Viral News: ಕಂಠಪೂರ್ತಿ ಕುಡಿದು ಟೈಟಾಗಿ ಶಾಲೆಗೆ ಬಂದ ಶಿಕ್ಷಕಿ ಮಾಡಿದ್ದೇನು ಗೊತ್ತಾ..?

ಕಂಠಪೂರ್ತಿ ಮದ್ಯ ಸೇವಿಸಿದ್ದ ಶಿಕ್ಷಕಿಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದ್ರೂ ಪ್ರಯೋಜನವಾಗಿಲ್ಲ. ಬೆಳಗ್ಗೆ 11 ಗಂಟೆಗೆ ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣಾಧಿಕಾರಿ ಆಕೆಯನ್ನು ಕಂಡು ಸುಸ್ತಾಗಿ ಬೆಸ್ತು ಬಿದ್ದಿದ್ದಾರೆ.  

Written by - Puttaraj K Alur | Last Updated : Jul 24, 2022, 09:31 AM IST
  • ಕಂಠಪೂರ್ತಿ ಕುಡಿದು ಶಾಲೆಗೆ ಬಂದು ಗಡತ್ತಾಗಿ ನಿದ್ದೆ ಮಾಡಿದ ಶಿಕ್ಷಕಿ
  • ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನ ಪ್ರಾಥಮಿಕ ಶಾಲೆಯಲ್ಲಿ ಘಟನೆ
  • ಕುಡಿದು ಟೈಟಾಗಿದ್ದ ಶಿಕ್ಷಕಿಯನ್ನು ಕಂಡು ಬೆಚ್ಚಿಬಿದ್ದ ಶಿಕ್ಷಣಾಧಿಕಾರಿ
Viral News: ಕಂಠಪೂರ್ತಿ ಕುಡಿದು ಟೈಟಾಗಿ ಶಾಲೆಗೆ ಬಂದ ಶಿಕ್ಷಕಿ ಮಾಡಿದ್ದೇನು ಗೊತ್ತಾ..? title=
ಕುಡಿದು ಟೈಟಾಗಿ ಶಾಲೆಗೆ ಬಂದ ಶಿಕ್ಷಕಿ

ಟಿಕಾಯತ್‌ಗಂಜ್‌: ಶಿಕ್ಷಕಿಯೊಬ್ಬಳು ಕಂಠಪೂರ್ತಿ ಕುಡಿದು ಶಾಲೆಗೆ ಬಂದು ಗಡತ್ತಾಗಿ ನಿದ್ದೆ ಮಾಡಿರುವ ಘಟನೆ ಛತ್ತೀಸ್‌ಗಢದ ಟಿಕಾಯತ್‌ಗಂಜ್‌ನಲ್ಲಿ ನಡೆದಿದೆ. ಸದ್ಯ ಈ ಕುಡುಕ ಶಿಕ್ಷಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕುಡಿದು ಟೈಟಾಗಿದ್ದ ಶಿಕ್ಷಕಿಗೆ ಮಕ್ಕಳಿಗೆ ಪಾಠ ಹೇಳುವಷ್ಟು ತ್ರಾಣವೇ ಇರಲಿಲ್ಲ. ಕುಡಿದ ಅಮಲಿನಲ್ಲಿ ಪ್ರಜ್ಞೆಯೇ ಇಲ್ಲದಂತೆ ತರಗತಿಯ ಚೇರ್‍ ಮೇಲೆ ಕುಳಿತು ನಿದ್ದೆ ಮಾಡಿದ್ದಾಳೆ. ಅದೇ ಸಮಯಕ್ಕೆ ಶಾಲೆಗೆ ಭೇಟಿ ನೀಡಿದ ಶಿಕ್ಷಣಾಧಿಕಾರಿ, ಕುಡಿದು ಮಲಗಿದ್ದ ಶಿಕ್ಷಕಿಯ ಅವಸ್ಥೆ ಕಂಡು ದಂಗಾಗಿದ್ದಾರೆ.

ಇದನ್ನೂ ಓದಿ: ನಿಮ್ ಬಾಸ್ ಗೊತ್ತಿಲ್ಲ‌ ಎಂದಿದ್ದಕ್ಕೆ ಕೊಂದೇಬಿಟ್ರು : ಕೊಲೆ ಹಿಂದೆ ನಟೋರಿಯಸ್ ರೌಡಿಶೀಟರ್ ಶಿಷ್ಯರು!

ಕಂಠಪೂರ್ತಿ ಮದ್ಯ ಸೇವಿಸಿದ್ದ ಶಿಕ್ಷಕಿಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದ್ರೂ ಪ್ರಯೋಜನವಾಗಿಲ್ಲ. ಬೆಳಗ್ಗೆ 11 ಗಂಟೆಗೆ ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣಾಧಿಕಾರಿ ಆಕೆಯನ್ನು ಕಂಡು ಸುಸ್ತಾಗಿ ಬೆಸ್ತು ಬಿದ್ದಿದ್ದಾರೆ.  

ಆರೋಗ್ಯ ಹದಗೆಟ್ಟಿರಬೇಕೆಂದುಕೊಂಡಿದ್ದ ಶಿಕ್ಷಣಾಧಿಕಾರಿ

ಪರಿಶೀಲನೆಗಾಗಿ ಶಾಲೆಗೆ ಭೇಟಿ ನೀಡಿದ ಶಿಕ್ಷಣಾಧಿಕಾರಿ ಕುಡಿದು ಚೇರ್‍ನಲ್ಲಿಯೇ ಗಡತ್ತಾಗಿ ಮಲಗಿದ್ದ ಶಿಕ್ಷಕಿಯನ್ನು ಕಂಡು ಹೌಹಾರಿದ್ದಾರೆ. ಮೊದಲು ಆಕೆಯ ಆರೋಗ್ಯ ಹದಗೆಟ್ಟಿರಬಹುದು ಎಂದುಕೊಂಡಿದ್ದರು. ಆದರೆ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ವಾಸ್ತವಾಂಶ ತಿಳಿಸಿದ ಬಳಿಕ ಹಣೆ ಹಣೆ ಚಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಭೀಕರ ಅಗ್ನಿ ಅವಘಡ: ನಾಲ್ವರ ಸಜೀವ ದಹನ, ಎಂಟು ಜನರಿಗೆ ಗಾಯ..!

ಶಿಕ್ಷಕಿ ಮದ್ಯದ ಅಮಲಿನಲ್ಲಿ ಆ ರೀತಿ ಮಲಗಿರುವುದಾಗಿ ವಿದ್ಯಾರ್ಥಿಗಳು ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ 430 ಕಿಮೀ ದೂರದಲ್ಲಿರುವ ಈ ಪ್ರಾಥಮಿಕ ಶಾಲೆಯಲ್ಲಿ 54 ಮಕ್ಕಳು ಓದುತ್ತಿದ್ದಾರೆ.

ಶಿಕ್ಷಕಿಯ ಸ್ಥಿತಿ ನೋಡಿದ ಶಿಕ್ಷಣಾಧಿಕಾರಿ ಕೂಡಲೇ ಎಎಸ್ಪಿಗೆ ಮಾಹಿತಿ ನೀಡಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಸುವಂತೆ ತಿಳಿಸಿದ್ದಾರೆ. ನಂತರ ಇಬ್ಬರು ಮಹಿಳಾ ಪೇದೆಗಳು ಸ್ಥಳಕ್ಕಾಗಮಿಸಿ ಶಿಕ್ಷಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಳೆದ ಹಲವು ದಿನಗಳಿಂದ ಕುಡಿದ ಮತ್ತಿನಲ್ಲಿಯೇ ಈ ಶಿಕ್ಷಕಿ ಶಾಲೆಗೆ ಬರುತ್ತಿದ್ದಳಂತೆ. ಆಕೆಗೆ ಛೀಮಾರಿ ಹಾಕಿರುವ ಅಧಿಕಾರಿಗಳು ಕುಡಿತ ಬಿಡುವಂತೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News