Google Account: ಗಂಡ-ಹೆಂಡತಿ ಸಂಬಂಧದಲ್ಲಿ ನಂಬಿಕೆ ಎನ್ನುವ ಪದ ಹೆಚ್ಚು ಮಹತ್ವದ್ದಾಗಿರುತ್ತದೆ.. ದಾಂಪತ್ಯದಲ್ಲಿ ಯಾವುದೇ ಮುಚ್ಚುಮರೆ ಮಾಡದ ಸಂಗಾತಿಯನ್ನು ಪಡೆಯಬೇಕು ಎನ್ನುವುದು ಎಲ್ಲರ ಆಸೆಯೂ ಆಗಿರುತ್ತದೆ.. ಹೆಚ್ಚು ನಂಬಿರುವ ವ್ಯಕ್ತಿಗಳು ಮೋಸ ಮಾಡಿದ್ರೆ, ಸುಳ್ಳು ಹೇಳಿದ್ರೆ, ರಹಸ್ಯ ಮಾಡಿದ್ರೆ ಜೊತೆ ಇರೋರಿಗೆ ಬೇಸರವಾಗೋದು ಸಾಮಾನ್ಯ.
ಈ ರೀತಿ ಕೆಲವೊಂದು ವಿಚಾರಗಳನ್ನು ಮುಚ್ಚಿ ಇಡೋದೆ ಸಂಗಾತಿ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ,, ಹೀಗೆ ಒಬ್ಬರಿಗೊಬ್ಬರಿಗೆ ಅನುಮಾನ ಪಡುವುದು, ಕೆಟ್ಟದಾಗಿ ಬಿಹೇವ್ ಮಾಡುವುದು ಶುರುವಾಗುತ್ತದೆ.. ಕೆಲವೊಮ್ಮೆ ಸಂಗಾತಿ ಮುಚ್ಚಿಟ್ಟ ಸತ್ಯ ಬೇರೆಯವರಿಂದ ಅಥವಾ ಮೊಬೈಲ್‌ನಿಂದ ಹೊರಬರುತ್ತವೆ.. ಆಗ ಏನು ಮಾಡುವುದು, ಈ ತಪ್ಪಿಗೆ ಶಿಕ್ಷೆ ಏನು ನೀಡೋದು? ಹೀಗೆ ಹಲವಾರು ಗೊಂದಲಗಳು ಸೃಷ್ಟಿಯಾಗುತ್ತವೆ..
ಇದನ್ನೂ ಓದಿ-8ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಜರ್ಮನಿ ಗಾಯಕಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಅನೇಕರು ದಾಂಪತ್ಯದಲ್ಲಿನ ಸಣ್ಣ ಪುಟ್ಟ ಜಗಳಗಳನ್ನು ದೊಡ್ಡದಾಗಿ ಮಾಡಿ ಡಿವೋರ್ಸ್‌ವರೆಗೂ ಬಂದುಬಿಡ್ತಾರೆ. ಅದರಲ್ಲಿ ಇನ್ನೂ ಕೆಲವರು ಏನು ಮಾಡೋದು ಅಂತ ಬೇರೆಯವರ ಸಲಹೆಗೆ ಮೊರೆ ಹೋಗುತ್ತಾರೆ.. ಬೆಳೆಯುತ್ತಿರುವ ತಂತ್ರಜ್ಞಾನದಿಂದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ... ಇದೀಗ ನಾವು ಹೇಳಲು ಹೊರಟಿರುವ ವ್ಯಕ್ತಿ ಕೂಡ ಗೂಗಲ್ ಅಕೌಂಟ್ ನಲ್ಲಿ ಪತ್ನಿಯ ಗುಟ್ಟನ್ನು ನೋಡಿ ಮುಂದೆ ಏನ್ ಮಾಡೋದು ಅಂತ ಬಳಕೆದಾರರನ್ನು ಪ್ರಶ್ನಿಸಿದ್ದಾನೆ.
ಇದನ್ನೂ ಓದಿ-Donkey killings: ಪ್ರತಿ ವರ್ಷ 59 ಲಕ್ಷ ಕತ್ತೆಗಳು ಸಾಯುತ್ತಿವೆ, ಕಾರಣ ತಿಳಿದರೆ ಬೆಚ್ಚಿಬೀಳುತ್ತೀರಾ..!
ಈ ಕುರಿತು ರೆಡ್ಡಿಟ್ ಗ್ರೂಪ್ ನಲ್ಲಿ ಬರೆದುಕೊಂಡ ವ್ಯಕ್ತಿ "ನನಗೆ 36, ಪತ್ನಿಗೆ 33 ವರ್ಷ. ಅವರು ಒಂಭತ್ತು ವರ್ಷದ ಹಿಂದೆ ಫ್ರೆಂಡ್ ಒಬ್ಬರ ಕಾರಣದಿಂದ ಪರಿಚಿತರಾಗಿದ್ದರು. ಅಲ್ಲಿಂದ ಇಬ್ಬರ ಸ್ನೇಹ ಪ್ರೀತಿಗೆ ತಿರುಗು ಮದುವೆಯೂ ಆಗಿತ್ತು.. ಈಗ ಒಬ್ಬ ಮಗನೂ ಇದ್ದಾನೆ.. ಇಬ್ಬರ ಮಧ್ಯೆ ಪ್ರೀತಿ ತುಸು ಜಾಸ್ತಿನೇ ಇದೆ.. ಆದರೆ ಈ ವ್ಯಕ್ತಿ ಆಕೆಯನ್ನು ಮದುವೆಯಾಗುವ ಮುನ್ನ ಬೇರೊಂದು ಯುವತಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದ ಏಕೆಂದರೆ ಆಕೆ ಆತನಿಗೆ ನರಕಯಾತನೇ ಮಾಡಿಸಿದ್ದಳಂತೆ.. ಆಗ ಅದೇ ಸಮಯಕ್ಕೆ ಸಿಕ್ಕ ಈಗಿನ ಪತ್ನಿ ಮೇಲೆ ಆತನಿಗೆ ಅಪಾರ ನಂಬಿಕೆ, ಲವ್, ಇತ್ತು.
ಮದುವೆಯ ನಂತರ ಇಬ್ಬರೂ ಚೆನ್ನಾಗಿಯೇ ಇದ್ದರು.. ಆದರೆ ಒಂದು ದಿನ ಮನೆಯಲ್ಲಿ ವ್ಯಕ್ತಿ ಲ್ಯಾಪ್ ಟಾಪ್‌ನಲ್ಲಿ ಕೆಲಸ ಮಾಡುವಾಗ, ಲ್ಯಾಪ್ ಟಾಪ್ ಆಫ್ ಆಯ್ತು.. ಹೀಗಾಗಿ ಪತ್ನಿಯ ಟ್ಯಾಬ್ಲೆಟ್ ತೆಗೆದುಕೊಂಡ ಪತಿಗೆ ಆ ಟ್ಯಾಬ್ ನಲ್ಲಿ ಕಂಡಿದ್ದು.. ಸಿಕ್ರೇಕ್ ಗೂಗಲ್ ಅಕೌಂಟ್.. ಅದನ್ನು ಓಪನ್ ಮಾಡಿ ನೋಡಿದಾಗ ವ್ಯಕ್ತಿ ಶಾಕ್ ಆಗಿದ್ದಾನೆ.. ಏಕೆಂದರೆ ಅಲ್ಲಿ ಆತನ ಮಾಜಿ ಪ್ರೇಯಸಿಯ 300ಕ್ಕೂ ಹೆಚ್ಚು ಫೋಟೋಗಳು ತುಂಬಿದ್ದವು. ಪತಿಯ ಲವ್ ಬ್ರೇಕ್‌ಪ್ ಕಹಾನಿ ಗೊತ್ತಾದಾಗಿನಿಂದಲೂ ಪತ್ನಿ ಆತನ ಫೋಟೋ ಸಂಗ್ರಹ ಶುರು ಮಾಡಿದ್ದಳು.. ಇಷ್ಟೇ ಅಲ್ಲ ಪತಿಯ ಮಾಜಿ ಪ್ರೇಯಸಿಯಂತೆ ತಾನು ಬದಲಾಗಲುತ್ತಿದ್ದಳು.. ಆಕೆಯಂತೆ ಡ್ರೆಸ್, ಹೇರ್ ಸ್ಟೈಲ್ ಮಾಡುತ್ತಿದ್ದಳು.. ಪತ್ನಿಯ ಈ ಕೆಲಸ ನೋಡಿ ಗಂಡ ದಂಗಾಗಿದ್ದಾನೆ... ಏನು ಮಾಡಬೇಕು ಹೇಳಿ ಎಂದು ಬಳಕೆದಾರರನ್ನು ಪ್ರಶ್ನಿಸಿದ್ದಾನೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.