ಕಾಂಗ್ರೆಸ್ ನಾಯಕರು ಸ್ವಂತಿಕೆ ಮರೆತು ‘ಜೀ ಹುಜೂರ್’ ಸಂಸ್ಕೃತಿಗೆ ಶರಣಾಗಿದ್ದಾರೆ: ಬಿಜೆಪಿ

Dynastic politics: ಈಗ ಅಧಿಕಾರವಿಲ್ಲದೇ ರಾಜಸ್ಥಾನದ ಹೊರತಾಗಿ ನೀರಿನಿಂದ ಹೊರತೆಗೆದ ಮೀನಿನಂತಾಗಿರುವ ಕಾಂಗ್ರೆಸ್ ಸಂಪತ್ಭರಿತವಾಗಿರುವ ನಮ್ಮ ರಾಜ್ಯವನ್ನು ತಮ್ಮ ನಾಯಕರ ತಿಜೋರಿಗಳನ್ನು ತುಂಬಿಸಿಕೊಳ್ಳಲು ಎಟಿಎಂನಂತೆ ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Dec 13, 2022, 12:22 PM IST
  • ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ಕಾಂಗ್ರೆಸ್ ನಾಯಕರು ಸ್ವಂತಿಕೆ ಮರೆತು ‘ಜೀ ಹುಜೂರ್‌’ ಸಂಸ್ಕೃತಿಗೆ ಶರಣಾಗಿದ್ದಾರೆ
  • ಈಗ ಅಧಿಕಾರವಿಲ್ಲದೇ ಕಾಂಗ್ರೆಸ್ ರಾಜಸ್ಥಾನದ ಹೊರತಾಗಿ ನೀರಿನಿಂದ ಹೊರತೆಗೆದ ಮೀನಿನಂತಾಗಿದೆ
  • ಸಂಪತ್ಭರಿತವಾಗಿರುವ ನಮ್ಮ ರಾಜ್ಯವನ್ನು ತಮ್ಮ ನಾಯಕರ ತಿಜೋರಿ ತುಂಬಿಸಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ
ಕಾಂಗ್ರೆಸ್ ನಾಯಕರು ಸ್ವಂತಿಕೆ ಮರೆತು ‘ಜೀ ಹುಜೂರ್’ ಸಂಸ್ಕೃತಿಗೆ ಶರಣಾಗಿದ್ದಾರೆ: ಬಿಜೆಪಿ title=
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ಕಾಂಗ್ರೆಸ್ ಪಕ್ಷದ ನಾಯಕರು ಸ್ವಂತಿಕೆಯನ್ನೇ ಮರೆತು "ಜೀ ಹುಜೂರ್‌" ಸಂಸ್ಕೃತಿಗೆ ಶರಣಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.

‘ಕರ್ನಾಟಕ ಕಾಂಗ್ರೆಸ್‌ ಪಟಾಲಂ ದಿಲ್ಲಿಯಲ್ಲಿದೆ. ಕನ್ನಡಿಗ ಮಲ್ಲಿಕಾರ್ಜುನ್ ಖರ್ಗೆರವರೇ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕೆ ಈಗಲೂ ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ಕಾಂಗ್ರೆಸ್ ನಾಯಕರು ಸ್ವಂತಿಕೆ ಮರೆತು "ಜೀ ಹುಜೂರ್‌" ಸಂಸ್ಕೃತಿಗೆ ಶರಣಾಗಿದ್ದಾರೆ’ ಅಂತಾ ಕುಟುಕಿದೆ.

ಇದನ್ನೂ ಓದಿ: ಮೌಢ್ಯಕ್ಕೆ ಸಡ್ಡು ಹೊಡೆದ ಎರಡನೇ ಸಿಎಂ ಬಸವರಾಜ ಬೊಮ್ಮಾಯಿ!!

‘2013ರಿಂದ 2018ರವರೆಗೆ ಏನಾಗಿತ್ತು ನೆನಪಿಸಿಕೊಳ್ಳಿ. ಕೆ.ಸಿ.ವೇಣುಗೋಪಾಲ್ ಎಂಬ ಸೋನಿಯಾ ಗಾಂಧಿಯವರ ಅಂಚೆಯಣ್ಣನ ಪಾದಾರವಿಂದಗಳಿಗೆ ರಾಜ್ಯದ ಅಂದಿನ ಕಾಂಗ್ರೆಸ್‌ ಸರ್ಕಾರವನ್ನು ಅರ್ಪಿಸಲಾಗಿತ್ತು. ಸಿದ್ದರಾಮಯ್ಯನವರು ಕನ್ನಡ ಅಸ್ಮಿತೆಯನ್ನು ಅವರ ಮುಂದೆ ನೈವೇದ್ಯಕ್ಕಿಟ್ಟಿದ್ದರು. ಈಗ ಅಧಿಕಾರವಿಲ್ಲದಿದ್ದರೂ ಅದೇ ಸಂಸ್ಕೃತಿ ಮರುಕಳಿಸಿದೆ’ ಅಂತಾ ಬಿಜೆಪಿ ಟೀಕಿಸಿದೆ.

‘ಈಗ ಅಧಿಕಾರವಿಲ್ಲದೇ ರಾಜಸ್ಥಾನದ ಹೊರತಾಗಿ ನೀರಿನಿಂದ ಹೊರತೆಗೆದ ಮೀನಿನಂತಾಗಿರುವ ಕಾಂಗ್ರೆಸ್ ಸಂಪತ್ಭರಿತವಾಗಿರುವ ನಮ್ಮ ರಾಜ್ಯವನ್ನು ತಮ್ಮ ನಾಯಕರ ತಿಜೋರಿಗಳನ್ನು ತುಂಬಿಸಿಕೊಳ್ಳಲು ಎಟಿಎಂನಂತೆ ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ರಾಜ್ಯಾಧ್ಯಕ್ಷರಿಂದ ಹಿಡಿದು ಯುವ ಕಾಂಗ್ರೆಸ್‌ ಅಧ್ಯಕ್ಷರವರೆಗೂ ಬೇಲ್‌ ಮೇಲೆ ಬಾಳು ಸಾಗಿಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಕದ ರಾಜ್ಯದಿಂದ ನಾಯಕರನ್ನು ಆಮದು ಮಾಡಿಕೊಂಡು ಅವರಿಂದಲೂ ರಾಜ್ಯವನ್ನು ಲೂಟಿ ಹೊಡೆಸಿ ಗೃಹಮಂತ್ರಿಗಳನ್ನಾಗಿಯೂ ಮಾಡಿದ್ದರು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಬಿಎಂಟಿಸಿಯ ಎಂಟು ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್

‘ಡಬಲ್‌ ಎಂಜಿನ್‌ ವೇಗದ ಅಭಿವೃದ್ಧಿಯನ್ನು ರಾಜ್ಯಕ್ಕೆ ನೀಡಲು ತಲೆ ಕೆಳಗಾಗಿ ನಿಂತರೂ ಸಾಧ್ಯವಾಗದ ಕಾಂಗ್ರೆಸ್ ಯಾವ ಮಟ್ಟಕ್ಕಾದರೂ ಇಳಿದು ಅಧಿಕಾರಕ್ಕೆ ಬಂದು ರಾಜ್ಯವನ್ನು #ATM ಆಗಿ ಮಾಡಿಕೊಂಡು ಲೂಟಿ ಹೊಡೆಯಲು ಹವಣಿಸುತ್ತಿದೆ. ಕನ್ನಡಿಗರು ಇದನ್ನು ಎಂದಿಗೂ ಸಾಧ್ಯವಾಗಿಸುವುದಿಲ್ಲ’ವೆಂದು ಬಿಜೆಪಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News