Video : ಸಿಂಹವನ್ನು ಸುತ್ತುವರೆದ 40 ಕ್ಕೂ ಅಧಿಕ ಮೊಸಳೆಗಳು..! ಎದ್ದು ಬಿದ್ದು ಪ್ರಾಣ ಉಳಿಸಿಕೊಂಡ ಕಾಡಿನ ರಾಜ

Crocodile Viral Video :ಇಲ್ಲಿ ಸಿಂಹದ ಮೇಲೆ ದಾಳಿಗೆ ಮುಂದಾಗಿರುವುದು ಮೊಸಳೆಗಳು. ಅದು ಕೂಡಾ ಒಂದಲ್ಲ,  ಎರಡಲ್ಲ, ಮೂರಲ್ಲ ಬರೋಬ್ಬರಿ 40 ಕ್ಕೂ ಹೆಚ್ಚು ಮೊಸಳೆಗಳು.  

Written by - Ranjitha R K | Last Updated : Jun 13, 2022, 02:46 PM IST
  • ಕಾಡಿನ ರಾಜನಾದ ಸಿಂಹದ ಮುಂದೆ ಯಾವ ಪ್ರಾಣಿಯೂ ನಿಲ್ಲುವುದಿಲ್ಲ.
  • ಸಿಂಹದ ಮೇಲೆ ದಾಳಿಗೆ ಮುಂದಾಗಿರುವುದು ಮೊಸಳೆಗಳು.
  • 40 ಕ್ಕೂ ಹೆಚ್ಚು ಮೊಸಳೆಗಳಿಂದ ಸಿಂಹದ ಮೇಲೆ ದಾಳಿಗೆ ಯತ್ನ
Video : ಸಿಂಹವನ್ನು ಸುತ್ತುವರೆದ 40 ಕ್ಕೂ ಅಧಿಕ ಮೊಸಳೆಗಳು..! ಎದ್ದು ಬಿದ್ದು ಪ್ರಾಣ ಉಳಿಸಿಕೊಂಡ ಕಾಡಿನ ರಾಜ   title=
Crocodile Viral Video (photo youtube)

ಬೆಂಗಳೂರು : Crocodile Viral Video: ಕಾಡು ಪ್ರಾಣಿಗಳು ಎಂದ ಕೂಡಲೇ ಅದೇನೋ ಒಂಥರಾ ಭಯ ಆವರಿಸಿ ಬಿಡುತ್ತದೆ. ಅದರಲ್ಲೂ ಕಾಡು ಪ್ರಾಣಿಗಳ ನಡುವಿನ ಕಾಳಗ ನೋಡಿದರೆ ಹೇಳುವುದೇ ಬೇಡ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಬಹಳಷ್ಟು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವುಗಳಲ್ಲಿ ಕೆಲವನ್ನು ನೋಡಿದಾಗ ಕರುಳು ಹಿಂಡಿದಂತಾಗುತ್ತದೆ. ಇನ್ನು ಕೆಲವನ್ನು ನೋಡಿದಾಗ ಬೆಚ್ಚಿ ಬೀಳುವಂತಾಗುತ್ತದೆ. 

ಕಾಡಿನ ರಾಜನಾದ ಸಿಂಹದ ಮುಂದೆ ಯಾವ ಪ್ರಾಣಿಯೂ ನಿಲ್ಲುವುದಿಲ್ಲ.  ಅದಕ್ಕೆ ಸಿಂಹ ಕಾಡಿನ ರಾಜ. ಆದರೆ ಸಿಂಹದ ಮೇಲೆ ದಾಳಿ ಮಾಡಲು ಎದುರಾಳಿಗಳು ಗುಂಪು ಗುಂಪಾಗಿ ಬಂದಾಗ ಕಾಡಿನ ರಾಜ ಕೂಡಾ ಹಿಂದೆ ಸರಿಯಬೇಕಾಗುತ್ತದೆ. ಹೌದು, ಇಲ್ಲಿ ಸಿಂಹದ ಮೇಲೆ ದಾಳಿಗೆ ಮುಂದಾಗಿರುವುದು ಮೊಸಳೆಗಳು. ಅದು ಕೂಡಾ ಒಂದಲ್ಲ,  ಎರಡಲ್ಲ, ಮೂರಲ್ಲ ಬರೋಬ್ಬರಿ 40 ಕ್ಕೂ ಹೆಚ್ಚು ಮೊಸಳೆಗಳು.  ಇಷ್ಟೊಂದು ಮೊಸಳೆಗಳ ಮಧ್ಯೆ ಸಿಂಹವೊಂದು ಸಿಕ್ಕಿಬಿದ್ದಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ : Viral Video: ಡ್ಯಾನ್ಸ್ ಮಾಡುತ್ತಾ ಮಹಿಳೆಯರ ಮೇಲೆ ಬಿದ್ದ ವ್ಯಕ್ತಿ, ಆಮೇಲೇನಾಯ್ತು..?

ಫ್ಯಾಕ್ಟ್ಸ್ ಟೇಲ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸಿಂಹವೊಂದು ಮೊಸಳೆಗಳ ಗುಂಪಿನಿಂದ ಪ್ರಾಣ ಉಳಿಸಿಕೊಂಡು ಓಡಿ ಹೋಗುವುದನ್ನು ಕಾಣಬಹುದು.  ಒಂದು ದ್ವೀಪದ ಮೇಲೆ ಸಿಂಹ ನಿಂತಿರುವುದನ್ನು ಇಲ್ಲಿ ಕಾಣಬಹುದು.  ಆದರೆ ಸುತ್ತ 40 ಕ್ಕೂ ಹೆಚ್ಚು ಮೊಸಳೆಗಕಳು ಸಿಂಹವನ್ನು ಸುತ್ತುವರೆದಿದೆ. ಮೊಸಳೆಗಳ ಗುಂಪನ್ನು ನೋಡಿದ ಸಿಂಹಕ್ಕೆ ತಾನು ಇನ್ನು ಹೆಚ್ಚು ಹೊತ್ತು ಈ ಜಾಗದಲ್ಲಿ ನಿಲ್ಲುವುದು ಸಾಧ್ಯವಿಲ್ಲ ಎನ್ನುವ ಸತ್ಯ ಗೊತ್ತಾಗುತ್ತದೆ.  ಅಪಾಯದ ಸೂಚನೆ ಸಿಗುತ್ತಿದ್ದಂತೆಯೇ ಸಿಕ್ಕ ಅವಕಾಶ ಬಳಸಿಕೊಂಡ ಸಿಂಹ ಮೊಸಳೆಗಳ ಮೇಲೆಯೇ ಹಾರಿಕೊಂಡು ದಡ  ಸೇರಿ ಬಿಡುತ್ತದೆ. 

 

ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ನಡೆದ ಘಟನೆ :
ಸಿಂಹ ತಮ್ಮ ಮೇಲಿನಿಂದ ಹಾರಿ ಹೋಗುತ್ತಿದ್ದಂತೆಯೇ ಮೊಸಳೆಗಳು ಕೂಡಾ ಸಿಂಹವನ್ನು ಹಿಡಿಯಲು ಪ್ರಯತ್ನಿಸಿವೆ. ಆದರೂ ಮೊಸಳೆಗಳಿಂದ ತಪ್ಪಿಸಿಕೊಂಡು ಹೋಗುವಲ್ಲಿ ಸಿಂಹ ಯಶಸ್ವಿಯಾಗಿದೆ. ವೀಡಿಯೊದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಘಟನೆಯು ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದ್ದಾಗಿದೆ.   ಆದರೆ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. 

ಇದನ್ನೂ ಓದಿ :  ಗಾಯಗೊಂಡಿದ್ದ ಪಕ್ಷಿ ಕಾಪಾಡಲು ಹೋದವರಿಗೆ ಕಾರು ಡಿಕ್ಕಿ: ಇಬ್ಬರ ಪ್ರಾಣಪಕ್ಷಿ ಹಾರೇಹೋಯ್ತು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News