ನವದೆಹಲಿ: ಅಕ್ವೇರಿಯಂನಲ್ಲಿ ಚಿನ್ನದ ಬಣ್ಣದಲ್ಲಿ ತಿರುಗುತ್ತಿರುವ ಚಿನ್ನದ ಮೀನುಗಳು ನೋಡುಗರಿಗೆ ಆಕರ್ಷಕವಾಗಿ ಕಾಣುತ್ತವೆ. ಅಂತಹದರಲ್ಲಿ ಇದೇ ಚಿನ್ನದ ಬಣ್ಣದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಪರೂಪದ ಮೀನು ಸಿಕ್ಕರೆ ಹೇಗಿರಬೇಡ ಅಲ್ಲವೇ..! ಇಂತಹದ್ದೆ ಅದೃಷ್ಟ ಇಲ್ಲೊಬ್ಬ ವ್ಯಕ್ತಿಗೆ ದೊರಕಿದೆ.
ಫ್ರಾನ್ಸ್‌ನಲ್ಲಿ ಮೀನುಗಾರರೊಬ್ಬರು 30 ಕೆಜಿಯ ಈ ಗೋಲ್ಡ್ ಫಿಶ್ ಅನ್ನು ತಮ್ಮ ಬಲೆಯಲ್ಲಿ ಹಿಡಿದಿದ್ದಾರೆ. ಬೆಲೆಯೂ ಕೋಟಿಗಟ್ಟಲೆ ಇರಬಹುದೆಂದು ಅಂದಾಜಿಸಲಾಗಿದೆ. ಇದನ್ನು ಹಲವಾರು ವಿಧದ ವಿರಳ ಔಷಧಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: Virat Kohli: ಈ ಸ್ಟಾರ್ ಆಟಗಾರನಿಂದ ವಿರಾಟ್ ಕೊಹ್ಲಿಗೆ ಬೆದರಿಕೆ!
ವಿಶ್ವದ ಅತಿ ದೊಡ್ಡ ಗೋಲ್ಡ್ ಫಿಶ್ ಈ ಮೀನುಗಾರನ ಬಲೆಯಲ್ಲಿ ಸಿಕ್ಕಿಬಿದ್ದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಷ್ಟು ದೊಡ್ಡ ಮೀನು ತನ್ನ ಬಲೆಯಲ್ಲಿ ಸಿಕ್ಕಿಬಿದ್ದಿದ್ದಕ್ಕೆ ಅತೀವ ಆನಂದವಾಯಿತು ಎಂದಿರುವ ಮೀನುಗಾರ " ಇಷ್ಟು ದೊಡ್ಡ ಮೀನು ಸೀಗಬಹುದೆಂದು ಅಂದುಕೊಂಡಿರಲಿಲ್ಲ" ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: Team India: ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರವಿ ಶಾಸ್ತ್ರಿ!
ಬ್ಲೂವಾಟರ್ ಲೇಕ್ಸ್ ಎಂಬ ಫೇಸ್‌ಬುಕ್ ಪೇಜ್ ಈ ಫೋಟೋವನ್ನು ಪೋಸ್ಟ್ ಮಾಡಿದ್ದು ಈ ಮೀನಿನ ಫೋಟೋ ವೈರಲ್ ಆಗುತ್ತಿದೆ. ಇಷ್ಟು ದೊಡ್ಡ ಮೀನನ್ನು ನೋಡಿ ನೆಟ್ಟಿಗರು ಕೂಡ ಅಚ್ಚರಿಗೊಂಡಿದ್ದಾರೆ.ಈಗ ಫ್ರಾನ್ಸ್‌ನಲ್ಲಿ ಸಿಕ್ಕಿರುವ ಚಿನ್ನದ ಮೀನು ಈ ಹಿಂದೆ ಅಮೆರಿಕದ ಮಿನ್ನೆಸೋಟಾದಲ್ಲಿ ಕಂಡುಬಂದಿದ್ದ ಗೋಲ್ಡ್ ಫಿಷ್‌ಗಿಂತ ಸುಮಾರು 14 ಕೆಜಿ ಹೆಚ್ಚು ತೂಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.