Viral Video: ವಿಶ್ವ ದಾಖಲೆ ನಿರ್ಮಿಸಲು ಇಡೀ ದೇಹಕ್ಕೆ ಟ್ಯಾಟೂ ಹಾಕಿಸಿ ನಾಲಿಗೆ ಇಬ್ಭಾಗ ಮಾಡಿದ ದಂಪತಿ!

Argentina tattooed couple: ವಿಕ್ಟರ್ ಹ್ಯೂಗೋ ಪೆರಾಲ್ಟಾ ಗಿನ್ನೆಸ್ ವಿಶ್ವ ದಾಖಲೆಗೆ ತಮ್ಮ ದೇಹವನ್ನು ಬಳಸಿಕೊಂಡಿದ್ದಾರೆ. ಟ್ಯಾಟೂಗಳು ನಿಮ್ಮನ್ನು ಒಳ್ಳೆಯ ಅಥವಾ ಕೆಟ್ಟ ವ್ಯಕ್ತಿಯನ್ನಾಗಿ ಮಾಡುವುದಿಲ್ಲ. ಇದೊಂದು ಕಲೆ ಅಷ್ಟೇ. ಕೆಲವರು ಇದನ್ನು ಮೆಚ್ಚುತ್ತಾರೆ, ಕೆಲವರಿಗೆ ಇಷ್ಟವಾಗುವುದಿಲ್ಲ” ಎಂದು ಇವರು ಹೇಳಿದ್ದಾರೆ.

Written by - Bhavishya Shetty | Last Updated : Nov 25, 2022, 11:11 AM IST
    • ಈ ದಂಪತಿಯನ್ನು ಒಂದು ಕ್ಷಣ ನೋಡಿದರೆ ಭಯವಾಗುತ್ತದೆ
    • ಚಿತ್ರ ವಿಚಿತ್ರವಾಗಿ ದೇಹದ ಮೇಲೆ ಟ್ಯಾಟೂ ಬಿಡಿಸಿಕೊಂಡಿರುವ ದಂಪತಿ
    • ದೇಹದ ಯಾವ ಭಾಗವನ್ನೂ ಬಿಡದೆ ಚಿತ್ರ ಬಿಡಿಸಿಕೊಂಡ ಅರ್ಜೆಂಟೀನಾದ ಕಪಲ್
Viral Video: ವಿಶ್ವ ದಾಖಲೆ ನಿರ್ಮಿಸಲು ಇಡೀ ದೇಹಕ್ಕೆ ಟ್ಯಾಟೂ ಹಾಕಿಸಿ ನಾಲಿಗೆ ಇಬ್ಭಾಗ ಮಾಡಿದ ದಂಪತಿ!  title=
tattoo

Argentina tattooed couple: ಅರ್ಜೆಂಟೀನಾದ ಗೇಬ್ರಿಯೆಲಾ ಪೆರಾಲ್ಟಾ ಮತ್ತು ವಿಕ್ಟರ್ ಹ್ಯೂಗೋ ಪೆರಾಲ್ಟಾ ಎಂಬ ದಂಪತಿಯನ್ನು ಒಂದು ಕ್ಷಣ ನೋಡಿದರೆ ಭಯವಾಗುತ್ತದೆ. ಚಿತ್ರ ವಿಚಿತ್ರವಾಗಿ ದೇಹದ ಮೇಲೆ ಟ್ಯಾಟೂ ಬಿಡಿಸಿಕೊಂಡಿರುವ ಇವರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ದಂಪತಿಗೆ ಟ್ಯಾಟೂ ಎಂದರೆ ಇಷ್ಟವಂತೆ ಹೀಗಾಗಿ ದೇಹದ ಯಾವ ಭಾಗವನ್ನೂ ಬಿಡದೆ ಈ ರೀತಿ ಚಿತ್ರ ಬಿಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಿನ್ನದ ಮೀನು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ರಾತ್ರೋರಾತ್ರಿ ಕೋಟ್ಯಾಧೀಶ

ವಿಕ್ಟರ್ ಹ್ಯೂಗೋ ಪೆರಾಲ್ಟಾ ಗಿನ್ನೆಸ್ ವಿಶ್ವ ದಾಖಲೆಗೆ ತಮ್ಮ ದೇಹವನ್ನು ಬಳಸಿಕೊಂಡಿದ್ದಾರೆ. ಟ್ಯಾಟೂಗಳು ನಿಮ್ಮನ್ನು ಒಳ್ಳೆಯ ಅಥವಾ ಕೆಟ್ಟ ವ್ಯಕ್ತಿಯನ್ನಾಗಿ ಮಾಡುವುದಿಲ್ಲ. ಇದೊಂದು ಕಲೆ ಅಷ್ಟೇ. ಕೆಲವರು ಇದನ್ನು ಮೆಚ್ಚುತ್ತಾರೆ, ಕೆಲವರಿಗೆ ಇಷ್ಟವಾಗುವುದಿಲ್ಲ” ಎಂದು ಇವರು ಹೇಳಿದ್ದಾರೆ.

ದೇಹದ ಮೇಲಿದೆ 98 ಟ್ಯಾಟೂಗಳು:

ಕಣ್ಣು, ಬಾಯಿ, ಮೂಗು, ನಾಲಿಗೆ ಸೇರಿದಂತೆ ಇವರಿಬ್ಬರ ದೇಹದಲ್ಲಿ ಬರೋಬ್ಬರಿ 98 ಟ್ಯಾಟೂಗಳಿವೆಯಂತೆ. ಕಣ್ಣಿಗೆ ಟ್ಯಾಟೂ ಹಾಕಿಸಿಕೊಂಡಿದ್ದರಿಂದ ಕಪ್ಪು ಮತ್ತು ಹಳದಿ ಬಣ್ಣಕ್ಕೆ ಮಾರ್ಪಾಡಾಗಿದೆ. ಇವರ ದೇಹದಲ್ಲಿ 50 ಪೀಯರ್ಸ್, 8 ಮೈಕ್ರೊಡರ್ಮಲ್, 14 ಬಾಡಿ ಇಂಪ್ಲಾಂಟ್‌ಗಳು, 5 ಡೆಂಟಲ್ ಇಂಪ್ಲಾಂಟ್‌ಗಳು, 4 ಇಯರ್ ಎಕ್ಸ್‌ಪಾಂಡರ್‌ಗಳು, 2 ಇಯರ್ ಬೋಲ್ಟ್‌ಗಳು ಮತ್ತು ಫೋರ್ಕ್ಡ್ ನಾಲಿಗೆ ಇವೆ.

 

 

ಇವರ ಈ ಅವತಾರ ಕಂಡು ಅನೇಕರು ಭಯಪಟ್ಟಿದ್ದಾರಂತೆ. ಇನ್ನು ಈ ದಂಪತಿ ಮೊದಲ ಬಾರಿಗೆ ಭೇಟಿಯಾಗಿದ್ದು, ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಮೋಟಾರ್‌ಸೈಕಲ್ ಈವೆಂಟ್‌ನಲ್ಲಿ. ಇದು 24 ವರ್ಷಗಳ ಹಿಂದೆ ನಡೆದ ಘಟನೆ. ಅಲ್ಲಿ ಪರಿಚಯವಾದ ಇವರು ಮುಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಬಳಿಕ ವಿಶ್ವ ದಾಖಲೆ ನಿರ್ಮಿಸಬೇಕು ಎಂದು ಆಲೋಚಿಸಿದ ಇಬ್ಬರೂ ಒಪ್ಪಿಗೆ ಸೂಚಿಸಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಇದನ್ನೂ ಓದಿ: US Mass Firing : ಅಮೆರಿಕದ ವಾಲ್‌ಮಾರ್ಟ್ ಅಂಗಡಿಯಲ್ಲಿ ಗುಂಡಿನ ದಾಳಿ, 10 ಜನ ಸಾವು

ದೇಹ ಮಾರ್ಪಾಡು ಮಾಡಿಕೊಳ್ಳುವುದು ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯದ ಅಂತಿಮ ಸಂಕೇತವಾಗಿದೆ ಎಂದು ದಂಪತಿ ಹೇಳುತ್ತಾರೆ. ಗೇಬ್ರಿಯೆಲ್ಲಾಗೆ ಅತ್ಯಂತ ನೋವಿನ ಮಾರ್ಪಾಡು ಸ್ಕಾರ್ಫಿಕೇಶನ್ ಆಗಿತ್ತು. ವಿಕ್ಟರ್‌ಗೆ ನಾಲಿಗೆಯ ಪಿಗ್ಮೆಂಟೇಶನ್ ತುಂಬಾ ನೋವು ಕೊಟ್ಟಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಇದರಿಂದ ಒಂದು ಗಂಟೆಗಳ ಕಾಲ ಉಸಿರಾಡಲು ಸಹ ಕಷ್ಟವಾಗುವಂತೆ ಮಾಡಿತ್ತು ಎಂದು ವಿಕ್ಟರ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News