YSRCP - TDP condom packets : ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಉಡುಗೊರೆ ನೀಡುವುವೇ ತಪ್ಪು... ಅಂತಹುದರಲ್ಲಿ, ಆಂಧ್ರಪ್ರದೇಶ ರಾಜ್ಯದಲ್ಲಿ ಮತದಾರರಿಗೆ ನಿರೋಧ ಪ್ಯಾಕೆಟ್‌ಗಳನ್ನು ಉಡುಗೂರೆಯಾಗಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲದೆ, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSRCP) ಮತ್ತು ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿ (TDP) ಹೆಸರು ಮತ್ತು ಚಿಹ್ನೆಗಳನ್ನು ಹೊಂದಿರುವ ಕಾಂಡೋಮ್ ಪ್ಯಾಕೆಟ್‌ಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇನ್ನು ವಿಡಿಯೋದಲ್ಲಿ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ YSRCP ಮತ್ತು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಹೆಸರುಗಳು ಮತ್ತು ಚಿಹ್ನೆಗಳನ್ನು ಹೊಂದಿರುವ ಕಾಂಡೋಮ್ ಪ್ಯಾಕೆಟ್‌ಗಳನ್ನು ಪಕ್ಷದ ಸದಸ್ಯರು ಮತದಾರರಿಗೆ ಹಸ್ತಾಂತರಿಸುತ್ತಿರುವ ಧೃಶ್ಯ ಸೆರೆಯಾಗಿದೆ.
𝐓𝐃𝐏 𝐒𝐭𝐨𝐨𝐩𝐬 𝐓𝐨 𝐀 𝐍𝐞𝐰 𝐋𝐨𝐰!
𝐍𝐨𝐰 𝐦𝐚𝐫𝐤𝐞𝐭𝐬 𝐢𝐭𝐬𝐞𝐥𝐟 𝐯𝐢𝐚 𝐜𝐨𝐧𝐝𝐨𝐦 𝐩𝐚𝐜𝐤𝐞𝐭𝐬!! pic.twitter.com/hYTpfNKN2p— Deccan 24x7 (@Deccan24x7) February 21, 2024
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಅಖಿಲೇಶ್ ಯಾದವ್’ಗೆ ಸಿಬಿಐ ಸಮನ್ಸ್ ಜಾರಿ
ಇನ್ನು ಚುನಾವಣೆ ಘೋಷಣೆಯಾಗದಿದ್ದಾಗ ರಾಜಕೀಯ ಪಕ್ಷಗಳು ನಡೆಸುತ್ತಿರುವ ಪ್ರಚಾರವೇ ಹೀಗಾದರೆ, ಚುನಾವಣೆ ಘೋಷಣೆಯಾದ ನಂತರ ಏನಾಗುತ್ತದೋ ಎಂಬ ಭಯ ಸಾರ್ವಜನಿಕರಲ್ಲಿದೆ. ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಏಪ್ರಿಲ್-ಮೇನಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ತೆಲುಗು ದೇಶಂ ಪಕ್ಷವು ವೈಎಸ್‌ಆರ್‌ಸಿಪಿಯನ್ನು ಎದುರಿಸಲು ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ