Viral Video : ತನ್ನ ಬಳಿ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆ.. ನೆಟ್ಟಿಗರ ಮನಗೆದ್ದ ಹೃದಯವಂತಿಕೆ

Viral Video : ಆನೆಗಳು ಬುದ್ಧಿವಂತ ಪ್ರಾಣಿಗಳು. ಭಾವನೆಗಳನ್ನು ತೋರಿಸುವ ಬುದ್ಧಿವಂತ ಜೀವಿಗಳು. ಇದೀಗ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆನೆಯೊಂದು ತನ್ನ ಆವರಣದೊಳಗೆ ಆಕಸ್ಮಿಕವಾಗಿ ಬಿದ್ದ ಮಗುವಿನ ಶೂ ಅನ್ನು ಹಿಂದಿರುಗಿಸುತ್ತದೆ. 

Written by - Chetana Devarmani | Last Updated : Aug 18, 2022, 02:21 PM IST
  • ತನ್ನ ಬಳಿ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆ
  • ನೆಟ್ಟಿಗರ ಮನಗೆದ್ದ ಹೃದಯವಂತಿಕೆ
  • 1.3 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದ ವಿಡಿಯೋ
Viral Video : ತನ್ನ ಬಳಿ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆ.. ನೆಟ್ಟಿಗರ ಮನಗೆದ್ದ ಹೃದಯವಂತಿಕೆ  title=
ಆನೆ

Viral Video : ಆನೆಗಳು ಬುದ್ಧಿವಂತ ಪ್ರಾಣಿಗಳು. ಭಾವನೆಗಳನ್ನು ತೋರಿಸುವ ಬುದ್ಧಿವಂತ ಜೀವಿಗಳು. ಇದೀಗ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆನೆಯೊಂದು ತನ್ನ ಆವರಣದೊಳಗೆ ಆಕಸ್ಮಿಕವಾಗಿ ಬಿದ್ದ ಮಗುವಿನ ಶೂ ಅನ್ನು ಹಿಂದಿರುಗಿಸುತ್ತದೆ. ಈ ವಿಡಿಯೋದಲ್ಲಿನ ಘಟನೆ ಚೀನಾದ ಶಾಂಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಇದನ್ನು Instagram ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಇಲ್ಲಿಯವರೆಗೆ 1.3 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 

ಇದನ್ನೂ ಓದಿ : ವಿಧಾನಸೌಧದ ಆಡಳಿತ ಕೇಂದ್ರ ಎಂಎಸ್ ಬಿಲ್ಡಿಂಗ್‌ ಸಂಪ್‌ನಲ್ಲಿ ಶವಪತ್ತೆ

 

 
 
 
 

 
 
 
 
 
 
 
 
 
 
 

A post shared by NowThis (@nowthisnews)

 

ಆನೆಯು ತನ್ನ ಸೊಂಡಿಲಿನಿಂದ ಆಕಸ್ಮಿಕವಾಗಿ ತನ್ನ ಆವರಣದೊಳಗೆ ಬೀಳಿಸಿದ ಮಗುವಿನ ಶೂ ಅನ್ನು ಎತ್ತಿ ಕೊಡುತ್ತದೆ. ಆನೆಯು ತನ್ನ ಸೊಂಡಿಲಿನ ಸಹಾಯದಿಂದ ಶೂ ಅನ್ನು ಹಿಂದಿರುಗಿಸುತ್ತದೆ, ಅಲ್ಲಿ ಒಬ್ಬ ವ್ಯಕ್ತಿಯು ಈ ಹೃದಯ ಸ್ಪರ್ಶಿ ದೃಶ್ಯವನ್ನು ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಪಾದರಕ್ಷೆಯನ್ನು ಹಿಂತಿರುಗಿಸಿದ ನಂತರ, ಆನೆಯು ಮಗು ಹುಲ್ಲು ಕೊಡುವವರೆಗೂ ಕಾಯುತ್ತದೆ. ಮಗು ಹುಲ್ಲನ್ನು ನೀಡಿದ ಬಳಿಕ ತನ್ನ ಸೊಂಡಿಲನ್ನು ಹಿಂತೆಗ್ದುಕೊಳ್ಳುತ್ತದೆ.

ಪೂರ್ವ ಚೀನಾದಲ್ಲಿನ ಮೃಗಾಲಯದ ಆವರಣದಲ್ಲಿ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ವಿಡಿಯೋ 1.22 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ. ನೆಟಿಜನ್‌ಗಳು ಆನೆಯನ್ನು ಹೊಗಳಿದ್ದಾರೆ. ಆನೆಯ ಈ ಹೃದಯವಂತಿಕೆ ಎಲ್ಲರ ಮನಸೆಳೆಯುತ್ತಿದೆ. 

ಇದನ್ನೂ ಓದಿ : Viral Video : ಭಾರವಾದ ಲೆಹೆಂಗಾ ಧರಿಸಿ ಬುಲೆಟ್‌ ರೈಡ್‌ ಮಾಡಿದ ವಧು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News