Bride and groom fight : ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ತರಹದ ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವೊಂದು ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರೆ, ಮತ್ತೆ ಕೆಲವು ಆಶ್ಚರ್ಯಚಕಿತರನ್ನಾಗಿ ಮಾಡುತ್ತವೆ. ಇನ್ನೂ ಕೆಲವು ವಿಡಿಯೋಗಳನ್ನಂತೂ ನಮ್ಮ ಕಣ್ಣು ಸಹ ನಂಬಲು ಸಾಧ್ಯವಿಲ್ಲ. ಅಂತಹದ್ದೆ ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : Viral Video : ಥೇಟ್ ಬಾಳೆಹಣ್ಣಿನಂತೆಯೇ ಕಾಣುತ್ತೆ ಈ ಹೆಬ್ಬಾವು.! ನೋಡಿದ್ರೆ ಶಾಕ್ ಆಗ್ತೀರಾ
ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಕಾಲಕಾಲಕ್ಕೆ ವೈರಲ್ ಆಗುತ್ತಿರುತ್ತವೆ. ಇಲ್ಲಿ ಅನೇಕ ಮದುವೆಯ ವಿಡಿಯೋಗಳನ್ನು ನೋಡಬಹುದು. ಈಗ ಎಲ್ಲರ ಗಮನ ಸೆಳೆದಿರುವ ವಿಡಿಯೋ ಕೂಡಾ ಮದುವೆಗೆ ಸಂಬಂಧಿಸಿದ್ದೇ ಆಗಿದೆ. ಮದುವೆ ಎಂದ ಕೂಡಲೇ ಅಲ್ಲಿ ಹಾಡು , ಕುಣಿತ, ತಮಾಷೆ ಸಂತೋಷ ಕಣ್ಣ ಮುಂದೆ ಬರುತ್ತದೆ. ಅಬ್ಬಬ್ಬಾ ಅಂದರೆ ವಧುವನ್ನು ಬೀಳ್ಕೊಡುವ ವೇಳೆ ಸ್ವಲ್ಪ ಭಾವಾನಾತ್ಮಕ ಸನ್ನಿವೇಶ ಸೃಷ್ಟಿಯಾಗಬಹುದು. ಆದರೆ, ಇಲ್ಲಿ ವಧು ವರರು ಮಂಟಪದಲ್ಲಿಯೇ ಹೊಡೆದಾಡುವ ಮಟ್ಟಕ್ಕೆ ಹೋಗಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ, ಮದುವೆಯ ವೇದಿಕೆಯಲ್ಲಿ ವಧು-ವರರಿಬ್ಬರನ್ನೂ ನೋಡಬಹುದು. ಅಲ್ಲಿ ವಧು ಮತ್ತು ವರನ ಅನೇಕ ಸಂಬಂಧಿಕರು ಕೂಡಾ ಕಾಣಿಸುತ್ತಾರೆ. ವರ ಇಲ್ಲಿ ವಧುವಿಗೆ ಸಿಹಿತಿಂಡಿ ತಿನ್ನಿಸಲು ಹೋಗುತ್ತಾನೆ. ಆದರೆ ವಧು ಅದನ್ನು ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ವರ ತಿಂಡಿಯನ್ನು ವಧುವಿನ ಮುಖದ ಮೇಲೆ ಎಸೆಯುತ್ತಾನೆ. ಇಷ್ಟಕ್ಕೆ ವಧು ಸುಮ್ಮನಿರಬೇಕಲ್ಲ. ವಧು ಕೂಡಾ ತಿಂಡಿಯನ್ನು ವರನ ಮುಖದ ಮೇಲೆ ಎಸೆಯುತ್ತಾಳೆ. ಇಲ್ಲಿಗೆ ವರನ ಕೋಪ ನೆತ್ತಿಗೇರಿದೆ. ಮದುವೆ ಮನೆ ಅನ್ನುವುದನ್ನೂ ಲೆಕ್ಕಿಸದೆ ವಧುವಿನ ಕಪಾಳಕ್ಕೆ ಬಾರಿಸಿದ್ದಾನೆ.
ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ಪಡೆದ ಸ್ಟಾರ್ ನಟರಾದ ಸೂರ್ಯ-ಜ್ಯೋತಿಕಾ ದಂಪತಿ
ಈ ವಿಡಿಯೋದಲ್ಲಿ ವಧು-ವರರ ನಡುವಿನ ಜಗಳ ನೋಡಿ ಅತಿಥಿಗಳೂ ಬೆರಗಾಗಿದ್ದಾರೆ. ಈ ವೀಡಿಯೊವನ್ನು ಫೇಸ್ಬುಕ್ ಬಳಕೆದಾರರೊಬ್ಬರು ಅಪ್ಲೋಡ್ ಮಾಡಿದ್ದಾರೆ. ಇಲ್ಲಿಯವರೆಗೆ ಲಕ್ಷಾಂತರ ಬಾರಿ ಈ ವಿಡಿಯೋ ವೀಕ್ಷಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.