ಪಾರ್ಟಿಗೆಂದು ಮನೆಗೆ ಕರೆದ, ಲೈಂಗಿಕ ಕ್ರಿಯೆ ನಡೆಸಿದ, ನಂತರ ಗರ್ಲ್ ಫ್ರೆಂಡ್ ಳನ್ನು ತುಂಡುತುಂಡಾಗಿ ಕತ್ತರಿಸಿ ತಿಂದ!

This Is Not Film Story: ಬಾಯ್ಫ್ರೆಂಡ್ ಮೊದಲು ತನ್ನ ಗರ್ಲ್ ಫ್ರೆಂಡ್ ಳನ್ನು ಪಾರ್ಟಿಗೆಂದು ಮನೆಗೆ ಕರೆದಿದ್ದಾನೆ. ಬಳಿಕ ಆಕೆಯ ಜೊತೆಗೆ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಬಳಿಕ ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ ತಿಂಡಿದ್ದಾನೆ. ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಆತ ಹೇಳಿದ ಕಾರಣ ಕೇಳಿ ಪೊಲೀಸರೆ ದಂಗಾಗಿದ್ದಾರೆ. ಬೆಚ್ಚಿಬೀಳಿಸುವಂತಹ ಈ ಕ್ರೈಮ್ ರಿಪೋರ್ಟ್ ರಷ್ಯಾದಿಂದ ವರದಿಯಾಗಿದೆ.  

Written by - Nitin Tabib | Last Updated : Mar 12, 2023, 06:40 PM IST
  • ಪಾರ್ಟಿಯಲ್ಲಿ ಕುಡಿಯಲು ಸಾಕಷ್ಟು ಸಂಗತಿಗಳಿದ್ದವು,
  • ಆದರೆ ತಿನ್ನಲು ಏನೂ ಇರಲಿಲ್ಲ ಎಂದು ಮ್ಯಾಕ್ಸಿಮ್ ಹೇಳಿದ್ದಾನೆ.
  • ರಾತ್ರಿ ಹಸಿವಾದಾಗ ಹೊರಗೆ ಹೋಗಲು ಮನಸ್ಸಾಗಲಿಲ್ಲ.
ಪಾರ್ಟಿಗೆಂದು ಮನೆಗೆ ಕರೆದ, ಲೈಂಗಿಕ ಕ್ರಿಯೆ ನಡೆಸಿದ, ನಂತರ ಗರ್ಲ್ ಫ್ರೆಂಡ್ ಳನ್ನು ತುಂಡುತುಂಡಾಗಿ ಕತ್ತರಿಸಿ ತಿಂದ! title=
ಹೀಗೊಂದು ರಿಯಲ್ ಕ್ರೈಂ ಸ್ಟೋರಿ

Real Crime Story: ಜಗತ್ತಿನಲ್ಲಿ ನಡೆಯುವ ಕೆಲ ಕ್ರೈಮ್ ಘಟನೆಗಳು ನಮ್ಮ ಎದೆಯನ್ನು ಒಂದು ಕ್ಷಣ ಝಲ್ ಎನ್ನಿಸುತ್ತವೆ. ಸಮಾಜದಲ್ಲಿ ಇಂತಹ ಅಪರಾಧಗಳು ನಡೆಯಲು ಕಾರಣ ಏನಿರಬಹುದು ಎಂದು ಯೋಚಿಸಲು ಅವು ಜನರನ್ನು ಒತ್ತಾಯಿಸುತ್ತವೇ, ಇಂತಹ ಭಯಾನಕ ನಿರ್ಧಾರಕ್ಕೆ ಬರಲು ಒತ್ತಾಯಿಸಿದ ಆ ಸಂಗತಿಗಳು ಯಾವುವು ಎಂಬುದನ್ನೂ ಯೋಚಿಸಲು ಈಡುಮಾಡುತ್ತವೆ. ಇತ್ತೀಚಿಗೆ ಇಂತಹ ಹಲವು ಪ್ರಕರಣಗಳು ಮುನ್ನೆಲೆಗೆ ಬಂದಿದ್ದು, ಲಿವ್ ಇನ್ ನಲ್ಲಿ ವಾಸಿಸುತ್ತಿರುವ ಓರ್ವ ಬಾಯ್ ಫ್ರೆಂಡ್ ತನ್ನ ಗೆಳತಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ್ದಾನೆ. 14 ವರ್ಷಗಳ ಹಿಂದೆ ಇಂಥದ್ದೊಂದು ಬರ್ಬರ ಹತ್ಯೆಯ ಪ್ರಕರಣ ಬಂದಿತ್ತು. ಈ ಸುದ್ದಿ ಜನರಲ್ಲಿ ಭಾರಿ ಆತಂಕ ಮೂದಿಸಿತ್ತು. 2009 ರಲ್ಲಿ ನಡೆದ ಕರೀನಾ ಕೊಲೆ ಪ್ರಕರಣದ ಬಗ್ಗೆ ನಾವು ಮಾತನಾಡುತ್ತಿದ್ದೇವೆ.

ಬಾಯ್ ಫ್ರೆಂಡ್  ಮೊದಲು ಗೆಳತಿಯನ್ನು ಪಾರ್ಟಿಗಾಗಿ ಮನೆಗೆ ಕರೆದಿದ್ದಾನೆ. ನಂತರ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ಆಕೆಯನ್ನು ತುಂಡು ತುಂಡು ಮಾಡಿ ಕತ್ತರಿಸಿ ತಿಂದಿದ್ದಾನೆ. ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಅಪರಾಧವನ್ನು ಒಪ್ಪಿಕೊಂಡ ಆತ ಅದರ ಹಿಂದಿನ ಕಾರಣ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಅದನ್ನು ಕೇಳಿದ ಪೊಲೀಸರೆ ಕುಸಿದು ಬಿದ್ದಿದ್ದಾರೆ.ಇದು ರಷ್ಯಾದ ಅಚ್ಚರಿಯ ಘಟನೆ. ಇಲ್ಲಿ 16 ವರ್ಷದ ಕರೀನಾ ಬರ್ದುಚಿಯಾನ್ ತನ್ನ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದಳು. ಆಕೆಗೆ  ಸಂಗೀತ, ಕವನಗಳು ಮತ್ತು ಕಥೆಗಳಲ್ಲಿ ಒಲವು ಇತ್ತು. ಈ ಕಾರಣಕ್ಕಾಗಿ, ಆಕೆ  ಮ್ಯಾಕ್ಸಿಮ್ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದಳು.

ಸಂಗೀತ-ಕಥೆಗಳ ಬಗ್ಗೆ ಒಲವಿತ್ತು
ಮ್ಯಾಕ್ಸಿಮ್ ಗೋಥ್ ಡಾರ್ಕ್ ನೆಸ್ ಫಾಲೋವರ್ ನೆಚರ್ ವ್ಯಕ್ತಿ. ಆತನೂ ಕೂಡ  ಕರೀನಾಳಂತೆಯೇ  ಕಥೆಗಳು, ಕವನಗಳು ಮತ್ತು ಸಂಗೀತವನ್ನು ಇಷ್ಟಪಡುತ್ತಿದ್ದ. ಗೋತ್ ತನ್ನ ಸ್ವಭಾವಕ್ಕೆ ತಕ್ಕಂತೆ ರಕ್ತಪಿಶಾಚಿಯಂತೆ ಬಟ್ಟೆಗಳನ್ನು ಧರಿಸುತ್ತಿದ್ದರು. ಕರೀನಾ ಮತ್ತು ಮ್ಯಾಕ್ಸಿಮ್ ಗೊಲೊವಾಟ್ಸಿಖ್ ಸಂಗೀತ ಕಚೇರಿಯಲ್ಲಿ ಮೊದಲು ಭೇಟಿಯಾಗಿದ್ದಾರೆ. ಒಂದೇ ತರಹದ ಹವ್ಯಾಸಗಳಿದ್ದುದರಿಂದ ಇಬ್ಬರೂ ಹತ್ತಿರವಾಗತೊಡಗಿದರು. ಕರೀನಾ ಮ್ಯಾಕ್ಸಿಮ್ ಬಗ್ಗೆ ಕ್ರೇಜ್ ಹುಟ್ಟಿಕೊಂಡಿತು ಮತ್ತು ಆತನಿಗಾಗಿ ಕವಿತೆಗಳನ್ನು ಸಹ ಬರೆದಳು.

ಡೈಲಿ ಮೇಲ್ ವರದಿಯ ಪ್ರಕಾರ, ಮ್ಯಾಕ್ಸಿಮ್ ನನ್ನು  ಭೇಟಿಯಾದ ಬಳಿಕ  ಕರೀನಾಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದವು. ಅವಳು ಕೂಡ ಆತನಂತೆ ಡ್ರೆಸ್ಸಿಂಗ್ ಮಾಡಿಕೊಳ್ಳಲು ಮತ್ತು ವರ್ತಿಸಲು ಪ್ರಾರಂಭಿಸಿದಳು. ಆಗ ಆಕೆಯ  ತಾಯಿ ಮ್ಯಾಕ್ಸಿಮ್ ನಿಂದ  ದೂರವಿರಲು ಕರೀನಾ ಬಳಿ ಕೇಳಿಕೊಂಡರು ಆದರೆ ಆಕೆ  ಒಪ್ಪಲಿಲ್ಲ. ಜನವರಿ 19, 2009 ರಂದು, ಆಕೆ  ತನ್ನ ತಾಯಿಗೆ ಗ್ರೂಪ್ ಸ್ಟಡಿಗಾಗಿ ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿದಳು ಮತ್ತು ಬೆಳಗ್ಗೆ  7 ಗಂಟೆಗೆ ಮೊದಲು ಬರುವುದಾಗಿ ಹೇಳಿದಳು. ಬೆಳಗ್ಗೆ ಕರೀನಾ ಬಾರದೇ ಇದ್ದಾಗ ತಾಯಿ ಆಕೆಯ ಸ್ನೇಹಿತೆಗೆ ಕರೆ ಮಾಡಿದ್ದಾಎ, ಆದರೆ ಕರೀನಾ ರಾತ್ರಿಯೇ ಹೊರಟು ಹೋಗಿರುವುದಾಗಿ ಸ್ನೇಹಿತೆ ತಿಳಿಸಿದ್ದಾಳೆ. ಇದಾದ ನಂತರ ತಾಯಿಯ ಕಾಲ್ ಕೆಳಗಿನ ನೆಲವೆ ಕುಸಿದಿದೆ.

ತಾಯಿ ಕೈಸೇರಿದ ಡೈರಿ 
ಇದರ ನಂತರ, ತಾಯಿಗೆ ಒಂದು ಡೈರಿ ಸಿಕ್ಕಿದೆ, ಅದರಲ್ಲಿ ಮ್ಯಾಕ್ಸಿಮ್ ಬಗ್ಗೆ ಕರೀನಾ ಅನೇಕ ವಿಷಯಗಳನ್ನು ಬರೆದಿದ್ದಳು. ತಾಯಿ ಕೂಡಲೇ ಪೊಲೀಸರ ಮೊರೆ ಹೋಗಿದ್ದು, ಈ ವ್ಯಕ್ತಿಯನ್ನು ಹುಡುಕಿ ತನ್ನ ಮಗಳನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ. ಎರಡು ವಾರಗಳ ನಂತರ, ಡಸ್ಟ್‌ಬಿನ್ ಬಳಿಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ಒಂದು ಕರೆ ಬರುತ್ತದೆ. ಆಗ ಆ ಸ್ಥಳದಲ್ಲಿ ಪೊಲೀಸರಿಗೆ ಮೃತದೇಹದ ತುಂಡುಗಳು ಪತ್ತೆಯಾಗಿದ್ದು, ಗುರುತು ಪತ್ತೆಯಾಗಿಲ್ಲ. ಆದರೆ ವಿಧಿವಿಜ್ಞಾನ ತಜ್ಞರು ಸಾಮ್ಯತೆಗಳ ಆಧಾರದ ಮೇಲೆ ಅದು ಕರೀನಾಳ ದೇಹ ಎಂದು ಗುರುತಿಸಿದ್ದಾರೆ.

ಇದಾದ ನಂತರ ಪೊಲೀಸರಿಗೆ ಎಕಟೆರಿನಾ ಜಿನೋವಿವಾ ಎಂಬ ಹುಡುಗಿಯಿಂದ ಕರೆ ಬರುತ್ತದೆ . ಏಕೆಂದರೆ ಮ್ಯಾಕ್ಸಿಮ್ ಆಯೋಜಿಸಿದ್ದ ಪಾರ್ಟಿಯಲ್ಲಿ ಕರೀನಾ ಜೊತೆಗೆ ಆಕೆಯೂ ಕೂಡ ಕೂಡ ಇದ್ದಳು. ಈ ಪಾರ್ಟಿ ಎಕಟೆರಿನಾ ಅವರ ಮನೆಯಲ್ಲಿತ್ತು, ಇದರಲ್ಲಿ ಕರೀನಾ, ಮ್ಯಾಕ್ಸಿಮ್ ಹೊರತುಪಡಿಸಿ, ಇಬ್ಬರು ಹುಡುಗರು ಮತ್ತು ಯೂರಿ ಎಂಬ ಹುಡುಗಿ ಇದ್ದಳು. ಈ ಜನರು ತಡರಾತ್ರಿಯವರೆಗೂ ವಿಪರೀತ ನಶೆಯಲ್ಲಿದ್ದರು. ಪಾರ್ಟಿಗೆ ಬಂದ ಹುಡುಗರಿಬ್ಬರೂ ವಾಪಸ್ ಹೋದರು.

ಸತ್ಯ ಬಾಯ್ಬಿಟ್ಟ ಮ್ಯಾಕ್ಸಿಮ್
ಪಾರ್ಟಿ ಬಳಿಕ ಎಕಟೆರಿನಾ ತನ್ನ ಕೋಣೆಯಲ್ಲಿ ಮಲಗಲು ಹೋದಳು. ಯೂರಿ, ಮ್ಯಾಕ್ಸಿಮ್ ಮತ್ತು ಕರೀನಾ ಪಾರ್ಟಿ ಮಾಡುತ್ತಲೇ ಇದ್ದರು. ಎಕಟೆರಿನಾ ಬೆಳಗ್ಗೆ  ಆಫೀಸ್‌ಗೆ ಹೋಗಲು ರೆಡಿಯಾದಾಗ ಕರೀನಾ ಮನೆಯಲ್ಲಿ ಇರಲಿಲ್ಲ. ಬಳಿಕ ಆಕೆ  ಯೂರಿ ಮತ್ತು ಮ್ಯಾಕ್ಸಿಮ್ ಅವರನ್ನು ವಿಚಾರಿಸಿದ್ದಾಳೆ, ಆಗ ಅವರು  ಕರೀನಾ ಅವಳ  ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದಾರೆ. ಎಕಟೆರಿನಾ ಸಂಜೆ ಮನೆಗೆ ಹಿಂದಿರುಗಿದಾಗ, ಯೂರಿ ಮತ್ತು ಮ್ಯಾಕ್ಸಿಮ್ ಅಲ್ಲಿಯೇ  ಕುಳಿತಿರುವುದನ್ನು ಅವಳು ನೋಡಿದ್ದಾಳೆ. ಎಕಟೆರಿನಾಗೆ ಖಾದ್ಯವನ್ನು ಸಿದ್ಧಪಡಿಸಿದ್ದೇವೆ ಎಂದು ಇಬ್ಬರೂ ಹೇಳಿದ್ದಾರೆ. ಅದನ್ನು ತಿಂದಾಗ ಏನೋ ವಿಚಿತ್ರ ಅನ್ನಿಸಿ ಅದೇನು ಎಂದು ವಿಚಾರಿಸಿದ್ದಾಳೆ. ಈ ಖಾದ್ಯದಲ್ಲಿರುವ ಮಾಂಸವು ಕರೀನಾ ಶವದ ಭಾಗವಾಗಿದೆ ಎಂದು ಮ್ಯಾಕ್ಸಿಮ್ ಹೇಳಿದ್ದಾನೆ.

ಇದನ್ನೂ ಓದಿ-Weird News: 9 ತಿಂಗಳು ಅಲ್ಲ 9 ವರ್ಷಗಳವರೆಗೆ ಗರ್ಭ ಧರಿಸಿದ ಮಹಿಳೆ, ನಂತರ ಆಗಿದ್ದೇನು ನೀವೇ ಓದಿ!

ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಎಕಟೆರಿನಾ ಮ್ಯಾಕ್ಸಿಮ್ ಮೊದಲು ಕರೀನಾ ಜೊತೆಗೆ  ಲೈಂಗಿಕ ಸಂಬಂಧ ಬೆಳೆಸಿ  ಮತ್ತು ನಂತರ ಒಟ್ಟಿಗೆ ಸ್ನಾನ ಮಾಡಲು ಆಕೆಯನ್ನು ಬಾತ್ರೂಮ್ಗೆ ಕರೆದೊಯ್ದ ಎಂದು ಹೇಳಿದ್ದಾಳೆ.. ಯೂರಿ ಹಿಂದಿನಿಂದ ಸ್ನಾನಗೃಹಕ್ಕೆ ಪ್ರವೇಶಿಸಿ ಆಕೆಯನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವುದಾಗಿ ಹೇಳಿದ್ದಾಳೆ. ಇದರ ನಂತರ, ಮ್ಯಾಕ್ಸಿಮ್ ಆಕೆಯ ಮೃತ ದೇಹವನ್ನು ತುಂಡುಗಳಾಗಿ ಕತ್ತರಿಸಿ ಕೆಲವು ಭಾಗವನ್ನು ಅಡುಗೆಗಾಗಿ ಬಿಟ್ಟು, ದೇಹದ ಉಳಿದ ಭಾಗವನ್ನು ವಿಲೇವಾರಿ ಮಾಡಿದ್ದಾನೆ ಎಂದಿದ್ದಾಳೆ. ಎಕಟೆರಿನಾ ಬಳಿ ಮಾಹಿತಿ ಪಡೆದ ಪೊಲೀಸರು ಯೂರಿ ಮತ್ತು ಮ್ಯಾಕ್ಸಿಮ್ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!

'ಖಾದ್ಯ ತುಂಬಾ ರುಚಿಯಾಗಿತ್ತು'
ಪೋಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ, ಪಾರ್ಟಿಯಲ್ಲಿ ಕುಡಿಯಲು ಸಾಕಷ್ಟು ಸಂಗತಿಗಳಿದ್ದವು ಆದರೆ ತಿನ್ನಲು ಏನೂ ಇರಲಿಲ್ಲ  ಎಂದು ಮ್ಯಾಕ್ಸಿಮ್ ಹೇಳಿದ್ದಾನೆ. ರಾತ್ರಿ ಹಸಿವಾದಾಗ ಹೊರಗೆ ಹೋಗಲು ಮನಸ್ಸಾಗಲಿಲ್ಲ. ಹೀಗಾಗಿ ಕರೀನಾಳನ್ನು ಕೊಂದು ಮಾಂಸ ತಿನ್ನಲು ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ. 2017ರಲ್ಲಿ ಜೈಲಿನಲ್ಲಿ ಮ್ಯಾಕ್ಸಿಮ್ ಶವ ಪತ್ತೆಯಾಗಿತ್ತು. ವಿಚಾರಣೆಯ ಸಮಯದಲ್ಲಿ, ಮ್ಯಾಕ್ಸಿಮ್ ತನ್ನ ಮೃಗತ್ವದ ಪುರಾವೆಗಳನ್ನು ನೀಡಿದ್ದ ಮತ್ತು ಕರೀನಾ ಮೃತದೇಹದ ತುಂಡುಗಳಿಂದ ಮಾಡಿದ ಖಾದ್ಯ ತುಂಬಾ ರುಚಿಕರವಾಗಿತ್ತು ಎಂದು ಹೇಳಿದ್ದಾನೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News