Viral Video: ಠಾಣೆಗೆ ಬಂದ 3 ವರ್ಷದ ಮಗು! ಚಾಕೊಲೇಟ್‌ ಕೊಡದ ಅಮ್ಮನ ಮೇಲೆ ಮಾರುದ್ದ ದೂರು

Kid At Police Station: ಮೂರು ವರ್ಷದ ಪುಟ್ಟ ಮಗುವೊಂದು ತನ್ನ ತಾಯಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 

Written by - Chetana Devarmani | Last Updated : Oct 19, 2022, 12:07 PM IST
  • ಠಾಣೆಗೆ ಬಂದ 3 ವರ್ಷದ ಮಗು!
  • ಅಮ್ಮನ ಮೇಲೆ ಮುದ್ದಾದ ದೂರು
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video: ಠಾಣೆಗೆ ಬಂದ 3 ವರ್ಷದ ಮಗು! ಚಾಕೊಲೇಟ್‌ ಕೊಡದ ಅಮ್ಮನ ಮೇಲೆ ಮಾರುದ್ದ ದೂರು  title=
ವಿಡಿಯೋ ವೈರಲ್‌ 

Kid At Police Station: ಮನೆಯಲ್ಲಿ ಕಳ್ಳತನವಾದಾಗಲೆಲ್ಲಾ ಜನರು ಪೊಲೀಸ್ ಠಾಣೆಗೆ ಬಂದು ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡುತ್ತಾರೆ. ಆದರೆ ಇಲ್ಲೊಂದು ಮೂರು ವರ್ಷದ ಪುಟ್ಟ ಮಗುವೊಂದು ತನ್ನ ತಾಯಿಯ ಚೇಷ್ಟೆಯಿಂದ ಬೇಸರವಾಗಿ ಪೊಲೀಸ್ ಠಾಣೆಗೆ ಬಂದು ಮಹಿಳಾ ಪೊಲೀಸರಿಗೆ ದೂರು ನೀಡಿದೆ. ಇದರ ವಿಡಿಯೋ ಕೂಡ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಮಗು ಆಟವಾಡುತ್ತಿರುವಾಗ ತಾಯಿಯ ದೂರನ್ನು ಮಹಿಳಾ ಪೊಲೀಸ್ ಉದ್ಯೋಗಿಗೆ ಹೇಳುತ್ತದೆ ಮತ್ತು ಅವರು ಆ ದೂರನ್ನು ಬರೆದುಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ : Snake rescue video : ಕೃಷಿ ಹೊಂಡದಲ್ಲಿದ್ದ ದೈತ್ಯ ನಾಗರ ಹಾವಿನ ರಕ್ಷಣೆ! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಪೊಲೀಸ್ ಠಾಣೆಗೆ ಬಂದು ತನ್ನ ತಾಯಿಯ ವಿರುದ್ಧ ದೂರನ್ನು ಹೇಳುತ್ತಿರುವುದನ್ನು ಕಾಣಬಹುದು. ವಾಸ್ತವವಾಗಿ, ಮೂರು ವರ್ಷದ ಮಗುವಿನ ತಾಯಿ ಆಗಾಗ್ಗೆ ಚಾಕೊಲೇಟ್‌ಗಳನ್ನು ಕದಿಯುತ್ತಾಳೆ. ಇದರಿಂದ ಕೋಪಗೊಂಡ ಮಗು ಪೊಲೀಸರ ಬಳಿಗೆ ತಲುಪಿ ಅದರ ಬಗ್ಗೆ ದೂರು ನೀಡುತ್ತಿದೆ. ಅಚ್ಚರಿಯ ವಿಷಯವೆಂದರೆ ಮಗು ದೂರು ಹೇಳುವುದಷ್ಟೇ ಅಲ್ಲ, ತಾಯಿಯನ್ನು ಜೈಲಿಗೆ ಹಾಕುವಂತೆಯೂ ಕೇಳುತ್ತದೆ.

 

 

ವಿಡಿಯೋದಲ್ಲಿ ಮಗು ತನ್ನದೇ ಶೈಲಿಯಲ್ಲಿ ಆಡುತ್ತಾ ಎಲ್ಲವನ್ನೂ ಹೇಳುತ್ತದೆ. ಪ್ರಸ್ತುತ, ಅನೇಕ ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ನೋಡಿದ ಮೇಲೆ ನಿಮ್ಮ ಮುಖದಲ್ಲೂ ನಗು ಬರುತ್ತದೆ.

ಇದನ್ನೂ ಓದಿ : Funny Video : ಮಂಗನಿಗೆ ಶರೆ ಕುಡಿಸಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News