Snake Farming: ಕೃಷಿಯ ರೇಸ್ ನಲ್ಲಿ ಚೀನಾ ಹಲವು ದೇಶಗಳಿಗಿಂತ ಮುಂದಿದೆ. ಭಾರತ ಸೇರಿದಂತೆ ಇತರ ದೇಶಗಳಲ್ಲಿ, ಆಲೂಗಡ್ಡೆ ಮತ್ತು ಟೊಮೆಟೊ ಮತ್ತು ಇತರ ಹಣ್ಣು-ಹಂಪಲ ತರಕಾರಿಗಳನ್ನು ರೈತರು ಬೆಳೆಯುವುದನ್ನು ನಾವೆಲ್ಲರೂ ನೋಡಿದ್ದೇವೆ. ಇದೇ ವೇಳೆ , ಕೆಲವು ರೈತರ ಆದಾಯವು ಹಸು-ಎಮ್ಮೆ ಮತ್ತು ಕುರಿ-ಮೇಕೆಗಳ ಮೇಲೆ ಅವಲಂಬಿತವಾಗಿದೆ, ಆದರೆ ಭಾರತದ ನೆರೆಯ ದೇಶ ಚೀನಾದಲ್ಲಿ ಜನರು ಹಾವುಗಳ ಕೃಷಿ ಕೂಡ ಮಾಡುತ್ತಾರೆ. ಗ್ರಾಹಕರ ಬೇಡಿಕೆ ಹಿನ್ನೆಲೆ ಚೀನಾದ ಹಲವು ರೈತರು ಹಾವು ಕೃಷಿಗೆ ಮುಂದಾಗಿದ್ದಾರೆ. ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಿಸಿಕಿಯಾವೊ ಗ್ರಾಮವು ಈ ವಿಚಿತ್ರ ಬೇಸಾಯವನ್ನು ಅಳವಡಿಸಿಕೊಂಡಿದೆ, ವಿಶ್ವಾದ್ಯಂತ ಜನರು ಹಾವುಗಳನ್ನು ಕಂಡರೆ ಓಡಿಹೋಗುತ್ತಾರೆ, ಆದರೆ ಚೀನಾದ ಈ ಗ್ರಾಮದಲ್ಲಿ ಹಾವು ಸಾಕಣೆ ಪ್ರಾರಂಭವಾಗಿದೆ.
ಇದನ್ನೂ ಓದಿ-Fat Reducing Tips: ಹೊಟ್ಟೆ ಭಾಗದ ಬೊಜ್ಜು ಕರಗಿಸಲು ಹಸಿ ಶುಂಠಿಯಿಂದ ಈ 3 ಪಾನೀಯಗಳನ್ನು ಟ್ರೈ ಮಾಡಿ ನೋಡಿ!
ಅವರೇಕೆ ಹಾವು ಸಾಕಣೆ ಮಾಡುತ್ತಿದ್ದಾರೆ?
ಚೀನಾದ ಜನರು ಹಾವುಗಳ ಕೃಷಿ ಏಕೆ ಮಾಡುತ್ತಾರೆ ಎಂದು ನೀವು ಆಶ್ಚರ್ಯಪಡುತ್ತಿರಬಹುದು. ಹೌದು ಚೀನೀ ಔಷಧದಲ್ಲಿ ಹಾವಿನ ವಿಷದಿಂದ ಅನೇಕ ಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಇವುಗಳಲ್ಲಿ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳು ಕೂಡ ಶಾಮೀಲಾಗಿವೆ. ಅಷ್ಟೇ ಅಲ್ಲ ಅಲ್ಲಿ ಬೆಳೆಸಲಾದ ಹಾವುಗಳನ್ನು ಅಮೆರಿಕ, ರಷ್ಯಾ, ದಕ್ಷಿಣ ಕೊರಿಯಾ, ಜರ್ಮನಿ ಸೇರಿದಂತೆ ಇತರ ಯುರೋಪ್ ದೇಶಗಳಿಗೂ ಕಳುಹಿಸಲಾಗುತ್ತದೆ.ಹಾವುಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಜೀವ ಎಂದು ಪರಿಗಣಿಸಲಾಗಿದೆ, ಆದರೆ ಚೀನಾದ ಜಿಕಿಯಾವೊ ಗ್ರಾಮದಲ್ಲಿ ಸುಮಾರು 30 ಲಕ್ಷ ಹಾವುಗಳಿವೆ. ಹಾವುಗಳನ್ನು ಅಲ್ಲಿ ಪಳಗಿಸಲಾಗುತ್ತದೆ.
ಇದನ್ನೂ ಓದಿ-Tulsi For Hair Health: ಕೂದಲಿಗೆ ಒಂದು ವರದಾನವಿದ್ದಂತೆ ತುಳಸಿ, ಈ ರೀತಿ ಬಳಸಿ ದಟ್ಟವಾದ ಕೇಶರಾಶಿ ನಿಮ್ಮದಾಗಿಸಿ!
ಈ ಕೆಲಸ ಎಂದಿನಿಂದ ಪ್ರಾರಂಭವಾಗಿದೆ?
ಚೀನಾದಲ್ಲಿ ಈ ಹಾವುಗಳ ಕೃಷಿ ಎಂದಿನಿಂದ ಆರಂಭಗೊಂಡಿದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಮೂಡಿರಬಹುದು. 1980 ರ ದಶಕದಿಂದಲೂ ಈ ಪ್ರದೇಶಗಳಲ್ಲಿ ಹಾವುಗಳನ್ನು ಸಾಕುವ ಪದ್ಧತಿ ನಡೆಯುತ್ತಿದೆ. ಅವುಗಳನ್ನು ಬೆಳೆಸಲು ಹಳೆಯ ತಂತ್ರಜ್ಞಾನವನ್ನೂ ಬಳಸಲಾಗುತ್ತದೆ. ಮಾಧ್ಯಮಗಳ ವರದಿಗಳನ್ನು ನಂಬುವುದಾದರೆ, ಇಂತಹ 100ಕ್ಕೂ ಹೆಚ್ಚು ಫಾರಂಗಳಲ್ಲಿ ಹಾವುಗಳನ್ನು ಸಾಕುವ ಕೆಲಸ ನಡೆಯುತ್ತಿದೆ. ಗ್ರಾಮದ 1000ಕ್ಕೂ ಹೆಚ್ಚು ಜನರು ಈ ದಂಧೆಯನ್ನು ಅವಲಂಬಿಸಿದ್ದು, ಜನರು ಈ ಕೆಲಸದಿಂದ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.