ಚಾಕಲೇಟ್‌ ಐಸ್ ಕ್ರೀಮ್ ಬಾಯಿ ಚಪ್ಪರಿಸಿ ತಿಂತೀರಾ? ಹಾಗಿದ್ರೆ ಒಮ್ಮೆ ಈ ವಿಡಿಯೋ ನೋಡಿ

Chocolate Ice Creams Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಸಂಪೂರ್ಣ ಅಸಹ್ಯ ಹುಟ್ಟಿಸಿದೆ.  

Written by - Chetana Devarmani | Last Updated : Nov 3, 2023, 04:12 PM IST
ಚಾಕಲೇಟ್‌ ಐಸ್ ಕ್ರೀಮ್ ಬಾಯಿ ಚಪ್ಪರಿಸಿ ತಿಂತೀರಾ? ಹಾಗಿದ್ರೆ ಒಮ್ಮೆ ಈ ವಿಡಿಯೋ ನೋಡಿ title=
Chocolate Ice Cream

ಇಂದಿನ ವೈರಲ್ ವಿಡಿಯೋ: ಐಸ್ ಕ್ರೀಮ್ ಎಲ್ಲಾ ವಯಸ್ಸಿನ ಜನರು ಇಷ್ಟಪಡುವ ಪದಾರ್ಥ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಐಸ್ ಕ್ರೀಮ್ ಸವಿಯುತ್ತಾರೆ. ಐಸ್ ಕ್ರೀಮ್ ಪ್ರತಿಯೊಬ್ಬರ ನೆಚ್ಚಿನ ಆಹಾರವಾಗಿದೆ. ಆದರೆ ಈ ರುಚಿಕರವಾದ ಖಾದ್ಯವನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಪ್ರಕ್ರಿಯೆಯನ್ನು ತೋರಿಸುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. 

ಕಾರ್ಖಾನೆಯಲ್ಲಿ ಚಾಕೊಲೇಟ್ ಐಸ್ ಕ್ರೀಮ್ ತಯಾರಿಸುವುದು ಎಂಬ ಶೀರ್ಷಿಕೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ, ಚಾಕೊಲೇಟ್ ಐಸ್ ಕ್ರೀಮ್ ಅನ್ನು ಕಾರ್ಖಾನೆಯೊಳಗೆ ತಯಾರಿಸಲಾಗುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿಯು ಐಸ್ ಕ್ರೀಮ್ ಅನ್ನು ತಯಾರಿಸುವ ವಿಡಿಯೋ ಇದಾಗಿದೆ. ಅವನು  ಚಾಕೊಲೇಟ್ ಸಿರಪ್ ತಯಾರಿಸುತ್ತಾನೆ. ಈ ವ್ಯಕ್ತಿ ಚಾಕೊಲೇಟ್ ಸಿರಪ್ ತಯಾರಿಸಲು ಸಾಕಷ್ಟು ಎಣ್ಣೆಯನ್ನು ಬಳಸುತ್ತಾನೆ. ನಂತರ ಅದರಲ್ಲಿ ಪಾಪ್ಸಿಕಲ್ಸ್ ಅನ್ನು ಅದ್ದುತ್ತಾನೆ.

ಇದನ್ನೂ ಓದಿ: ತೂಕ ಇಳಿಕೆಗೆ ಬ್ರೌನ್‌ ಬ್ರೆಡ್‌ ತಿಂತೀರಾ? ಒಮ್ಮೆ ಈ ವಿಡಿಯೋ ನೋಡಿ ಜನ್ಮದಲ್ಲೇ ಮುಟ್ಟಲ್ಲ! 

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನು 3.4 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಕಾಮೆಂಟ್‌ಗಳ ಮೂಲಕವೂ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಎಣ್ಣೆ ಮಿಶ್ರಿತ ಚಾಕೊಲೇಟ್ ಸಿರಪ್ ನೋಡಿ ಹಲವರು ಬೆಚ್ಚಿಬಿದ್ದರೆ, ಕೆಲವರು ಇದು ಐಸ್ ಕ್ರೀಮ್‌ಲ ಆಯಿಲ್ ಕ್ರೀಮ್ ಎಂದು ಲೇವಡಿ ಮಾಡಿದ್ದಾರೆ.

 

 

ಇಂತಹ ಕಳಪೆ ಗುಣಮಟ್ಟದ ಚಾಕೊಲೇಟ್ ಐಸ್ ಕ್ರೀಂ ಹೊರಗೆ ಹೋಗಿ ತಿನ್ನುವ ಬದಲು ಮನೆಯಲ್ಲಿಯೇ ತಯಾರಿಸಿ. ಈಗ ಮನೆಯಲ್ಲಿ ರುಚಿಕರವಾದ ಚಾಕೊಲೇಟ್ ಐಸ್ ಕ್ರೀಮ್ ಅನ್ನು ಹೇಗೆ ತಯಾರಿಸಬೇಕೆಂದು ನೋಡೋಣ.

ಅಗತ್ಯವಿರುವ ವಸ್ತುಗಳು:
ಹಾಲು - 1 ಲೀಟರ್
ಕೋಕೋ - 4 ಟೀಸ್ಪೂನ್
ಚಾಕೊಲೇಟ್ ಸಾರ - 4 ಹನಿಗಳು
ಸಕ್ಕರೆ - 1/2 ಕೆಜಿ

ವಿಧಾನ:
ಮೊದಲು ಹಾಲನ್ನು ಚೆನ್ನಾಗಿ ಕುದಿಸಿ ತಣ್ಣಗಾಗಿಸಿ. ಈಗ ಅದರಲ್ಲಿ ಅರ್ಧದಷ್ಟು ಹಾಲನ್ನು ತೆಗೆದುಕೊಂಡು ಅದಕ್ಕೆ ಕೋಕೋ ಪೌಡರ್ ಮತ್ತು ಸಕ್ಕರೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ ಉಳಿದ ಹಾಲನ್ನು ಮತ್ತೆ ಬಿಸಿ ಮಾಡಿ ಮತ್ತು ಅದರೊಳಗೆ ಮೇಲಿನ ದ್ರಾವಣವನ್ನು ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 10 ನಿಮಿಷಗಳ ಕಾಲ ಒಲೆಯಲ್ಲಿ ಬೆರೆಸಿ ಇರಿಸಿಕೊಳ್ಳಿ. ನಂತರ ತಣ್ಣಗಾಗಿಸಿ ಎಸೆನ್ಸ್ ಹಾಕಿ 10 ರಿಂದ 12 ಗಂಟೆಗಳ ಕಾಲ ಫ್ರೀಜರ್ ನಲ್ಲಿಟ್ಟು ಐಸ್ ಕ್ರೀಂ ರೂಪದಲ್ಲಿ ಚೆನ್ನಾಗಿ ಗಟ್ಟಿಯಾದ ನಂತರ ಮಕ್ಕಳಿಗೆ ನೀಡಬಹುದು. ಸೂಪರ್ ಕೊಕೊ ಐಸ್ ಕ್ರೀಮ್ ಸಿದ್ಧವಾಗಿದೆ.

ಇದನ್ನೂ ಓದಿ: ಸಲೂನ್‌ನಲ್ಲಿ ಸಿಹಿಕಹಿ ಚಂದ್ರು ಪುತ್ರಿಗೆ ಕರಾಳ ಅನುಭವ.. ಹಿತ ಕಿವಿ ಮಾತಿದು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News