ಅಬ್ಬಬ್ಬಾ ..! ಇಷ್ಟೆತ್ತರದ ಬೇಲಿಯನ್ನು ಜಿಗಿದು ಹೋಗುವ ಆನೆ .! ಇಲ್ಲಿದೆ ವಿಡಿಯೋ

Elephant viral video :ಸೋಜಿಗ ಮೂಡಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಗಜರಾಜನಿಗೆ ಸಂಬಂಧಪಟ್ಟದ್ದು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದೆ.   

Written by - Ranjitha R K | Last Updated : Aug 23, 2022, 02:52 PM IST
  • ಆನೆ ಬೇಲಿ ಹಾರುವುದನ್ನು ನೋಡಿದ್ದೀರಾ ?
  • ಇಲ್ಲಿದೆ ಆನೆ ಬೇಲಿ ಹಾರುವ ವಿಡಿಯೋ
  • ವೈರಲ್ ಆಯಿತು ಆನೆಯ ವಿಡಿಯೋ
ಅಬ್ಬಬ್ಬಾ ..! ಇಷ್ಟೆತ್ತರದ ಬೇಲಿಯನ್ನು ಜಿಗಿದು ಹೋಗುವ ಆನೆ .! ಇಲ್ಲಿದೆ ವಿಡಿಯೋ  title=
Elephant viral video

Elephant viral video : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳತ್ತ ಜನರು ಹೆಚ್ಚು ಹೆಚ್ಚು ವಾಲುತ್ತಿದ್ದಾರೆ. ಏನೇ ಘಟನೆ ಘಟಿಸಿದರೂ ಅದನ್ನು ಚ್ರಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತದೆ. ಇವುಗಳ ಪೈಕಿ ಕೆಲವೊಂದು ವಿಡಿಯೋಗಳನ್ನು ನೋಡುವಾಗ ಸಂತೋಷವಾಗುತ್ತದೆ. ಇನ್ನು ಕೆಲವು ವಿದಿಯೋಗಳನ್ನು ನೋಡುವಾಗ ಕರುಳು ಹಿಂಡಿ ಬರುತ್ತದೆ. ಮತ್ತೆ ಕೆಲವು ಜಗತ್ತಿನಲ್ಲಿ ಹೀಗೂ ನಡೆಯುವುದು ಸಾಧ್ಯವಾ ಎಂದು ಸೋಜಿಗ ಮೂಡಿಸುವಂತೆ ಇರುತ್ತದೆ.     

ಹೀಗೆಯೇ ಸೋಜಿಗ ಮೂಡಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಗಜರಾಜನಿಗೆ ಸಂಬಂಧಪಟ್ಟದ್ದು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದೆ. ವಿಡಿಯೋದಲ್ಲಿ ಆನೆಯೊಂದರ ಕೌಶಲ್ಯ ಕಂಡು ವೀಕ್ಷಕರು ಬೆರಗಾಗಿದ್ದಾರೆ. 

ಇದನ್ನೂ ಓದಿ : Viral Video : ಕೊಳಕ ಮಂಡಲವನ್ನು ನುಂಗಿದ ನಾಗರ ಹಾವು.. ಸ್ವಲ್ಪ ಹೊತ್ತಿನ ಬಳಿಕ ಹೊರಬಂತು ಜೀವಂತ ಸರ್ಪ

ಆನೆ ವಿಶ್ವದ ಅತಿದೊಡ್ಡ ಪ್ರಾಣಿ.  ಆನೆಗಳಲ್ಲೂ ಸುಮಾರು ಪ್ರಾಕಾರಗಳಿವೆ. ಏಷ್ಯಾದ ಆನೆಗಳು ಆಫ್ರಿಕನ್ ಆನೆಗಳಿಗಿಂತ ನೋಡಲು ಹೆಚ್ಚು ಸುಂದರ. ಈ ಆನೆಗಳು ಸರಾಸರಿ 20-21 ಅಡಿ ಉದ್ದ, 6-12 ಅಡಿ ಎತ್ತರ ಮತ್ತು 5000 ಕಿಲೋಗ್ರಾಂಗಳಷ್ಟು ತೂಕವಿರುತ್ತವೆ. ಆನೆಗಳಿಗೆ ವಿಶೇಷ ಬುದ್ಧಿವಂತಿಕೆ ಇರುತ್ತದೆ. ಆ ಬುದ್ದಿವಂತಿಕೆಯನ್ನು ಬಳಸಿಕೊಂಡೇ ಆನೆಯೊಂದು ಎತ್ತರದ ಬೇಲಿಯನ್ನು ಜಿಗಿದಿದೆ. ಆನೆ ಬೇಲಿ ಹಾರಿಕೊಂಡು ಹೋಗುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 

 

ಇದನ್ನೂ ಓದಿ : Video: ಮೃಗಗಳಂತೆ ವರ್ತಿಸಿದ ಮನುಷ್ಯ, ಬಾಲ-ಕಾಲ ಹಿಡಿದೆಳೆದು ಚಿರತೆಯ ಪ್ರಾಣವನ್ನೇ ಹೀರಿದ ಕ್ರೂರಿ

ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್‌ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಏಷ್ಯಾದ ಆನೆಗಳು ಏನು ಬೇಕಾದರೂ ಮಾಡಬಲ್ಲವು ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಈಗಾಗಲೇ ಸಾಕಷ್ಟು ಮಂದಿ  ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಕೂಡಾ ಬಂದಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News