ತಿಂದರೆ ತಿನ್ನುತ್ತಲೇ ಇರಬೇಕು ಎಂದೆನಿಸುವ ಚಿಕ್ಕಿ ತಯಾರಿಸುವ ಬಗೆ ಇದು ! ವಿಡಿಯೋ ನೋಡಿದರೆ ಮುಟ್ಟಿಯೂ ನೋಡಲಿಕ್ಕಿಲ್ಲ ಕಡಲೆ ಮಿಠಾಯಿ

Chikki Making Viral Video :ಯಾವುದೇ ವಸ್ತುವನ್ನು ಇಷ್ಟಪಟ್ಟು ನಾವು ಸೇವಿಸಿದರೂ ಅದು ಎಲ್ಲಿ ತಯಾರಾಗುತ್ತದೆ? ಹೇಗೆ ತಯಾರಾಗುತ್ತದೆ ಎನ್ನುವ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ. ಚಿಕ್ಕಿ ಕೂಡಾ ಹಾಗೆ.

Written by - Ranjitha R K | Last Updated : Jan 17, 2024, 05:05 PM IST
  • ಚಿಕ್ಕಿಯನ್ನು ಇಷ್ಟಪಡದವರು ಬಹಳ ವಿರಳ
  • ತಿಂದರೆ ತಿನ್ನುತ್ತಲೇ ಇರಬೇಕು ಎನ್ನುವಂಥಹ ಸಿಹಿ ಚಿಕ್ಕಿ
  • ಚಿಕ್ಕಿ ತಯಾರು ಮಾಡುವ ವಿಡಿಯೋ ಇಲ್ಲಿದೆ
ತಿಂದರೆ ತಿನ್ನುತ್ತಲೇ ಇರಬೇಕು ಎಂದೆನಿಸುವ ಚಿಕ್ಕಿ ತಯಾರಿಸುವ ಬಗೆ ಇದು ! ವಿಡಿಯೋ ನೋಡಿದರೆ ಮುಟ್ಟಿಯೂ ನೋಡಲಿಕ್ಕಿಲ್ಲ ಕಡಲೆ ಮಿಠಾಯಿ  title=

Chikki Making Viral Video : ಚಿಕ್ಕಿಯನ್ನು ಇಷ್ಟಪಡದವರು ಬಹಳ ವಿರಳ. ತಿಂದರೆ ತಿನ್ನುತ್ತಲೇ ಇರಬೇಕು ಎನ್ನುವಂಥಹ ಸಿಹಿ ಚಿಕ್ಕಿ. ಕಡಲೆಬೀಜ ಮತ್ತು ಬೆಲ್ಲವನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಭಾರತೀಯ ಮಿಠಾಯಿಯಾದ ಚಿಕ್ಕಿಯನ್ನು ಬೇರೆ ಬೇರೆ ವಿಧಗಳಲ್ಲಿ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ಚಿಕ್ಕಿಗೆ ಸ್ವಲ್ಪ ಬೇಡಿಕೆ ಹೆಚ್ಚೇ ಇರುತ್ತದೆ. ಕಡಲೆಬೀಜ ಹೊರತುಪಡಿಸಿ ಹುರಿಗಡ್ಲೆ, ಎಳ್ಳು, ಮಂಡಕ್ಕಿ, ಅವಲಕ್ಕಿ, ಅಥವಾ ಒಣಕೊಬ್ಬರಿಯನ್ನು ಒಳಗೊಂಡಂತೆ, ಇನ್ನೂ ಅನೇಕ ವಸ್ತುಗಳನ್ನು  ಚಿಕ್ಕಿಯಲ್ಲಿ ಬಳಸಲಾಗುತ್ತದೆ. 

ಯಾವುದೇ ವಸ್ತುವನ್ನು ಇಷ್ಟಪಟ್ಟು ನಾವು ಸೇವಿಸಿದರೂ ಅದು ಎಲ್ಲಿ ತಯಾರಾಗುತ್ತದೆ? ಹೇಗೆ ತಯಾರಾಗುತ್ತದೆ ಎನ್ನುವ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ. ಚಿಕ್ಕಿ ಕೂಡಾ ಹಾಗೆ. ತಿನ್ನಲು ರುಚಿ ಎಂದಷ್ಟೇ ನಮಗೆ ಗೊತ್ತಿರುವುದು. ಆದರೆ ಚಿಕ್ಕಿ ತಯಾರು ಮಾಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ :Viral Video: ಭಾರಿ ಚಳಿಯಲ್ಲಿ ಸ್ಕೂಟಿ ಮೇಲೆ ಶಾಲು ಹೊತ್ತು ಹುಡುಗ-ಹುಡುಗಿ ರೋಮ್ಯಾನ್ಸ್, ವಿಡಿಯೋ ವೈರಲ್!

ಲಕ್ಷ್ಮಿಕುಂಜಿ ಎಂಬವರು ತಮ್ಮ  Instagram ಪೇಜ್ ನಲ್ಲಿ  ಹಂಚಿಕೊಂಡಿರುವ ವಿಡಿಯೋದಲ್ಲಿ ಚಿಕ್ಕಿ ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ನೋಡಬಹುದು. ಇದರಲ್ಲಿ ಬೆಲ್ಲ ಮತ್ತು ಕಡಲೆಕಾಯಿ ಮಿಶ್ರಣವನ್ನು ಬರಿ ನೆಲದ ಮೇಲೆ ಹರಡಿರುವುದನ್ನು ಕಾಣಬಹುದು. ಬೆಲ್ಲ ಮತ್ತು ಶೇಂಗಾ ಹರಡಿದ ಕಡೆ ಕಾರ್ಮಿಕರು ಬರಿಗಾಲಿನಲ್ಲಿ ನಡೆಯುವುದನ್ನು ಕೂಡಾ ಇಲ್ಲಿ ಕಾಣಬಹುದು.ಅಲ್ಲೇ ಇದನ್ನು ಅಚ್ಚಿಗೆ ಹಾಕಲಾಗುತ್ತದೆ. ಬರೀ ಗೈಯ್ಯ ಲ್ಲಿಯೇ ಅಚ್ಚಿಗೆ ಹಾಕಿ ಅದನ್ನು ಸಮ ಮಾಡಲಾಗುತ್ತದೆ. ಅಚ್ಚಿನಿಂದ ತೆಗೆದು ಮತ್ತೆ ನೆಲದ ಮೇಲೆ ಬಿಸಾಡಲಾಗುತ್ತದೆ.

ಕಾರ್ಖಾನೆಯಲ್ಲಿ ಚಿಕ್ಕಿ ತಯಾರಿಸುವ ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

 

ಇದನ್ನೂ ಓದಿ : Optical Illusion: ಈ ಮರಗಳಲ್ಲಿ ಅಡಗಿರುವ 8 ಪ್ರಾಣಿಗಳನ್ನು ಕಂಡುಹಿಡಿಯುವಿರಾ..?

ಇಂಥಹ ಚಿಕ್ಕಿಯನ್ನು ತಿನ್ನುವ ಬದಲು ಮನೆಯಲ್ಲಿಯೇ ಇದನ್ನು ತಯಾರಿಸಬಹುದು:

ಚಿಕ್ಕಿ ತಯಾರಿಸಲು ಅಗತ್ಯವಿರುವ ವಸ್ತುಗಳು:
ಕಡಲೆಬೀಜ - 1 ಕಪ್
ಎಳ್ಳು - 1/2 ಕಪ್
ಬೆಲ್ಲ - 1/2 ಕಪ್
ತುಪ್ಪ - 2 ಚಮಚ

ಪಾಕವಿಧಾನ:
ಮೊದಲು ಕಡಲೆಬೀಜ ಮತ್ತು ಎಳ್ಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿದು ಪಕ್ಕಕ್ಕೆ ಇರಿಸಿ. ಈಗ ಅದೇ ಬಾಣಲೆಯಲ್ಲಿ ಬೆಲ್ಲ ಹಾಕಿ  ಪಾಕ ತಯಾರು ಮಾಡಿಕೊಳ್ಳಿ. ಪಾಕ ಸರಿಯಾದ ಸ್ಥಿರತೆಗೆ ಬಂದಾಗ ಅದಕ್ಕೆ ಹುರಿದ ಕಡಲೆಕಾಯಿ ಮತ್ತು ಎಳ್ಳು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಅಗಲವಾದ ಪ್ಯಾನ್ ಅನ್ನು ಗ್ರೀಸ್ ಮಾಡಿ ಮತ್ತು ಈ ಮಿಶ್ರಣವನ್ನು ಅದರಲ್ಲಿ ಸುರಿಯಿರಿ. ನಂತರ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ತಣ್ಣಗಾಗಲು ಬಿಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News