ಮಹಿಳೆಯ ಹೃದಯ ಅಡುಗೆ ಮಾಡಿ ಬಡಿಸಿದವನಿಗೆ ಜೀವಾವಧಿ ಶಿಕ್ಷೆ

ಅಮೇರಿಕಾದ ಆಂಡರ್ಸನ್ ಎಂಬ ವ್ಯಕ್ತಿ ಆಂಡ್ರಿಯಾ ಬ್ಲಾಂಕೆನ್‌ಶಿಪ್ ಎಂಬಾಕೆ ಮಹಿಳೆಯನ್ನು ಕೊಂದು ಆಕೆಯ ಹೃದಯ ಬೇಯಿಸಿ ಆಲೂಗಡ್ಡೆ ಜೊತೆಗೆ ಕುದಿಸಿ ನಂತರ ತಮ್ಮ ಕುಟುಂಬದವರಿಗೆ ಊಟಕ್ಕೆ ಬಡಿಸಿದ್ದ ಎನ್ನಲಾಗಿದೆ. ಅಲ್ಲದೆ, ಈ ಘಟನೆಯ ನಂತರ ಇನ್ನೂ ಇಬ್ಬರನ್ನು ಇರಿದು ಕೊಲೆ ಮಾಡಿದ್ದನಂತೆ. ಡ್ರಗ್ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಗೊಳಗಾಗಿದ್ದ ಆಂಡರ್ಸನ್ ಕೇವಲ ಮೂರು ವರ್ಷಗಳ ಶಿಕ್ಷೆ ಅನುಭವಿಸಿದ್ದ ಎನ್ನುವುದೇ ಅಚ್ಚರಿ.

Written by - VISHWANATH HARIHARA | Edited by - Krishna N K | Last Updated : Mar 17, 2023, 07:36 PM IST
  • ಮಹಿಳೆಯನ್ನು ಕೊಂದು ಆಕೆಯ ಹೃದಯ ಬೇಯಿಸಿ ಆಲೂಗಡ್ಡೆ ಜೊತೆಗೆ ಕುದಿಸಿದ ವ್ಯಕ್ತಿ.
  • ಅಮೇರಿಕಾದ ಆಂಡರ್ಸನ್ ಎಂಬ ವ್ಯಕ್ತಿ ಆಂಡ್ರಿಯಾ ಬ್ಲಾಂಕೆನ್‌ಶಿಪ್ ಎಂಬುವನಿಂದ ಕೃತ್ಯ.
  • ಆಂಡರ್ಸನ್ ಕೇವಲ ಮೂರು ವರ್ಷಗಳ ಶಿಕ್ಷೆ ಅನುಭವಿಸಿದ್ದ ಎನ್ನುವುದೇ ಅಚ್ಚರಿ.
ಮಹಿಳೆಯ ಹೃದಯ ಅಡುಗೆ ಮಾಡಿ ಬಡಿಸಿದವನಿಗೆ ಜೀವಾವಧಿ ಶಿಕ್ಷೆ title=

Man eat woman heart : ಮಹಿಳೆಯನ್ನು ಕೊಂದು ಆಕೆಯ ಹೃದಯ ಕಿತ್ತು ಬೇಯಿಸಿ ಕುಟುಂಬದವರಿಗೆ ಅಡುಗೆ ಮಾಡಿ ಬಡಿಸಿದ ನಂತರ 4 ವರ್ಷದ ಮಗು ಸೇರಿದಂತೆ ಇಬ್ಬರನ್ನು ಕೊಂದ ವ್ಯಕ್ತಿಗೆ ಅಮೆರಿಕದ ಒಕ್ಲಹೋಮ ರಾಜ್ಯದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ದಿ ಇಂಡಿಪೆಂಡೆಂಟ್ ಪ್ರಕಾರ, 44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಎಂಬಾತ 2021ರಲ್ಲಿ ಜೈಲಿನಿಂದ ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಬಿಡುಗಡೆಯಾಗಿ ಈ ಅಮಾನುಷ ಕೃತ್ಯ ಎಸಗಿದ್ದಾನೆ. 

ಈ ಪಾಪಿ ಆಂಡರ್ಸನ್, ಆಂಡ್ರಿಯಾ ಬ್ಲಾಂಕೆನ್‌ಶಿಪ್ ಎಂಬಾಕೆಯನ್ನು ಕೊಂದು ಆಕೆಯ ಹೃದಯವನ್ನು ಹೊರ ತೆಗೆದು ತನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಆಲೂಗಡ್ಡೆ ಜೊತೆಗೆ ಬೇಯಿಸಿದ್ದ. ನಂತರ ಹೃದಯವನ್ನು ಅದನ್ನು ದಂಪತಿಗೆ ಊಟಕ್ಕೆ ಬಡಿಸಿದ್ದ ಎನ್ನಲಾಗಿದೆ. ಇದಾದ ನಂತರ ವೃದ್ಧ ಲಿಯಾನ್ ಪೇಯ್ ಮತ್ತು ಅವರ ಮೊಮ್ಮಗಳು ಕೆಯೋಸ್ ಯೇಟ್ಸ್ ನ್ನು ಇರಿದು ಕೊಲೆ ಮಾಡಿದ್ದನಂತೆ. ಡ್ರಗ್ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಗೊಳಗಾಗಿದ್ದ ಆಂಡರ್ಸನ್ ಕೇವಲ ಮೂರು ವರ್ಷಗಳ ಶಿಕ್ಷೆ ಅನುಭವಿಸಿದ್ದ.  

ಇದನ್ನೂ ಓದಿ: ಪಾರ್ಟಿಗೆಂದು ಮನೆಗೆ ಕರೆದ, ಲೈಂಗಿಕ ಕ್ರಿಯೆ ನಡೆಸಿದ, ನಂತರ ಗರ್ಲ್ ಫ್ರೆಂಡ್ ಳನ್ನು ತುಂಡುತುಂಡಾಗಿ ಕತ್ತರಿಸಿ ತಿಂದ!

ಆಂಡರ್ಸನ್ ಕೊಲೆ, ಕೊಲೆ ಯತ್ನ ಪ್ರಕರಣದಲ್ಲಿ  ತಪ್ಪಿತಸ್ಥನೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಹಿಳೆ ಕೊಂದು ಹೃದಯವನ್ನು ಬೇಯಿಸಿ ಉಣಪಡಿಸಿರುವ ಆಂಡರ್ಸನ್ ಕೃತ್ಯವನ್ನು ಕಂಡು ಸ್ಥಳೀಯರು ಸಹ ಬೆಚ್ಚಿಬಿದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News