Viral Video : ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲೂ ಕೆಲವು ವಿಡಿಯೋಗಳನ್ನು ನೋಡಿದರಂತೂ ಬಿದ್ದು ಬಿದ್ದು ನಗುವುದು ಗ್ಯಾರಂಟಿ. ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀವು ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಯೋಗಾಸನ ಮಾಡುವುದನ್ನು ಕಾಣಬಹುದು.
ಇದನ್ನೂ ಓದಿ : Video viral : ನಡುರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಾಡಿಕೊಂಡ ವ್ಯಕ್ತಿಗಳು
ನೀಲಿ ಅಂಗಿ ಬಿಳಿ ಪಂಚೆ ತೊಟ್ಟ ಈ ಆಸಾಮಿ ನಡುಬೀದಿಯಲ್ಲೇ ಯೋಗ ಪ್ರದರ್ಶನ ಮಾಡಿದ್ದಾನೆ. ಮಳೆ ಬಂದು ನಿಂತಂತಿರುವ ರಸ್ತೆಯಲ್ಲಿ ಪಂಚೆ ಮೇಲೆ ಕಟ್ಟಿ ತೂರಾಡುತ್ತಲೇ ಯೋಗ ಮಾಡಿದ್ದಾನೆ. ಅದ್ಯಾವ ಆಸನ ಮಾಡುತ್ತಾನೋ ಆ ದೇವರೆ ಬಲ್ಲ. ಅವನ ಜೊತೆ ಇರುವ ಮತ್ತೊಬ್ಬ ವ್ಯಕ್ತಿ ಕೂಡ ಕುಡಿದ ಮತ್ತಿನಲ್ಲೇ ತೂರಾಡುತ್ತಿರುವುದನ್ನು ಕಾಣಬಹುದು.
ಯೋಗದಲ್ಲಿ ನಿರತನಾದ ವ್ಯಕ್ತಿ ನಡು ರೋಡ್‌ನಲ್ಲಿ ಬಿಟ್ಟ ಚಪ್ಪಲಿಯನ್ನು ಇನ್ನೊಬ್ಬ ವ್ಯಕ್ತಿ ತೆಗೆದುಕೊಂಡು ಬರುತ್ತಾನೆ. ಒಟ್ಟಾರೆ ಈತ ಮಾಡುವ ಯೋಗ ಕಂಡು ನೀವು ಬಿದ್ದು ಬಿದ್ದು ನಗುವುದಂತೂ ಪಕ್ಕಾ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ನೆಟ್ಟಿಜನ್ಸ್ ಕೂಡ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.
ಇದನ್ನೂ ಓದಿ: Viral Video : ಪ್ರೇಯಸಿ ಮದುವೆಗೆ ಬಂದ ಮಾಜಿ ಲವರ್ ಮಾಡಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.