ಆಸ್ಪತ್ರೆಯಲ್ಲಿ ಆನೆ: ಪಶ್ಚಿಮ ಬಂಗಾಳದ ಜಲ್ಪೈಗುರಿ ಸೇನಾ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ವೈದ್ಯರು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದಾರೆ. ವಾಸ್ತವವಾಗಿ, ಬಿನ್ನಗುರಿ ಆರ್ಮಿ ಕ್ಯಾಂಪ್ ಆಸ್ಪತ್ರೆಯೊಳಗೆ ದೈತ್ಯ ಆನೆಯೊಂದು ಪ್ರವೇಶಿಸಿದ್ದು ಆ ಸಂದರ್ಭದಲ್ಲಿ ಆಸ್ಪತ್ರೆಯ ಚಿತ್ರಣ ಹೇಗಿತ್ತು ಎಂಬುದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಎರಡು ಕಾಡಾನೆಗಳು ಇದ್ದಕ್ಕಿದ್ದಂತೆ ಆಸ್ಪತ್ರೆಯನ್ನು ಪ್ರವೇಶಿಸಿದ್ದು, ಆಸ್ಪತ್ರೆಯ ಗ್ಯಾಲರಿಯಲ್ಲಿ ಓಡಾಡತೊಡಗಿದವು. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಚಿತ್ರಗಳನ್ನು ಹಂಚಿಕೊಳ್ಳುತ್ತಾ, 'ಕೋಣೆಯಲ್ಲಿರುವ ಆನೆ, ಜಲ್ಪೈಗುರಿ ಕಂಟೋನ್ಮೆಂಟ್‌ನಿಂದ' ಎಂಬ ಶೀರ್ಷಿಕೆಯೊಂದಿಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Elephants in the room…
From Jalpaiguri Cantonment. pic.twitter.com/ipbFR8bthG— Susanta Nanda IFS (@susantananda3) September 4, 2022
ಇದನ್ನೂ ಓದಿ- Viral Video: ಕೆಸರಿನಲ್ಲಿಯೇ ಮುಂಗುಸಿಯ ಮೇಲೆ ದಾಳಿ ಇಟ್ಟ ಕೋಬ್ರಾ, ಯಾರು ಯಾರಿಗೆ ಮಣ್ಣುಮುಕ್ಕಿಸಿದರು?
ಇದರಲ್ಲಿ ಆನೆಯೊಂದು ಆಸ್ಪತ್ರೆಯ ಗ್ಯಾಲರಿಯಲ್ಲಿ ತಿರುಗಾಡುತ್ತಿದೆ. ಆಸ್ಪತ್ರೆಯ ಕಾರಿಡಾರ್‌ನಲ್ಲಿ ಎರಡು ಆನೆಗಳು ಮುಕ್ತವಾಗಿ ನಡೆದಾಡುತ್ತಿರುವ ವಿಡಿಯೋ ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ಆನೆಯೊಂದು ಬಾಗಿಲಿನಿಂದ ಬರುತ್ತಿದ್ದು, ಗ್ಯಾಲರಿಯೊಳಗೆ ತನ್ನ ಬೃಹತ್ ದೇಹವನ್ನು ಹಾಕಲು ಪ್ರಯತ್ನಿಸುತ್ತಿದೆ.
Elephant in Binnaguri Army Hospital. pic.twitter.com/KJeCuRJgJG
— Office of Dilip Ghosh (@DilipGhoshOff) September 5, 2022
ಇದನ್ನೂ ಓದಿ- Viral News: ಈ ದೇಶದಲ್ಲಿ ಹಣ ಕೊಟ್ಟು ಹಸುವನ್ನು ತಬ್ಬಿಕೊಳ್ಳುತ್ತಿದ್ದಾರೆ ಜನ, ಕಾರಣ ತುಂಬಾ ರೋಚಕವಾಗಿದೆ
ಆನೆ ಸ್ವಲ್ಪ ಹೊತ್ತು ಕದಲದೆ ಹಜಾರದಲ್ಲಿ ನಿಂತಿರುವುದು ಕಂಡು ಬೆಚ್ಚಿಬಿದ್ದ ಸಿಬ್ಬಂದಿ ಚಿತ್ರಗಳನ್ನು ತೆಗೆಯುತ್ತಲೇ ಇದ್ದಾರೆ. ಆಸ್ಪತ್ರೆಯಲ್ಲಿ ಆನೆಗಳನ್ನು ನೋಡಿ ಟ್ವಿಟರ್ ಬಳಕೆದಾರರು ಅಚ್ಚರಿಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.