Viral Video : ಅಳಿಯನ ಬಾಯಿಗೆ ಸಿಗರೇಟ್‌ ಇಟ್ಟು ಸ್ವಾಗತಿಸಿದ ಅತ್ತೆ.! ಇದು ಇವರ ವಿವಾಹ ಸಂಪ್ರದಾಯವಂತೆ!!

Groom Smoking Cigarette: ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶವಾಗಿದ್ದು, ಇದನ್ನು ಪ್ರಾಚೀನ ಕಾಲದಿಂದಲೂ ಅನುಸರಿಸಲಾಗುತ್ತಿದೆ. ಭಾರತದ ವಿವಿಧ ಭಾಗಗಳು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ಈ ನಡುವೆ ಅತ್ತೆ ಯೊಬ್ಬರು ವರನಿಗೆ ಸಿಗರೇಟ್‌, ಪಾನ್ ನೀಡಿ ಸ್ವಾಗತಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

Written by - Chetana Devarmani | Last Updated : Feb 17, 2023, 02:06 PM IST
  • ಅಳಿಯನ ಬಾಯಿಗೆ ಸಿಗರೇಟ್‌ ಇಟ್ಟು ಸ್ವಾಗತಿಸಿದ ಅತ್ತೆ.!
  • ಇದು ಇವರ ವಿವಾಹ ಸಂಪ್ರದಾಯವಂತೆ!!
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ವಿಡಿಯೋ
Viral Video : ಅಳಿಯನ ಬಾಯಿಗೆ ಸಿಗರೇಟ್‌ ಇಟ್ಟು ಸ್ವಾಗತಿಸಿದ ಅತ್ತೆ.! ಇದು ಇವರ ವಿವಾಹ ಸಂಪ್ರದಾಯವಂತೆ!! title=
Wedding Video

Groom Smoking Cigarette: ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶವಾಗಿದ್ದು, ಇದನ್ನು ಪ್ರಾಚೀನ ಕಾಲದಿಂದಲೂ ಅನುಸರಿಸಲಾಗುತ್ತಿದೆ. ಭಾರತದ ವಿವಿಧ ಭಾಗಗಳು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ಈ ನಡುವೆ ಅತ್ತೆ ಯೊಬ್ಬರು ವರನಿಗೆ ಸಿಗರೇಟ್‌, ಪಾನ್ ನೀಡಿ ಸ್ವಾಗತಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಲವೆಡೆ ಪುರಾತನವಾಗಿ ನಡೆದುಕೊಂಡು ಬರುತ್ತಿರುವ ಸಂಪ್ರದಾಯ ಎಂದು ಹಲವರು ಸೂಚಿಸಿದರೆ, ಇನ್ನು ಕೆಲವರು ಇಂತಹ ಆಚರಣೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ತಿಳಿಸಿದರು. ವಿಡಿಯೋ ನೋಡಿದ ಜನರು ಅತ್ತೆ ಇಷ್ಟೆಲ್ಲಾ ಮಾಡಲು ಹೇಗೆ ಸಿದ್ಧರಾದರು ಎಂದು ಆಶ್ಚರ್ಯ ಪಡತೊಡಗಿದರು.

ಇದನ್ನೂ ಓದಿ : Funny News: ಫಸ್ಟ್ ನೈಟ್ ದಿನವೇ ನೆರೆಮನೆಯಲ್ಲಿ ಅಡಗಿ ಕುಳಿತ ವರ: ಕಾರಣ ತಿಳಿದರೆ ಬಿದ್ದುಬಿದ್ದು ನಗೋದು ಗ್ಯಾರಂಟಿ!

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವರನನ್ನು ಸೋಫಾದಲ್ಲಿ ಕೂಡಿಸಲಾಗಿದೆ. ನಂತರ ಅತ್ತೆ ಬಾಯಲ್ಲಿ ಸಿಗರೇಟು ಇಡುತ್ತಾರೆ, ಮಾವ ಸಿಗರೇಟು ಹಚ್ಚುತ್ತಾರೆ. ಆದರೆ, ವಿಡಿಯೋದಲ್ಲಿ ನೋಡಿದಂತೆ, ವರ ಅದನ್ನು ಸೇದುವುದಿಲ್ಲ. ನಂತರ ಮಾವ ಅದನ್ನು ಮತ್ತೆ ಅವನ ಬಾಯಿಯಿಂದ ತೆಗೆದುಕೊಳ್ಳುತ್ತಾರೆ. ವಿಧಿವಿಧಾನದಂತೆ ವರನು ಇಬ್ಬರಿಗೂ ಸ್ವಲ್ಪ ಹಣವನ್ನು ನೀಡುತ್ತಾನೆ. ಈಗ ಈ ವಿಡಿಯೋ ವೈರಲ್ ಆಗಿದ್ದು, ಈ ಸಂಪ್ರದಾಯದ ಬಗ್ಗೆ ಬೇರೆ ಬೇರೆ ಜನರು ಮಾತನಾಡಿದ್ದಾರೆ. ಘಟನೆಯ ನಿಖರವಾದ ಸ್ಥಳವು ತಕ್ಷಣವೇ ತಿಳಿದಿಲ್ಲವಾದರೂ, ಈ ಆಚರಣೆಯು ಗುಜರಾತ್‌ನಲ್ಲಿ ನಡೆದಿರಬಹುದು ಎಂದು ಹಲವರು ಊಹಿಸಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Joohi K Patel (@joohiie)

 

ಒಬ್ಬ ಬಳಕೆದಾರ, "ನೀವು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಯಾಗುತ್ತಿದ್ದರೆ, ದಯವಿಟ್ಟು ನಿಮ್ಮ ಆಚರಣೆಗಳನ್ನು ಮರೆಯಬೇಡಿ. ನೀವು ಹೆಚ್ಚು ಟ್ರೆಂಡಿಯಾಗಲು ಬಯಸಿದರೆ, ದಯವಿಟ್ಟು ಹಿಂದೂ ಆಚರಣೆಗಳನ್ನು ಬಳಸಬೇಡಿ" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, "ಇದು ಸಂಪೂರ್ಣ ಅಸಂಬದ್ಧವಾಗಿದೆ. ಧೂಮಪಾನವು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯಲು ಇದನ್ನು ಮಾಡುತ್ತಿದ್ದಾರೆ." ಆದಾಗ್ಯೂ, ಈ ಸಂಪ್ರದಾಯವನ್ನು ಭಾರತದ ಇತರ ಭಾಗಗಳಲ್ಲಿಯೂ ಅನುಸರಿಸಲಾಗಿದೆ ಎಂದು ಹೇಳುವ ಮೂಲಕ ಅನೇಕ ಜನರು ಗಮನಸೆಳೆದಿದ್ದಾರೆ. ಒಬ್ಬ ಬಳಕೆದಾರರು "ಒಡಿಶಾ ಹಳೆಯ ಸಂಪ್ರದಾ ಇದು" ಎಂದು ಬರೆದಿದ್ದಾರೆ. "ಹೌದು ಬಿಹಾರದಲ್ಲಿ ನಾವು ವರನ ಕುಟುಂಬಕ್ಕೆ ಪಾನ್ - ಸಿಗರೇಟ್ ನೀಡುತ್ತೇವೆ" ಎಂದು ಮತ್ತೊಬ್ಬ ನೆಟ್ಟಿಜನ್‌ ಬರೆದಿದ್ದಾರೆ.

ಇದನ್ನೂ ಓದಿ : Funny Video : ಸಿಂಹದ ಮೇಲೆ ಕೋತಿಯ ಸವಾರಿ, ಮಂಗನ ಕಿತಾಪತಿಗೆ ಎದ್ದುಬಿದ್ದು ನಗ್ತೀರಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News