Bolu Thale maalika viral song : ಕರಿಮಣಿ ಮಾಲಿಕನ ಬಳಿಕ ಸದ್ದು ಮಾಡುತ್ತಿದ್ದಾರೆ ಬೋಳು ತಲೆ ಮಾಲೀಕ !ವೈರಲ್ ಆಗುತ್ತಿದೆ ಅಪ್ಡೇಟೆಡ್ ವರ್ಸನ್

Bolu Thale maalika viral song :ಈಗ ಕರಿಮಣಿ ಮಾಲೀಕನ ಹವಾ ಕಡಿಮೆಯಾಗಿದೆ. ಆ ಜಾಗಕ್ಕೆ ಬೋಳು ತಲೆ ಮಾಲೀಕ ಬಂದಾಗಿದೆ.ಬೋಳು ತಲೆ ಮಾಲಿಕನ ಹಾಡು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  

Written by - Ranjitha R K | Last Updated : Mar 7, 2024, 05:25 PM IST
  • ಕೆಲವು ರೀಲ್ಸ್ ಗಳಂತೂ ಸಿಕ್ಕಾ ಪಟ್ಟೆ ವೈರಲ್ ಆಗಿ ಬಿಡುತ್ತದೆ.
  • ಎಲ್ಲಿ ನೋಡಿದರೂ ಕರಿ ಮಣಿ ಮಾಲೀಕ ಹಾಡಿನದ್ದೇ ಹವಾ ಇತ್ತು.
  • ಆ ಜಾಗಕ್ಕೆ ಬೋಳು ತಲೆ ಮಾಲೀಕ ಬಂದಾಗಿದೆ.
Bolu Thale maalika viral song : ಕರಿಮಣಿ ಮಾಲಿಕನ ಬಳಿಕ ಸದ್ದು ಮಾಡುತ್ತಿದ್ದಾರೆ ಬೋಳು ತಲೆ ಮಾಲೀಕ !ವೈರಲ್ ಆಗುತ್ತಿದೆ ಅಪ್ಡೇಟೆಡ್ ವರ್ಸನ್  title=

Bolu Thale maalika viral song : ಸಾಮಾಜಿಕ ಮಾಧ್ಯಮ ಎನ್ನುವುದೇ ಹಾಗೆ. ಯಾರು ಯಾವಾಗ ಸ್ಟಾರ್ ಆಗುತ್ತಾರೆ. ಯಾವ ವಿಷಯ ಯಾವಾಗ ಹೆಚ್ಚು ಸದ್ದು ಮಾಡಿ ಬಿಡುತ್ತದೆ, ಸುದ್ದಿಯಾಗುತ್ತದೆ ಎಂದು ಊಹಿಸುವುದು ಕೂಡಾ ಕಷ್ಟ. ಕೆಲವು ರೀಲ್ಸ್ ಗಳಂತೂ ಸಿಕ್ಕಾ ಪಟ್ಟೆ ವೈರಲ್ ಆಗಿ ಬಿಡುತ್ತದೆ. ಅದೇ ರೀತಿ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಕರಿ ಮಣಿ ಮಾಲೀಕ ಹಾಡಿನದ್ದೇ ಹವಾ ಇತ್ತು. ಪುಟ್ಟ ಮಕ್ಕಳಿಂದ ಸ್ಟಾರ್ ಗಳವರೆಗೂ ಈ ಹಾಡಿಗೆ ರೀಲ್ಸ್ ಮಾಡಿದ್ದೇ ಮಾಡಿದ್ದು. 

ಇನ್ನು ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ಟೀಮ್, ಕರಿ ಮಣಿ ಮಾಲೀಕ ರಾವುಲ್ಲಾ ಎನ್ನುವ ಹೊಸ ಆಂಗಲ್ ನೀಡಿತ್ತು. ಇದು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಈಗ ಕರಿಮಣಿ ಮಾಲೀಕನ ಹವಾ ಕಡಿಮೆಯಾಗಿದೆ. ಆ ಜಾಗಕ್ಕೆ ಬೋಳು ತಲೆ ಮಾಲೀಕ ಬಂದಾಗಿದೆ. 

ಇದನ್ನೂ ಓದಿ : Viral Video: ಈ ರೀತಿ ಕೂಡ ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡಬಹುದಾ?

ಹೌದು, ನಿತೀನ್ ಹೆಗ್ಡೆ ಎನ್ನುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ  (@nithin.hegde.56)  ಬೋಳು ತಲೆ ಮಾಲೀಕ ನಾ.. ನಲ್ಲ ಎನ್ನುವ ಹಾಡನ್ನು ಶೇರ್ ಮಾಡಿದ್ದಾರೆ. ಇಲ್ಲಿ ಬೋಳು ತಲೆಯೇ ಈ ಹಾಡಿನ ಮುಖ್ಯ ವಿಷಯ. ಇಲ್ಲಿ ಕೇಳಿ ಬರುವ ಹಾಡು ಹೀಗಿದೆ.
ತಲೆಯ ಮೇಲೆ ಖಾಲಿ, ಖಾಲಿ, ನೀ ಬದಿಯಲ್ಲಿ ಇದ್ದರೂ
ಅಲ್ಲಿಗೆ ನಿಲ್ಲದೆ, ಉದುರಿ ಹೋದೆಯ ನೀ ಕೊನೆಗೆ
ಇನ್ನೆಲ್ಲಾ ನಾನಲ್ಲ ಕೇಶದ ಮಾಲೀಕ ನಾನಲ್ಲ
ಬೋಳು ತಲೆ ಮಾಲೀಕ ನಾ.. ನಲ್ಲ
 

 

ಇದನ್ನೂ ಓದಿ : Viral Video: ಲೈವ್ ಕಾಮಿಡಿ ಷೋನಲ್ಲಿ ಅತಿಥಿಗೆ ಹನಿಮೂನ್ ಕುರಿತು ಪ್ರಶ್ನೆ ಕೇಳಿದ ಕಾಮಿಡಿಯನ್... ಗತಿ ಏನಾಗಿದೆ ನೀವೇ ನೋಡಿ!

ಇದೀಗ ಈ ಹಾಡಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕತವಾಗಿದೆ. ಈ ರೀಲ್ಸ್ ಗೆ ಲೈಕ್ ಗಳ ಮಹಾಪೂರವೇ ಹರಿದು ಬರುತ್ತಿದೆ. ಬಳಕೆದಾರರು ವಿವಿದ ರೀತಿಯಲ್ಲಿ ಈ ಹಾಡಿಗೆ ಕಾಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News