Non-Smokers 'Losers' ಎಂಬ ಪೋಸ್ಟ್‌ಗೆ ಬೆಂಗಳೂರು ವೈದ್ಯರ ಉತ್ತರಕ್ಕೆ ನೆಟ್ಟಿಗರು ಫಿದಾ

Non-Smokers 'Losers': ಧೂಮಪಾನ ಮಾಡದವರನ್ನು 'ಸೋತವರು' ಎಂಬ ಶೀರ್ಷಿಕೆ ನೀಡಿ ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬೆಂಗಳೂರಿನ ವೈದ್ಯರೊಬ್ಬರು ನೈಜ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದು ಇಂಟರ್ನೆಟ್‌ನಲ್ಲಿ ನೂರಾರು ಹೃದಯಗಳನ್ನು ಗೆದ್ದಿದೆ. 

Written by - Yashaswini V | Last Updated : May 9, 2024, 12:52 PM IST
  • ಧೂಮಪಾನಿಗಳಲ್ಲದವರು 'ಸೋತವರು'
  • ಮಹಿಳೆಯೊಬ್ಬರ ಪೋಸ್ಟ್‌ಗೆ ವೈದ್ಯರ ಖಡಕ್ ಉತ್ತರ
  • ವ್ಯಕ್ತಿಯ ಆರೋಗ್ಯದ ಮೇಲೆ ಧೂಮಪಾನದ ಅಪಾಯಕಾರಿ ಪರಿಣಾಮವನ್ನು ಒತ್ತಿ ಹೇಳುವ ನೈಜ ಕಥೆ ವಿವರಿಸಿದ ಬೆಂಗಳೂರು ಮೂಲದ ವೈದ್ಯರು
Non-Smokers 'Losers' ಎಂಬ ಪೋಸ್ಟ್‌ಗೆ ಬೆಂಗಳೂರು ವೈದ್ಯರ ಉತ್ತರಕ್ಕೆ ನೆಟ್ಟಿಗರು ಫಿದಾ  title=

Social Media Viral Post: ಈ ತಂತ್ರಜ್ಞಾನ ಯುಗದಲ್ಲಿ ಯಾವುದೇ ಸಣ್ಣ ವಿಚಾರವೂ ಕೂಡ ಸಾಮಾಜಿಕ ಜಾಲತಾಣಗಳ (Social Media) ಮೂಲಕ ಕಾಡ್ಗಿಚ್ಚಿನಂತೆ ಬಲು ಬೇಗ ಎಲ್ಲದೆ ಹರಿದಾಡುತ್ತದೆ. ಇತ್ತೀಚೆಗೆ ಮೈಕ್ರೊಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಅಂತಹುದೇ ಒಂದು ಪೋಸ್ಟ್ ಸಖತ್ ವೈರಲ್ ಆಗಿದೆ. ಇದರಲ್ಲಿ ದೂಮಫಾನ ಮಾಡದವರನ್ನು 'ಸೋತವರು' (Non Smokers Losers) ಎಂದು ಶೀರ್ಷಿಕೆಯಡಿ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಬೆಂಗಳೂರಿನ ವೈದ್ಯರೊಬ್ಬರು ಖಡಕ್ ಆಗಿ ಪ್ರತಿಕ್ರಿಯಿಸಿದ್ದು ಇಂಟರ್ನೆಟ್‌ನಲ್ಲಿ ನೂರಾರು ಹೃದಯಗಳನ್ನು ಗೆದ್ದಿದ್ದಾರೆ. 

ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ಧೂಮಪಾನ ಮಾಡದವರನ್ನು 'ಸೋತವರು' (Non Smokers Losers) ಎಂದಿರುವ ಸಾಮಾಜಿಕ ಬಳಕೆದಾರರರನ್ನು, ಬೆಂಗಳೂರು ಮೂಲದ ವೈದ್ಯರಾದ ಡಾ ದೀಪಕ್ ಕೃಷ್ಣಮೂರ್ತಿ ಕಟುವಾಗಿ ಟೀಕಿಸಿದ್ದು, 23ರ ಹರೆಯದ ಯುವತಿಯನ್ನು ಟ್ರಿಪಲ್ ಬೈಪಾಸ್ ಸರ್ಜರಿಗೆ (Triple Bypass Surgery) ಕಳುಹಿಸಿದ್ದು ಕೆಟ್ಟ ಧೂಮಪಾನ ಚಟದಿಂದ ಎಂದು ವ್ಯಕ್ತಿಯ ಆರೋಗ್ಯದ ಮೇಲೆ ಧೂಮಪಾನದ ಅಪಾಯಕಾರಿ ಪರಿಣಾಮವನ್ನು ಒತ್ತಿ ಹೇಳುವ ರೋಗಿಯೊಬ್ಬರ ಕಥೆಯನ್ನು ವಿವರಿಸಿದ್ದಾರೆ. 

ಇದನ್ನೂ ಓದಿ- ಟ್ರಾಫಿಕ್ ಜಾಮ್ ನಡುವೆ ಸ್ಕೂಟರ್‌ನಲ್ಲಿಯೇ ಕುಳಿತು ಜೂಮ್ ಮೀಟಿಂಗ್‌ಗೆ ಹಾಜರಾದ ಮಹಿಳೆ, ವಿಡಿಯೋ ವೈರಲ್! 

ಮೈಕ್ರೊಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿನ desi theka@sushihat3r ಎಂಬ ಬಳಕೆದಾರರು, ಪೋಸ್ಟ್‌ನಲ್ಲಿ  ಹೇ ಧೂಮಪಾನಿಗಳು ಮತ್ತು ಸೋತವರು (ಧೂಮಪಾನ ಮಾಡದಿರುವವರು), ನೀವೆಲ್ಲರೂ ಏನು ಮಾಡುತ್ತಿದ್ದೀರಿ?" ಎಂಬ ಶೀರ್ಷಿಕೆಯೊಂದಿಗೆ ಟೀ ಜೊತೆಗೆ ಸಿಗರೇಟ್ ಹಿಡಿದಿರುವ ಫೋಟೋ ವನ್ನು ಶೇರ್ ಮಾಡಿದ್ದಾರೆ. 

ಈ ಪೋಸ್ಟ್‌ಗೆ ಖಡಕ್ ಪ್ರತಿಕ್ರಿಯೆ ನೀಡಿರುವ ಡಾ ದೀಪಕ್ ಕೃಷ್ಣಮೂರ್ತಿ, "ಟ್ರಿಪಲ್ ಬೈಪಾಸ್ ಶಸ್ತ್ರಚಿಕಿತ್ಸೆಗೆ (Triple Bypass Surgery) ನಾನು ಕಳುಹಿಸಿದ ಅತ್ಯಂತ ಕಿರಿಯ ರೋಗಿಯು (Youngest patient) 23 ವರ್ಷದ ಹುಡುಗಿ ಧೂಮಪಾನಿ. #HeartAttack #MedTwitter ಸೋತವರಾಗಿರಿ (ಈ ಮಹಿಳೆಯ ಪ್ರಕಾರ) ಮತ್ತು ಆರೋಗ್ಯವಾಗಿ ಬದುಕಿರಿ (Live Healthy)" ಎಂದು ಕರೆ ನೀಡಿದ್ದಾರೆ. 

ಇದನ್ನೂ ಓದಿ- BMTC: 'ಚೇಂಜ್ ಇಲ್ಲ' ಎಂದು 5 ರೂ. ಹಿಂದಿರುಗಿಸದ ಬಿಎಂಟಿಸಿ ಕಂಡಕ್ಟರ್, ಮುಂದೆ ಆಗಿದ್ದೇನು?

ಎಕ್ಸ್ ಬಳಕೆದಾರ  ಡಾ ದೀಪಕ್ ಕೃಷ್ಣಮೂರ್ತಿ (Dr Deepak Krishnamurthy) ಅವರ ಪೋಸ್ಟ್ 8 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಪೋಸ್ಟ್‌ಗೆ ನೂರಾರು ಪ್ರತಿಕ್ರಿಯೆಗಳು ಬಂದಿದ್ದು, ಇದರಲ್ಲಿ ಕೆಲವರು ಮಹಿಳೆ ಸ್ಮೋಕ್ ಮಾಡುವರೇ ಎಂದು ಆಶ್ಚರ್ಯಚಕಿತರಾಗಿದ್ದರೆ, ಬಳಕೆದಾರರೊಬ್ಬರು, 23ರ ವಯಸ್ಸಿನ ಹೆಣ್ಣು? ನಂಬಲಸಾಧ್ಯ, ಅವಳು ಎಷ್ಟು ಕಾಲ ಧೂಮಪಾನಿಯಾಗಿದ್ದಳು? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲ ಬಳಕೆದಾರರು ಧೂಮಪಾನದಿಂದ ಆಗಬಹುದಾದ ಅಪಾಯಗಳ ಬಗ್ಗೆ ಪ್ರಶ್ನಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News