುಸರಿಸಿ
1- ಮೊದಲು ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ.
2- ಮೇಲ್ಭಾಗದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ.
3- ಲಿಂಕ್ಡ್ ಡಿವೈಸ್ ಆಯ್ಕೆಗೆ ಹೋಗಿ.
4- ಈಗ ಮಲ್ಟಿ-ಡಿವೈಸ್ ಬೀಟಾ ಆಯ್ಕೆಯನ್ನು ಟ್ಯಾಪ್ ಮಾಡಿ.
5- ಇಲ್ಲಿ ನೀವು ಬೀಟಾ ಸೇವೆಗೆ ಸೇರಿಕೊಳ್ಳಬಹುದು ಅಥವಾ ಬಿಡಬಹುದು.

ಇದನ್ನೂ ಓದಿ-Google Pixel 6 Pro ನಲ್ಲಿ AMOLED ಡಿಸ್ಪ್ಲೇ ಜೊತೆಗೆ ಸಿಗಲಿದೆ Sony ಕಂಪನಿಯ ಜಬರ್ದಸ್ತ್ ಕ್ಯಾಮರಾ, ಇಲ್ಲಿವೆ ಡಿಟೇಲ್ಸ್ !

iOS ಬಳಕೆದಾರರು ಹೊಸ ವೈಶಿಷ್ಟ್ಯವನ್ನು ಈ ರೀತಿ ಸೇರಬಹುದು
1- ಮೊದಲನೆಯದಾಗಿ WhatsApp ತೆರೆಯಿರಿ.
2- ಅದರ ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.
3- ಲಿಂಕ್ ಮಾಡಿದ ಸಾಧನಗಳ ಮೇಲೆ ಟ್ಯಾಪ್ ಮಾಡಿ.
4- ಇಲ್ಲಿ ನೀಡಿರುವ ಮಲ್ಟಿ-ಡಿವೈಸ್ ಬೀಟಾ ಆಯ್ಕೆಯನ್ನು ಟ್ಯಾಪ್ ಮಾಡಿ.
5- ಈಗ ಬೀಟಾ ಸೇರಿಕೊಳ್ಳಿ ಅಥವಾ ಬೀಟಾ ಬಿಡಿ ಮೇಲೆ ಟ್ಯಾಪ್ ಮಾಡಿ.

ಇದನ್ನೂ ಓದಿ-Nokia: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ ಬಿಡುಗಡೆ, ಬಲವಾದ ಬ್ಯಾಟರಿ ಜೊತೆಗೆ ಸಿಗಲಿದೆ ಈ ವೈಶಿಷ್ಟ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News