ವಾಚ್ ವಿಡಿಯೋ: ಗಾಳಿ ತುಂಬುವ ವೇಳೆ ಜೆಸಿಬಿ ಟೈರ್ ಸ್ಫೋಟ, ಇಬ್ಬರ ದುರ್ಮರಣ

ಸ್ಫೋಟದ ತೀವ್ರತೆ ಎಷ್ಟು ತೀವ್ರವಾಗಿತ್ತು ಎಂದರೆ ಟೈರ್ ಬಳಿಯಿದ್ದ ಇಬ್ಬರೂ ಕೆಲಸಗಾರರು ಗಾಳಿಯಲ್ಲಿ ಹಾರಿದರು. ಇದರೊಂದಿಗೆ ಅವರ ದೇಹದ ಕೆಲವು ತುಂಡುಗಳೂ ಅಲ್ಲಲ್ಲಿ ಬಿದ್ದಿದ್ದವು.  ರಾಯ್‌ಪುರದ ಸಿಲ್ತಾರಾ ಕೈಗಾರಿಕಾ ಪ್ರದೇಶದಲ್ಲಿ ಮೇ 3 ರಂದು ಸಂಭವಿಸಿದ ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Written by - Yashaswini V | Last Updated : May 5, 2022, 11:33 AM IST
  • ಛತ್ತೀಸ್‌ಗಢದ ರಾಯ್‌ಪುರದ ಸಿಲ್ತಾರಾದಲ್ಲಿ ಆಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
  • ವಾಸ್ತವವಾಗಿ ಇಲ್ಲಿನ ಜೆಸಿಬಿಯ ಟೈರ್ ನಲ್ಲಿ ಗಾಳಿ ತುಂಬುವ ವೇಳೆ ಸ್ಫೋಟ ಸಂಭವಿಸಿದೆ.
  • ಈ ಅಪಘಾತದಲ್ಲಿ ಅಲ್ಲಿದ್ದ ಇಬ್ಬರು ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.
ವಾಚ್ ವಿಡಿಯೋ: ಗಾಳಿ ತುಂಬುವ ವೇಳೆ ಜೆಸಿಬಿ ಟೈರ್ ಸ್ಫೋಟ, ಇಬ್ಬರ ದುರ್ಮರಣ  title=
JCB tyre bursts

ಜೆಸಿಬಿ ಟೈರ್ ಸ್ಫೋಟ:  ಛತ್ತೀಸ್‌ಗಢದ ರಾಯಪುರದ ಸಿಲ್ತಾರಾದಲ್ಲಿ  ಹೃದಯ ವಿದ್ರಾವಕ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ವಾಹನ ವರ್ಕ್‌ಶಾಪ್‌ನಲ್ಲಿ ಜೆಸಿಬಿಗೆ ಗಾಳಿ ತುಂಬುತ್ತಿದ್ದಾಗ ಟೈರ್ ಸ್ಫೋಟಗೊಂಡು ಅಲ್ಲಿದ್ದ ಇಬ್ಬರು ನೌಕರರು ಸಾವನ್ನಪ್ಪಿದ್ದಾರೆ. ಮೃತ ನೌಕರರನ್ನು ರಾಜಪಾಲ್ ಮತ್ತು ಪ್ರಂಜನ್ ಎಂದು ಗುರುತಿಸಲಾಗಿದೆ.

ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆ:
ರಾಯ್‌ಪುರದ ಸಿಲ್ತಾರಾ ಕೈಗಾರಿಕಾ ಪ್ರದೇಶದಲ್ಲಿ ಮೇ 3 ರಂದು ಸಂಭವಿಸಿದ ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ ತುಣುಕಿನಲ್ಲಿ ದೊಡ್ಡ ಟೈರ್‌ನಲ್ಲಿ ಕೆಲಸಗಾರ ಗಾಳಿ ತುಂಬುತ್ತಿರುವುದನ್ನು ಕಾಣಬಹುದು. ನಂತರ ಇನ್ನೊಬ್ಬ ವ್ಯಕ್ತಿ ಬಂದು ಗಾಳಿಯ ಪ್ರಮಾಣವನ್ನು ಪರೀಕ್ಷಿಸಲು ಟೈರ್ ಅನ್ನು ಒಂದೆರಡು ಬಾರಿ ಒತ್ತಿದ್ದಾರೆ. ಆ ವೇಳೆ ಟೈರ್  ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಇಬ್ಬರು ವ್ಯಕ್ತಿಗಳು ಹಾರಿಹೋಗಿರುವ ದೃಶ್ಯಗಳು  ಕ್ಯಾಮರಾದಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ- Viral Video: ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್..‌ ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!

ಸ್ಫೋಟದ ತೀವ್ರತೆ ಎಷ್ಟು ತೀವ್ರವಾಗಿತ್ತು ಎಂದರೆ ಟೈರ್ ಬಳಿಯಿದ್ದ ಇಬ್ಬರೂ ಕೆಲಸಗಾರರು ಗಾಳಿಯಲ್ಲಿ ಹಾರಿದರು. ಇದರೊಂದಿಗೆ ಅವರ ದೇಹದ ಕೆಲವು ತುಂಡುಗಳೂ ಅಲ್ಲಲ್ಲಿ ಬಿದ್ದಿದ್ದವು. ಇದೇ ವೇಳೆ ಜೆಸಿಬಿಯ ಟೈರ್ ಹಾರಿ ಬಿದ್ದಿದೆ. 

ಇದನ್ನೂ ಓದಿ- Viral Video: ಇಲ್ನೋಡಿ ಅಜ್ಜಿಯ ಡ್ಯಾನ್ಸ್‌... `ಸಾಮಿ ಸಾಮಿ' ಹಾಡಿಗೆ ಭರ್ಜರಿ ಸ್ಟೆಪ್ಸ್‌

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಲ್ತಾರಾ ಔಟ್‌ಪೋಸ್ಟ್ ಇನ್‌ಚಾರ್ಜ್ ರಾಜೇಶ್ ಜನ್ ಪಾಲ್ ಅವರು ಸಿಲ್ತಾರಾ ಪ್ರದೇಶದ ಘನ್‌ಕುನ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್‌ನ ಗ್ಯಾರೇಜ್‌ನಲ್ಲಿ, ಇಬ್ಬರು ನೌಕರರು ಜೆಸಿಬಿಯ ಟೈರ್‌ಗೆ ಗಾಳಿ ತುಂಬುತ್ತಿದ್ದರು. ಈ ವೇಳೆ ಏಕಾಏಕಿ ಟೈರ್ ಜೋರಾಗಿ ಸದ್ದು ಮಾಡಿತು. ಈ ದುರ್ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ರಾಜಪಾಲ್ ಮತ್ತು ಪ್ರಂಜನ್ ಎಂಬುವವರು ದುರ್ಮರಣ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ವೈರಲ್ ವಿಡಿಯೋ ನೋಡಿ... 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News