ನವದೆಹಲಿ: ವಿಶ್ವಪ್ರಸಿದ್ಧ ಆಗ್ರಾದ ತಾಜ್‌ಮಹಲ್ ಆವರಣದಲ್ಲಿ ರೀಲ್ಸ್ ಮಾಡಿದ ಯುವತಿಗೆ CISF ಯೋಧನೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವರದಿಗಳ ಪ್ರಕಾರ ತಾಜ್‌ಮಹಲ್ ಆವರಣದಲ್ಲಿ ಇಬ್ಬರು ಯುವತಿಯರ ಜೊತೆಗೂಡಿ ಯುವಕರು ರೀಲ್ಸ್ ಮಾಡುತ್ತಿದ್ದರಂತೆ. ಇದನ್ನು ಪ್ರಶ್ನಿಸಿದ CISF ಯೋಧ ರೀಲ್ಸ್ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಯೋಧ ಯುವಕ ಮತ್ತು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಶನಿವಾರ ನಡೆದಿರುವ ಈ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ "O2" ರಿಲೀಸ್ ಡೇಟ್ ಫಿಕ್ಸ್!!
ताजमहल पर सीआईएसएफ की खुली गुंडागर्दी
ताज का दीरार करने आई महिला पर्यटक के साथ की मारपीट.
रील बनाने को लेकर हुआ था विवाद.
मारपीट का वीडियो सोशल मीडिया पर वायरल.@CISFHQrs @TajMahal pic.twitter.com/7K9blYZTnp— Journalist Harikant sharma (@harikantsharmaG) April 6, 2024
@harikantsharmaG ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ೧ ನಿಮಿಷ ೩ ಸೆಕೆಂಡುಗಳ ಈ ವಿಡಿಯೋದಲ್ಲಿ ಯುವಕನೊಬ್ಬ ಯೋಧನನ್ನು ತಳ್ಳುತ್ತಿರುವುದನ್ನು ಕಾಣಬಹುದು. ಯುವಕ ತನ್ನನ್ನು ತಳ್ಳಿದ್ದಕ್ಕೆ ಕೋಪಿಸಿಕೊಂಡ ಯೋಧ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬಿಡಿಸಲು ಬಂದವರ ಮೇಲೂ ಯೋಧ ಜೋರಾಗಿ ಬಾಯಿ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದೇ ವೇಳೆ ಯುವತಿಗೆ ಕಪಾಳಮೋಕ್ಷ ಕೂಡ ಮಾಡಿದ್ದಾನೆ.
ʼತಾಜ್‌ಮಹಲ್ ಆವರಣದಲ್ಲಿ CISF ಯೋಧನಿಂದ ಗೂಂಡಾಗಿರಿ ನಡೆದಿದೆ. ತಾಜ್‌ಮಹಲ್ ದರ್ಶನಕ್ಕೆ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಲಾಗಿದೆ. ರೀಲ್ಸ್ ಮಾಡುವ ವಿಚಾರವಾಗಿ ಈ ಜಗಳ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: :Food Sequencing ಅಂದರೆ ಏನು? ಮಧುಮೇಹದಿಂದ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ?
ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಪರ-ವಿರೋಧ ಚರ್ಚೆ ನಡೆಯುತ್ತಿದೆ. ಪ್ರಾಚೀನ ಸ್ಮಾರಕಗಳ ಮುಂದೆ ರೀಲ್ಸ್ ಮಾಡುವುದು ತಪ್ಪು, ಅದನ್ನು ಪ್ರಶ್ನಿಸಿದ ಯೋಧನಿಗೆ ಅವಾಜ್ ಹಾಕಿದ್ದಾರೆ. ಹೀಗಾಗಿ ಆತ ಹಲ್ಲೆ ಮಾಡಿದ್ದಾನೆ ಅಂತಾ ಕೆಲವು ಹೇಳಿದರೆ, ಪ್ರವಾಸಿಗರ ಮೇಲೆ ಯೋಧ ಹಲ್ಲೆ ನಡೆಸಿರುವುದು ತಪ್ಪು, ಅದರಲ್ಲೂ ಯುವತಿಗೆ ಕಪಾಳಮೋಕ್ಷ ಮಾಡಿದ್ದು ದೊಡ್ಡ ತಪ್ಪು ಅಂತಾ ಕೆಲವರು ವಾದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ