Interesting Video: ತಮ್ಮ ಸುತ್ತಮುತ್ತಲಿನ ಪ್ರಕೃತಿ ಹಲವು ರಹಸ್ಯಗಳನ್ನು ತನ್ನ ಗರ್ಭದೊಳಗೆ ಬಚ್ಚಿಟ್ಟುಕೊಂಡಿದೆ. ಇಂತಹುದೇ ಒಂದು ರಹಸ್ಯದಲ್ಲಿ ಪಕ್ಷಿಯೊಂದು ಇದೀಗ ವಿಶ್ವಾದ್ಯಂತ ಭಾರಿ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಈ ಹಕ್ಕಿಯ ವಿಡಿಯೋ ನೋಡಿದ ಜನರು ಅವಾಕ್ಕಾಗಿದ್ದಾರೆ. ಏಕೆಂದರೆ, ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಕ್ಕಿ ಬಾಯಿ ತೆರೆಯುತ್ತಿದ್ದಂತೆ ಅದರ ಬಾಯಿಯಿಂದ ಹೊಗೆ ಬರುತ್ತಿದೆ. ಈ ಹಕ್ಕಿಯನ್ನು ನೋಡಿದ ಬಹುತೇಕರು, ಹಕ್ಕಿ ಧೂಮಪಾನ ಮಾಡುತ್ತಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಇದಾದ ಬಳಿಕ ಈ ಹಕ್ಕಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡತೊಡಗಿದೆ.
ಇದನ್ನೂ ಓದಿ-ಅಕ್ಟೋಬರ್ 3 ರವರೆಗೆ ಅಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ 3 ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿಯ ಯೋಗ!
ಇಂಟರ್ನೆಟ್ ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ ಹಕ್ಕಿಯ ವಿಡಿಯೋ
ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಕಾಮೆಂಟ್ ನಲ್ಲಿ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಭಾರತೀಯ ರೇಲ್ವೆಯಲ್ಲಿ ಅಧಿಕಾರಿಯೊಬ್ಬರು ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದರು, 'ಪ್ರಸ್ತುತ ಈ ಹಕ್ಕಿ 'ಸ್ಮೋಕಿಂಗ್ ಬರ್ಡ್' ಎಂದೇ ಜನಪ್ರೀಯವಾಗಿದೆ. ಎಷ್ಟೊಂದು ಸುಂದರವಾಗಿದೆ ಇದೆಲ್ಲಾ.... ವಾಸ್ತವದಲ್ಲಿ ಇದಕ್ಕೆ ಏನೆನ್ನುತ್ತಾರೆ ಎಂಬುದು ತುಂಬಾ ಆಶ್ಚರ್ಯಕಾರಕವಾಗಿದೆ' ಎಂದು ಬರೆದುಕೊಂಡಿದ್ದಾರೆ. ಅವರು ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಅದೂ ಕೂಡ ಭಾರಿ ವೈರಲ್ ಆಗಿದೆ. ಇದಾದ ನಂತರದ ದಿನಗಳಲ್ಲಿ ಈ ಹಕ್ಕಿಯ ವಿಡಿಯೋ ಇತರ ಸಾಮಾಜಿಕ ವೇದಿಕೆಗಳಲ್ಲಿಯೂ ಕಾಣಿಸಿಕೊಂಡಿತ್ತು. ಇದರ ಹಿಂದಿನ ವಾಸ್ತವಿಕತೆ ಏನು ಎಂಬುದನ್ನು ತಿಳಿದುಕೊಳ್ಳಲು ಜನರು ಇದೀಗ ಯತ್ನಿಸುತ್ತಿದ್ದಾರೆ. ನೀವೂ ಕೂಡ ಮೊದಲು ಯುಟ್ಯೂಬ್ ನಲ್ಲಿನ ಈ ಹಕ್ಕಿಯ ವಿಡಿಯೋವನ್ನು ನೋಡಿ...
ಇದನ್ನೂ ಓದಿ-ಕೆಲವೇ ಗಂಟೆಗಳನ್ನು ಶುಕ್ರನ ವಕ್ರನಡೆ ಆರಂಭ, ಧನದ ಅಧಿದೇವತೆ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಧನವೃಷ್ಟಿ!
ಬೆಲ್ ಬರ್ಡ್ ಹೆಸರಿನ ಹಕ್ಕಿ
ಛಾಯಾಗ್ರಾಹಕರೊಬ್ಬರು ಅತ್ಯಂತ ಸುಂದರವಾದ ಈ ಪಕ್ಷಿಯ ಕ್ಲೋಸ್-ಅಪ್ ಶಾಟ್ ತೆಗೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಬಿಳಿ ಬಣ್ಣದ ರೆಕ್ಕೆಗಳನ್ನು ಹೊಂದಿರುವ ಈ ಹಕ್ಕಿಯನ್ನು ನೀವು ವಿಡಿಯೋದಲ್ಲಿ ನೋಡಿರಬೇಕು. ಹಕ್ಕಿಯ ಕಣ್ಣಿನಿಂದ ಗಂಟಲಿನವರೆಗಿನ ಭಾಗವು ವಿಭಿನ್ನ ಬಣ್ಣದ್ದಾಗಿದೆ. ಇದು ಈ ಪಕ್ಷಿಯ ಸೌಂದರ್ಯಕ್ಕೆ ಮತ್ತಷ್ಟು ಮೆರಗನ್ನು ನೀಡಿದೆ. ಈ ಹಕ್ಕಿ ಮುಖ್ಯವಾಗಿ ಬ್ರೆಜಿಲ್ನಲ್ಲಿ ಕಂಡುಬರುತ್ತದೆ. ಈ ಹಕ್ಕಿಯ ಹೆಸರು 'ಬೆಲ್ ಬರ್ಡ್'. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಈ ಪಕ್ಷಿಯನ್ನು ‘ಸ್ಮೋಕಿಂಗ್ ಬರ್ಡ್’ ಎಂದೂ ಕರೆಯುತ್ತಾರೆ. ಏಕೆಂದರೆ ಸಹಜವಾಗಿಯೇ ಅದರ ಬಾಯಿಂದ ಹೊಗೆ ಬರುತ್ತಲೇ ಇರುತ್ತದೆ. ಈ ವಿಡಿಯೋದಲ್ಲಿ ಹಕ್ಕಿಯ ಬಾಯಿಂದ ಹೊಗೆ ಬರುವುದನ್ನು ಸಹ ನೀವು ನೋಡಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.