Cockroaches: ಈ ದೇಶದಲ್ಲಿ ಜಿರಳೆಗೆ ಚಿನ್ನದ ಬೆಲೆ; 1KGಗೆ ರೇಟ್ ಎಷ್ಟು ಗೊತ್ತಾ?

Trending news: ಪ್ರಸ್ತುತ ಸುಮಾರು 6 ಸಾವಿರ ಕೀಟಗಳನ್ನು ತಿನ್ನುವುದಕ್ಕೆ ಬಳಸಲಾಗುತ್ತದೆ. ಈ ಸಾಲಿಗೆ ಜಿರಳೆ ಕೂಡ ಸೇರಿದ್ದು, 2030ರ ವೇಳೆಗೆ ಸುಮಾರು 8 ಬಿಲಿಯನ್ ಜನರು ಜಿರಳೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆಂದು ಹೇಳಲಾಗಿದೆ. ​

Written by - Puttaraj K Alur | Last Updated : Aug 6, 2024, 06:26 PM IST
  • ಚೈನಾ ಮತ್ತು ಆಫ್ರಿಕಾ ದೇಶದಲ್ಲಿ ಜಿರಳೆಗೆ ಚಿನ್ನದ ಬೆಲೆ
  • ಜಿರಳೆ ಉತ್ಪಾದನೆಯನ್ನೇ ಉದ್ಯೋಗ ಮಾಡಿಕೊಂಡಿರುವ ಜನ
  • ಆಫ್ರಿಕಾದಲ್ಲಿ 1 ಕೆಜಿ ಜಿರಳೆಗೆ ಎಷ್ಟು ರೇಟ್ ಗೊತ್ತಾ?
Cockroaches: ಈ ದೇಶದಲ್ಲಿ ಜಿರಳೆಗೆ ಚಿನ್ನದ ಬೆಲೆ; 1KGಗೆ ರೇಟ್ ಎಷ್ಟು ಗೊತ್ತಾ?   title=
ಜಿರಳೆಗೆ ಚಿನ್ನದ ಬೆಲೆ!

Cockroaches: ಭಾರತವೂ ಸೇರಿದಂತೆ ವಿಶ್ವದಾದ್ಯಂತ ಜನರು ವಿವಿಧ ರೀತಿಯ ಪ್ರಾಣಿ & ಕೀಟಗಳನ್ನು ಆಹಾರವಾಗಿ ಸೇವಿಸುತ್ತಾರೆ. ಇವುಗಳಲ್ಲಿ ಪೈಕಿ ಜಿರಳೆ ಕೂಡ ಒಂದು. ಚೀನಾ ಮತ್ತು ಆಫ್ರಿಕಾ ದೇಶಗಳಲ್ಲಿ ಜಿರಳೆಗಳನ್ನು ಆಹಾರ ಪದಾರ್ಥವಾಗಿ ಬಳಸಲಾಗುತ್ತದೆ. ಇದಕ್ಕೆ ಕಾರಣ ಅವುಗಳಲ್ಲಿರುವ ಕೆಲವು ಪೋಷಕಾಂಶಗಳು. ಹೀಗಾಗಿಯೇ ವಿಶ್ವದ ಕೆಲವು ಪ್ರದೇಶಗಳಲ್ಲಿ ಜಿರಳೆಗೆ ಚಿನ್ನದಷ್ಟು ಬೆಲೆ ಇದೆ.  

ಮೀನು, ಆಡು, ಕೋಳಿ ಇವುಗಳಲ್ಲಿ ಹೇಗೆ ಪ್ರೊಟೀನ್ ಅಂಶ ಇದೆಯೋ ಅದೇ ರೀತಿ ಜಿರಳೆಗಳಲ್ಲಿ ಸಹ ಪ್ರೊಟೀನ್ ಅಂಶವಿದೆ. ಶೇ.14ರಷ್ಟು ಪ್ರೊಟೀನ್ ಜಿರೆಲೆಗಳಲ್ಲಿ ಇದೆ ಅನ್ನೋ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಚೈನಾ ಹಾಗೂ ಆಫ್ರಿಕಾದ ಕೆಲವು ಭಾಗಗಳಲ್ಲಿ ಜಿರಳೆಗಳನ್ನು ಆಹಾರ ಪದಾರ್ಥವಾಗಿ ಬಳಕೆ ಮಾಡುತ್ತಿದ್ದಾರೆ. ಜಿರಳೆಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ಈ ಕೀಟವನ್ನು ಬೆಳೆಸುವುದನ್ನೇ ಕೆಲವರು ಉದ್ಯೋಗ ಮಾಡಿಕೊಂಡಿದ್ದಾರಂತೆ.

ಇದನ್ನೂ ಓದಿ: ಬಾಂಗ್ಲಾ ಮಾಜಿ ಪ್ರಧಾನಿ ನಿವಾಸದ ಮೇಲೆ ದಾಳಿ..! ಬ್ರಾ, ರವಿಕೆ, ಸೀರೆಗಳನ್ನು ಲೂಟಿ ಮಾಡಿದ ಪ್ರತಿಭಟನಾಕಾರರು

ನಮ್ಮಲ್ಲಿ ಕುರಿ-ಕೋಳಿ ಸಾಕಾಣಿಕೆ ರೀತಿಯೇ ಕೆಲವು ದೇಶಗಳಲ್ಲಿ ಜಿರಳೆ ಸಾಕಾಣಿಕೆ ನಡೆಯುತ್ತದೆ. ಜಿರಳೆಗಳನ್ನು ಬೆಳೆಸಿ ಅವುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಬೇರೆ ನಾನ್‌ವೆಜ್ ಸೇವನೆಯ ಹಾಗೆ ಜಿರಳೆ ಸೇವನೆ ಸಹ ಜಾಸ್ತಿಯಾಗಬಹುದು ಎನ್ನಲಾಗುತ್ತಿದೆ. ಪ್ರಸ್ತುತ ಸುಮಾರು 6 ಸಾವಿರ ಕೀಟಗಳನ್ನು ತಿನ್ನುವುದಕ್ಕೆ ಬಳಸಲಾಗುತ್ತದೆ. ಈ ಸಾಲಿಗೆ ಜಿರಳೆ ಕೂಡ ಸೇರಿದ್ದು, 2030ರ ವೇಳೆಗೆ ಸುಮಾರು 8 ಬಿಲಿಯನ್ ಜನರು ಜಿರಳೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆಂದು ಹೇಳಲಾಗಿದೆ. 

ಜಿರಳೆಗಳನ್ನು ಬೆಳೆಸುವವರ ಬಗ್ಗೆ ಹೇಳುವುದಾದರೆ, ಆಫ್ರಿಕಾದ ತಾಂಜಾನಿಯಾದಲ್ಲಿ ಜಿರಳೆಗಳನ್ನು ಹೇರಳವಾಗಿ ಬೆಳೆಸಲಾಗುತ್ತಿದ್ದು, 1KG ಜಿರಳೆ 5 ಯುರೋಸ್‌ಗೆ ಮಾರಾಟವಾಗುತ್ತಿದೆಯಂತೆ. ಜಿರಳೆ ಸಾಕುವ ಬಹಳಷ್ಟು ಜನರಿದ್ದು, ಜಿರಳೆ ಎಣ್ಣೆ ತಯಾರಿಕೆ ಸಹ ನಡೆಯುತ್ತಿದೆಯಂತೆ. ಆಫ್ರಿಕಾದ ಉಗಾಂಡಾದ ಜನರು ಜಿರಳೆಯನ್ನು ಪ್ರಮುಖ ಆಹಾರವನ್ನಾಗಿಸಿಕೊಳ್ಳಲು ಕಾಯುತ್ತಿದ್ದಾರಂತೆ. ಜಿರಳೆಯನ್ನು ಕೆಲವು ಬುಡಕಟ್ಟು ಜನಾಂಗದ ಜನರ ಆಹಾರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿನ ರಾಜಕೀಯ ಕ್ಷೀಪ್ರಕ್ರಾಂತಿಯೂ ಮತ್ತು ವಿದ್ಯಾರ್ಥಿಗಳ ಪಾತ್ರವೂ

ಚೈನಾ ದೇಶದ ಕ್ಸಿಚಾಂಗ್ ಎನ್ನುವ ಪ್ರದೇಶದಲ್ಲಿ ಪ್ರಪಂಚದ ಅತಿದೊಡ್ಡ ಜಿರಳೆ ಉತ್ಪಾದನಾ ಘಟಕ ಇದೆ. ಇಲ್ಲಿ AI ಸಹಾಯ ಬಳಸಿ ಜಿರಳೆಗಳನ್ನು ಉತ್ಪಾದಿಸುತ್ತಾರಂತೆ. ಈ ದೇಶದ ರೆಸ್ಟೋರೆಂಟ್‌ಗಳಲ್ಲಿ ಜಿರಳೆಗಳ ವಿಶೇಷ ರೆಸಿಪಿ ಸಹ ಇದೆಯಂತೆ. ಇದಲ್ಲದೆ ಜಿರಳೆಗಳನ್ನು ಔಷಧಿ ಉತ್ಪಾದಿಸಲು ಹಾಗೂ ಸೌಂದರ್ಯವರ್ಧಕಗಳ ತಯಾರಿಕೆಗೆ ಕೂಡ ವ್ಯಾಪಕವಾಗಿ ಬಳಸಲಾಗುತ್ತಿದೆ. ಹೀಗಾಗಿಯೇ ಜಿರಳೆಗೆ ಬೇಡಿಕೆ ಹೆಚ್ಚಿರುವ ಕಾರಣ ಮಾರುಕಟ್ಟೆಯಲ್ಲಿ ಅದಕ್ಕೆ ಚಿನ್ನದ ಬೆಲೆ ಇದೆಯಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News