Viral Video : ಕೊಹ್ಲಿ.. ಯುವತಿ.. ಕಿಸ್‌.!! ವಿಡಿಯೋ ನೋಡಿ ಕೆಂಡಾಮಂಡಲರಾದ ಫ್ಯಾನ್ಸ್‌

Girl Kissing Virat Kohli Wax : ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಮ್ಯೂಸಿಯಂನಲ್ಲಿರುವ ವಿರಾಟ್ ಕೊಹ್ಲಿ ಪ್ರತಿಮೆಗೆ ಅಭಿಮಾನಿಯೊಬ್ಬರು ಮುತ್ತಿಕ್ಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Written by - Chetana Devarmani | Last Updated : Feb 23, 2023, 11:19 AM IST
  • ವಿರಾಟ್ ಕೊಹ್ಲಿ ಪ್ರತಿಮೆಗೆ ಕಿಸ್‌ ಕೊಟ್ಟ ಯುವತಿ!
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
  • ವಿಡಿಯೋ ನೋಡಿ ಕೆಂಡಾಮಂಡಲರಾದ ಫ್ಯಾನ್ಸ್‌
Viral Video : ಕೊಹ್ಲಿ.. ಯುವತಿ.. ಕಿಸ್‌.!! ವಿಡಿಯೋ ನೋಡಿ ಕೆಂಡಾಮಂಡಲರಾದ ಫ್ಯಾನ್ಸ್‌  title=
Girl Kissing Virat Kohli Wax

Girl Kissing Virat Kohli Wax : ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಪ್ರಸಿದ್ಧ ಮೇಡಮ್‌ ಟುಸ್ಸಾಡ್ಸ್‌ ಮ್ಯೂಸಿಯಂ ಕೂಡ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಹೊಂದಿದೆ, ಅಲ್ಲಿ ಐತಿಹಾಸಿಕ ಮತ್ತು ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಪ್ರದರ್ಶಿಸಲಾಗುತ್ತದೆ. ಮ್ಯೂಸಿಯಂನಲ್ಲಿರುವ ವಿರಾಟ್ ಕೊಹ್ಲಿ ಪ್ರತಿಮೆಗೆ ಅಭಿಮಾನಿಯೊಬ್ಬರು ಮುತ್ತಿಕ್ಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : ಪೃಥ್ವಿ ನನ್ನ ʼಖಾಸಗಿ ಅಂಗಾಂಗʼಳನ್ನು ಟಚ್‌ ಮಾಡಿದ್ದ..! ಕ್ರಿಕೆಟಿಗನ ಮೇಲೆ ಸಪ್ನಾ ದೂರು

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ವೈರಲ್ ವಿಡಿಯೋದಲ್ಲಿ, ಹುಡುಗಿ ಕಿಂಗ್ ಕೊಹ್ಲಿಯ ಪ್ರತಿಮೆಯ ತುಟಿಗಳ ಮೇಲೆ ಚುಂಬಿಸುತ್ತಿರುವುದನ್ನು ಮತ್ತು ನಂತರ ಅವಳು ನಾಚಿಕೆಪಡುವುದನ್ನು ಕಾಣಬಹುದು. ವಿಡಿಯೋ ವೈರಲ್ ಆದ ನಂತರ ವಿರಾಟ್ ಕೊಹ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ಈ ಕ್ಷಣವನ್ನು ತುಂಬಾ ರೋಮ್ಯಾಂಟಿಕ್ ಮತ್ತು ಹೃದಯ ಸ್ಪರ್ಶಿ ಎಂದು ಹೇಳಿದರೆ, ಮತ್ತೆ ಕೆಲವರು ಈ ವಿಡಿಯೋವನ್ನು ನೋಡಿ ಕೋಪಗೊಂಡರು. ಹಲವು ಜನರು ವಿರಾಟ್ ಕೊಹ್ಲಿ ಅವರ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿಡಿಯೋಗೆ ಟ್ಯಾಗ್ ಮಾಡಿ ಆಸಕ್ತಿದಾಯಕವಾಗಿ ಕಾಮೆಂಟ್ ಮಾಡಿದ್ದಾರೆ.

 

 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಬಳಕೆದಾರರು "ಅನುಷ್ಕಾ ಭಾಭಿಗೆ ಕರೆ ಮಾಡಿ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಟ್ಯಾಗ್ ಮಾಡಿ, "ಅನುಷ್ಕಾ ಭಾಭಿ ಇದನ್ನು ನೋಡಿ, ಏನಾಗುತ್ತಿದೆ" ಎಂದು ಬರೆದಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ಹುಡುಗಿಯೊಬ್ಬಳು, ‘ಇದನ್ನು ನೋಡುವ ಮುನ್ನ ನಾನೇಕೆ ಸಾಯಲಿಲ್ಲ’ ಎಂದು ಬರೆದುಕೊಂಡಿದ್ದಾಳೆ. "ವಿರಾಟ್ ಕೊಹ್ಲಿ ಅವರ ಪ್ರತಿಮೆಯೊಂದಿಗೆ ಈ ರೀತಿ ಮಾಡುವುದರಿಂದ ನಿಮಗೆ ಏನು ಸಿಕ್ಕಿತು" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಅದೇ ರೀತಿ ಇನ್ನೂ ಹಲವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 

ಇದನ್ನೂ ಓದಿ : ಐಸಿಸಿ ಟೆಸ್ಟ್ ರ್ಯಾಂಕಿಂಗ್ ಟಾಪ್ 10 ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News