Bride Boyfriend Viral Video : ಮದುವೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಮದುವೆ ಬಗ್ಗೆ ಗಂಡಾಗಲಿ ಹೆಣ್ಣಾಗಲಿ ಸಾವಿರಾರು ಕನಸುಗಳನ್ನು ಕಂಡಿರುತ್ತಾರೆ.ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಒಂದು ಜಾತ್ರೆ ರೀತಿಯೇ ಆಗುತ್ತದೆ.ಅಲ್ಲಿ ವಧು ವರ ಎಂಟ್ರಿ ಹೇಗಿರಬೇಕು. ಮದುವೆ ಮನೆಯ ಅಲಂಕಾರ ಹೇಗಿರಬೇಕು? ವಧು ವರರ ಬಟ್ಟೆ, ಆಭರಣ ಇವೆಲ್ಲವೂ ಹೇಗಿರಬೇಕು ಎನ್ನುವುದನ್ನು ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಲಾಗುತ್ತದೆ. ಇದಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ.
ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಒಬ್ಬ ಗಂಡಿಗೆ ಒಬ್ಬ ಹೆಣ್ಣು ಎನ್ನುವುದು ಪೂರ್ವ ನಿರ್ಧರಿತವಂತೆ.ಆದರೂ ಒಮ್ಮೊಮ್ಮೆ ಆಗುತ್ತಿರುವ ಮದುವೆ ತಡೆಯುವ ಪ್ರಯತ್ನದ ಬಗ್ಗೆ ನಾವು ಕೇಳುತ್ತಲೇ ಇರುತ್ತೇವೆ.ಇಲ್ಲಿ ಯಾರು ಸರಿ ಯಾರು ತಪ್ಪು ಎನ್ನುವ ಬಗ್ಗೆ ನಾವಿಲ್ಲಿ ಖಂಡಿತವಾಗಿಯೂ ಹೇಳುತ್ತಿಲ್ಲ.ಮದುವೆ ತಡೆಯಲು ಬರುವವರ ಬಳಿ ಅವರದ್ದೇ ಆದ ಕಾರಣಗಳಿರಬಹುದು.ಆದರೆ ಮದುವೆ ನಿಂತು ಹೋದ ಬಳಿಕ ಮುಂದೆ ಏನು ಎನ್ನುವುದು ಕೂಡಾ ಇಲ್ಲಿ ಮುಖ್ಯ.
ಇದನ್ನೂ ಓದಿ : Viral Video: ಮೊಬೈಲ್‌ನಲ್ಲಿ ಮಾತನಾಡುತ್ತ ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ತಾಯಿ.. ವಿಡಿಯೋ ವೈರಲ್
ಮದುವೆಗೆ ಸಂಬಂಧಪಟ್ಟಂತೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ.ಇಲ್ಲಿ ಮದುವೆ ಮಂಟಪದಲ್ಲಿ ವಧು ಮತ್ತು ವರ ಇಬ್ಬರೂ ಕುಳಿತಿರುವುದನ್ನು ಕಾಣಬಹುದು.ಇಬ್ಬರೂ ಸಂತಸದಿಂದಲೇ ಇದ್ದಾರೆ. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಅಲ್ಲಿಗೆ ಬರುತ್ತಾರೆ.ಮದುವೆಗೆ ಶುಭ ಕೋರಲು ಬಂದಂತೆ ಬಂದ ವ್ಯಕ್ತಿ ವರನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ.ಈ ವ್ಯಕ್ತಿ ವಧುವಿನ ಮಾಜಿ ಪ್ರಿಯಕರ ಎಂದು ಹೇಳಲಾಗುತ್ತಿದೆ.
Wanna be Kabir Singh kinda Kalesh b/w Ex-Boyfriend and Groom on Wedding Stage (The ex bf and Bride were Teacher in same school) Bhilwara RJpic.twitter.com/OkOiMbs5Yl
— Ghar Ke Kalesh (@gharkekalesh) May 19, 2024
ಇದನ್ನೂ ಓದಿ : ಕಾಡಾನೆ ದಂತಕ್ಕೆ ಕತ್ತರಿ: ರೈತರ ಸಮಸ್ಯೆ- ಆನೆ ಸಮಸ್ಯೆ ಪರಿಹರಿಸಿದ ಅರಣ್ಯ ಇಲಾಖೆ
ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೋ ವೀಕ್ಷಿಸಿದವರು ಕೂಡಾ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರೀತಿ- ಪ್ರೇಮ- ಗೆಳೆತನ ಏನೇ ಇರಬಹುದು.ಈ ಸಂಬಂಧವನ್ನು ಮೊದಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಒಳ್ಳೆಯದು. ಎಲ್ಲವೂ ಮುಗಿಯುತು ಎಂದು ಗೊತ್ತಾದ ಮೇಲೂ ಈ ರೀತಿ ವರ್ತಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಈ ವಿಡಿಯೋ ನೋಡಿದ ಮೇಲೆ ಕಾಡದೆ ಇರದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.