Viral Video: ಮಾವುತನನ್ನು ತುಳಿದು ಸಾಯಿಸಿದ ಆನೆ, ಸಿಸಿಟಿವಿಯಲ್ಲಿ ಸೆರೆಯಾಗಿ ಭಯಾನಕ ದೃಶ್ಯ!

Elephant Attack in Kerala: @baldwhiner ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡುಗರಿಗೆ ಭಯ ಹುಟ್ಟಿಸುವಂತಿದೆ.

Written by - Puttaraj K Alur | Last Updated : Apr 13, 2024, 06:28 PM IST
  • ಕೇರಳದಲ್ಲಿ ದೇವಸ್ಥಾನದ ಆನೆಯೊಂದು ಮಾವುತನನ್ನು ತುಳಿದು ಸಾಯಿಸಿದೆ
  • ಈ ಭಯಾನಕ ದೃಶ್ಯವು ದೇವಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
  • ಸೋಷಿಯಲ್‌ ಮೀಡಿಯಾದಲ್ಲಿ ಆನೆ ಅಟ್ಯಾಕ್‌ ವಿಡಿಯೋ ಸಖತ್‌ ವೈರಲ್‌
Viral Video: ಮಾವುತನನ್ನು ತುಳಿದು ಸಾಯಿಸಿದ ಆನೆ, ಸಿಸಿಟಿವಿಯಲ್ಲಿ ಸೆರೆಯಾಗಿ ಭಯಾನಕ ದೃಶ್ಯ! title=
ಮಾವುತನನ್ನು ತುಳಿದು ಸಾಯಿಸಿದ ಆನೆ!

Elephant Attack in Kerala: ಕೇರಳದಲ್ಲಿ ದೇವಸ್ಥಾನದ ಆನೆಯೊಂದು ಮಾವುತನನ್ನು ತುಳಿದು ಸಾಯಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಭಯಾನಕ ದೃಶ್ಯವು ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಕೇರಳದ ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದ ಕಾರ್ಯಕ್ರಮದ ವೇಳೆ ಈ ದುರ್ಘಟನೆ ನಡೆದಿದೆ. ಪುತ್ತುಪ್ಪಲ್ಲಿ ಮೂಲದ ಅರವಿಂದ್ ಎಂಬ 26 ವರ್ಷದ ಮಾವುತ ಆನೆಯ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಏಪ್ರಿಲ್‌ ೩ರ ಬುಧವಾರ ರಾತ್ರಿ 9 ಗಂಟೆ ವೇಳೆಗೆ ಈ ಘಟನೆ ನಡೆದಿದೆ.

ಇದನ್ನೂ ಓದಿ: Terrorist Trapped In Jammu Kashmir: ಪುಲ್ವಾಮಾದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರ ಹತ

ಕುಂಜುಲಕ್ಷ್ಮಿ ಹೆಸರಿನ ಆನೆಯನ್ನು ದೇವಾಲಯದ ಸಮಾರಂಭಕ್ಕೆಂದು ಅಲಂಕಾರಗೊಳಿಸಲಾಗಿತ್ತು. ಶಾಂತವಾಗಿಯೇ ಇದ್ದ ಆನೆ ಇದ್ದಕ್ಕಿದ್ದಂತೆ ಮದವೇರಿದಂತೆ ವರ್ತಿಸಿ ಆ ಕಡೆ ಈ ಕಡೆ ಓಡಾಡಿದೆ. ಆನೆಯ ಪಾದಗಳ ಸಮೀಪದಲ್ಲಿದ್ದ ಮಾವುತ ಅರವಿಂದನನ್ನು ಕಾಲಿನಲ್ಲಿ ತುಳಿದು ಹಾಕಿದೆ. ಕೂಡಲೇ ಆತನ ರಕ್ಷಿಸಲು ದೇವಸ್ಥಾನದಲ್ಲಿದ್ದ ಜನರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. 

ಗಂಭೀರವಾಗಿ ಗಾಯಗೊಂಡಿದ್ದ ಮಾವುತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈಕಂ ತಾಲೂಕು ಆಸ್ಪತ್ರೆ ವೈದ್ಯರು ಮಾವುತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. @baldwhiner ಎಂಬ ಟ್ವಿಟರ್​​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. 

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕೊಳವೆ ಬಾವಿ ಅಪಘಾತ : ರಕ್ಷಣಾ ಕಾರ್ಯಾಚರಣೆ ಆರಂಭ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News