Bride Groom Video: ಸುಂದರ ಯುವತಿಯ ಮದುವೆಯಾದ ಖುಷಿಯಲ್ಲಿ ಈ ಅಂಕಲ್‌ ಮಾಡಿದ್ದೇನು ನೋಡಿ.!

Bride Groom Viral Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಕಿರಿಯ ಹುಡುಗಿಯನ್ನು ಮದುವೆಯಾಗಿದ್ದಾರೆ. ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿರುವ ವಿಡಿಯೋದಲ್ಲಿ ವ್ಯಕ್ತಿ ತನ್ನ ನವ ವಧುವಿನ ಜೊತೆ ಕುಳಿತಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ.

Written by - Chetana Devarmani | Last Updated : Sep 26, 2022, 12:19 PM IST
  • ಸುಂದರ ಯುವತಿಯ ಮದುವೆಯಾದ ಅಂಕಲ್‌
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
Bride Groom Video: ಸುಂದರ ಯುವತಿಯ ಮದುವೆಯಾದ ಖುಷಿಯಲ್ಲಿ ಈ ಅಂಕಲ್‌ ಮಾಡಿದ್ದೇನು ನೋಡಿ.! title=
ವಿಡಿಯೋ ವೈರಲ್ 

Bride Groom Viral Video: ಸಾಮಾಜಿಕ ಮಾಧ್ಯಗಳಲ್ಲಿ ಅನೇಕ ಮದುವೆಯ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅನೇಕ ಬಾರಿ ಇವು ನೋಡುಗರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ವಧುವಿನ ವಯಸ್ಸು ಕಡಿಮೆಯಾಗಿ ಮತ್ತು ವರನ ವಯಸ್ಸು ತುಂಬಾ ಹೆಚ್ಚಾದರೆ ಈ ವಿಡಿಯೋ ತುಂಬಾ ವೈರಲ್‌ ಆಗುತ್ತದೆ. ಇದೀಗ ಅಂತಹದೊಂದು ವಿಡಿಯೋ ವೈರಲ್‌ ಆಗಿದ್ದು, ಹಿರಿಯ ವ್ಯಕ್ತಿಯೊಬ್ಬರು ಕಿರಿಯ ಹುಡುಗಿಯನ್ನು ವಿವಾಹವಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿರುವ ಈ ವಿಡಿಯೋದಲ್ಲಿ ವ್ಯಕ್ತಿ ತನ್ನ ನವ ವಧುವಿನ ಜೊತೆ ಕುಳಿತಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ : Viral Video: ನಿಜವಾದ ಪ್ರೇಮಕ್ಕೆ ಉದಾಹರಣೆ ಈ ವಿಡಿಯೋ! ರೋಮಿಯೋ ಜೂಲಿಯೆಟ್ ಕಥೆ ಮರೆತೇ ಹೋಗುತ್ತೆ!

ವಿಡಿಯೋ ನೋಡಿದ್ರೆ ವಧು ನೋಡಿ ಈ ಅಂಕಲ್‌ ಫುಲ್‌ ಖುಷಿಯಾಗಿರುವಂತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಂಕಲ್‌ ವಧುವಿನ ಜೊತೆ ಕುಳಿತು ನಗುತ್ತಿರುವುದನ್ನು ಕಾಣಬಹುದು. ವರನ ಕೈಯಲ್ಲಿ ಛತ್ರಿ ಮತ್ತು ಕೊರಳಲ್ಲಿ ಹಾರವಿದೆ. ಶೆರವಾನಿ ಧರಿಸಿ, ತನ್ನ ಬಾಯಲ್ಲಿ ಪಾನ್ ಜಗಿಯುತ್ತ ಸಂತೋಷದಿಂದ ತೇಲಾಡುತ್ತಿರುವಂತೆ ಕಾಣುತ್ತದೆ. ಅದೇ ಸಮಯದಲ್ಲಿ, ಎಡಭಾಗದಲ್ಲಿ ಕುಳಿತಿರುವ ವಧುವಿನ ಮುಖದಲ್ಲಿ ನಗುವಿದೆ. ವಧು, ಕೆಂಪು ಮದುವೆಯ ಡ್ರೆಸ್ ಧರಿಸಿ, ನಗುತ್ತಾ ಫೋಟೋಗ್ರಾಫರ್ ಮುಂದೆ ಫೋಟೋಗೆ ಪೋಸ್ ನೀಡುತ್ತಿದ್ದಾಳೆ. ಇಬ್ಬರೂ ಸಂತೋಷದಿಂದ ಕಾಣುತ್ತಿದ್ದಾರೆ. ಆದಾಗ್ಯೂ, ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ.

 

 

ಇದನ್ನೂ ಓದಿ : Viral Video : ‘ಹುಷಾರು ಟೀಚರ್​, ನಮ್ಮಪ್ಪ ಪೊಲೀಸ್..’ ಶಿಕ್ಷಕಿಗೆ‌ ಸ್ಟೂಡೆಂಟ್ ಅವಾಜ್‌.!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಜನರು ತುಂಬಾ ಆಶ್ಚರ್ಯಗೊಂಡಿದ್ದಾರೆ ಮತ್ತು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಾರೆ. funtaap ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೊವನ್ನು ಶೇರ್‌ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News