Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!

Tiger Hunting Peacock: ನವಿಲುಗಳನ್ನು ನೋಡುವುದೇ ಅಂದ. ಅದರಲ್ಲೂ ನವಿಲು ಗರಿಬಿಚ್ಚಿ ನಲಿಯುತ್ತಿದ್ದರೆ.. ಆಹಾ... ಒಂದು ಕ್ಷಣವೂ ಕಣ್ಣು ಮಿಟುಕಿಸುವುದೇ ಬೇಡ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ದಿಢೀರನೆ 'ಹುಲಿ' ಕಾಣಿಸಿಕೊಂಡಾಗ ಹೇಗಿರುತ್ತೆ... 

Written by - Yashaswini V | Last Updated : Aug 27, 2024, 04:10 PM IST
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೊ ಹುಲಿ ಮತ್ತು ನವಿಲಿಗೆ ಸಂಬಂಧಿಸಿದೆ.
  • ಈ ವಿಡಿಯೋದಲ್ಲಿ ನವಿಲುಗಳ ನಡುವೆ ಒಂದು ನವಿಲು ಗರಿಬಿಚ್ಚಿ ನರ್ತಿಸುತ್ತಿದೆ.
  • ಈ ಹೊತ್ತಲ್ಲೇ ಹಿಂಬದಿಯಿಂದ ಹುಲಿಯೊಂದು ನರ್ತಿಸುತ್ತಿರುವ ನವಿಲನ್ನು ಬೇಟೆಯಾಡಲು ಬರುತ್ತದೆ.
Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!  title=

Tiger Hunting Peacock Viral Video: ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಮನರಂಜನೆಗೇನೂ ಕೊರತೆ ಇರುವುದಿಲ್ಲ. ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಇವುಗಳಲ್ಲಿ ಭಯ ಹುಟ್ಟಿಸುವ ವ್ಯಾಘ್ರಗಳ ವಿಡಿಯೋಗಳಷ್ಟೇ ಅಲ್ಲ, ಮನಸ್ಸಿಗೆ ಮುದ ನೀಡುವ ಕೆಲವು ವಿಡಿಯೋಗಳು ಕೂಡ ಇರುತ್ತವೆ. ಒಮ್ಮೆಮ್ಮೆ ಎರಡೂ ರೀತಿಯ ಅನುಭವವನ್ನು ನೀಡುವ ಒಮ್ಮೆಗೆ ವಿಡಿಯೋಗಳು ಕೂಡ ವೈರಲ್ ಆಗಿರುತ್ತವೆ. ಇದೀಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೊ ಹುಲಿ ಮತ್ತು ನವಿಲಿಗೆ (Tiger Peacock Viral Video) ಸಂಬಂಧಿಸಿದೆ. ಈ ವಿಡಿಯೋದಲ್ಲಿ ನವಿಲು ಮರಿಗಳ ನಡುವೆ ನವಿಲೊಂದು ಗರಿಬಿಚ್ಚಿ ನರ್ತಿಸುತ್ತಿದೆ. ಇದರ ಸುತ್ತಲೂ ಬೇರೆ ನವಿಲುಗಳು ಓಡಾಡುತ್ತಿರುವುದನ್ನು ಆನಂದಿಸುತ್ತಿರುವ ಹೊತ್ತಲ್ಲೇ ಹಿಂಬದಿಯಿಂದ ಹುಲಿಯೊಂದು ನರ್ತಿಸುತ್ತಿರುವ ನವಿಲನ್ನು ಬೇಟೆಯಾಡಲು ಬರುತ್ತದೆ. 

ಇದನ್ನೂ ಓದಿ- Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ! 

ಹೌದು, ನವಿಲೊಂದು ಸಂತಸದಿಂದ ಗರಿಬಿಚ್ಚಿ ನಲಿಯುವ (Dancing Peacock) ವೇಳೆ ಹಿಂಭಾಗದಿಂದ ಬಂದ ಹುಲಿ ನವಿಲಿನ ಮೇಲೆ ಮಾರಣಾಂತಿಕ ದಾಳಿ ಮಾಡಲು ಎಗರುತ್ತದೆ. ಈ ಸಂದರ್ಭದಲ್ಲಿ ತನ್ನ ಚಾಣಾಕ್ಷತನದಿಂದ ಮುಗಿಲೆತ್ತರಕ್ಕೆ ಹಾರಿದ ನವಿಲು (Flying Peacock) ಹಾರುತ್ತಾ... ಹಾರುತ್ತಾ... ಮರದ ಕೊಂಬೆ ಏರಿ ಕುಳಿತುಕೊಳ್ಳುತ್ತದೆ. ಇತ್ತ ನವಿಲಿನ ಮರಿಗಳು ಕೂಡ ಹುಲಿಯಿದ್ದ ಸ್ಥಳದಿಂದ ಪರಾರಿಯಾಗಿ ಜೀವ ಉಳಿಸಿಕೊಳ್ಳುತ್ತವೆ. 

 
 
 
 

 
 
 
 
 
 
 
 
 
 
 

A post shared by RAWR SZN (@rawrszn)

ಇದನ್ನೂ ಓದಿ- Viral Photo: ಅಬ್ಬಬ್ಬಾ! 17 ಅಡಿಗೂ ಉದ್ದ, 30- 40 ಕೆಜಿ ತೂಕದ ಹೆಬ್ಭಾವನ್ನು ನೋಡಿದ್ದೀರಾ..!

rawrszn ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ.  ಹುಲಿ ಬೇಟೆಯಿಂದ ಚತುರತೆಯಿಂದ ತಪ್ಪಿಸಿಕೊಳ್ಳುವ ಈ ನವಿಲಿನ ಅದ್ಭುತ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Viral Video) ಆಗುತ್ತಿದ್ದು, ಇದು  ಲಕ್ಷಗಟ್ಟಲೆ ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News