Viral Video: ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ! ಹೋಟೆಲ್‍ಗೆ ಹೋಗುವ ಮುನ್ನ ಈ ವಿಡಿಯೋ ನೋಡಿ  

ವರದಿ ಪ್ರಕಾರ ಈ ಘಟನೆ ನಡೆದಿರುವುದು ಶರವಣ ಭವನದಲ್ಲಿ. ದೂರುದಾರ ಪಂಕಜ್ ಅಗರ್ವಾಲ್ ಫತೇಪುರಿಯಿಂದ ತನ್ನ ಸ್ನೇಹಿತರೊಂದಿಗೆ ದೆಹಲಿಯ ಐಷಾರಾಮಿ ಕನ್ನಾಟ್ ಪ್ಲೇಸ್ ಪ್ರದೇಶದ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.

Written by - Puttaraj K Alur | Last Updated : Dec 23, 2023, 05:54 PM IST
  • ದೆಹಲಿಯ ಪ್ರಸಿದ್ಧ ಶರವಣ ಭವನ ಹೋಟೆಲ್‍ನ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ
  • ಅನ್ನ-ಸಾಂಬಾರ್ ಸೇವಿಸುವಾಗ ಪತ್ತೆಯಾದ ಹಲ್ಲಿಯ ಮೃತದೇಹ
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್, ಹೋಟೆಲ್ ವಿರುದ್ಧ FIR
Viral Video: ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ! ಹೋಟೆಲ್‍ಗೆ ಹೋಗುವ ಮುನ್ನ ಈ ವಿಡಿಯೋ ನೋಡಿ   title=
ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ!

ನವದೆಹಲಿ: ದೆಹಲಿಯ ಪ್ರಸಿದ್ಧ ಶರವಣ ಭವನದ ಹೋಟೆಲ್‍ನಲ್ಲಿ ಗ್ರಾಹಕರಿಗೆ ನೀಡಿದ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹೋಟೆಲ್ ವಿರುದ್ಧ FIR ದಾಖಲಾಗಿದೆ.

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ದಕ್ಷಿಣ ಭಾರತದ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ನೀಡಿದ ಸಾಂಬಾರ್‌ನಲ್ಲಿ ಹಲ್ಲಿ ಕಂಡುಬಂದಿದೆ. ಗ್ರಾಹಕರೊಬ್ಬರು ತಮ್ಮ ಊಟದ ಸಾಂಬಾರ್‌ನಲ್ಲಿ ಹಲ್ಲಿ ಬಿದ್ದಿರುವುದನ್ನು ಹೋಟೆಲ್‍ ಸಿಬ್ಬಂದಿಗೆ ತೋರಿಸುತ್ತಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.  

ಇದನ್ನೂ ಓದಿ: India Covid Cases: ಭಾರತದಲ್ಲಿ ಕೊರೊನಾ ಉಲ್ಬಣ.. ಒಂದೇ ದಿನದಲ್ಲಿ ದಾಖಲಾದ ಕೋವಿಡ್‌ ಪ್ರಕರಣಗಳು ಎಷ್ಟು?

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಹಂಚಿಕೆಯಾಗುತ್ತಿರುವ ಈ ವೀಡಿಯೊದಲ್ಲಿ, ಇಬ್ಬರು ವ್ಯಕ್ತಿಗಳು ಸತ್ತ ಹಲ್ಲಿಯನ್ನು ಚಮಚದಲ್ಲಿ ಹಿಡಿದು ತೋರಿಸುತ್ತಿರುವುದನ್ನು ಕಾಣಬಹುದು. ಮಧ್ಯಾಹ್ನದ ಊಟಕ್ಕೆ ಬಂದಿದ್ದ ಗ್ರಾಹಕರಿಗೆ ನೀಡಿದ ಆಹಾರದಲ್ಲಿ ಹಲ್ಲಿಯ ಮೃತದೇಹ ಪತ್ತೆಯಾಗಿದೆ. ಹಲ್ಲಿ ಕಂಡ ಕೂಡಲೇ ಗ್ರಾಹಕರ ಕಣ್ಣು ಕೆಂಪಗಾಗಿದೆ. ಕೂಡಲೇ ಅವರು ಹೋಟೆಲ್ ಸಿಬ್ಬಂದಿಯನ್ನು ಕರೆದು ಹಲ್ಲಿ ತೋರಿಸಿ ‘ಇದನ್ನು ಯಾರು ತಿನ್ನಬೇಕು’ ಅಂತಾ ಪ್ರಶ್ನಿಸಿದ್ದಾರೆ.

ವರದಿ ಪ್ರಕಾರ ಈ ಘಟನೆ ನಡೆದಿರುವುದು ಶರವಣ ಭವನದಲ್ಲಿ. ದೂರುದಾರ ಪಂಕಜ್ ಅಗರ್ವಾಲ್ ಫತೇಪುರಿಯಿಂದ ತನ್ನ ಸ್ನೇಹಿತರೊಂದಿಗೆ ದೆಹಲಿಯ ಐಷಾರಾಮಿ ಕನ್ನಾಟ್ ಪ್ಲೇಸ್ ಪ್ರದೇಶದ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಅರ್ಧ ಊಟ ಸೇವಿಸಿದ್ದ ಗ್ರಾಹಕರು ಅನ್ನ-ಸಾಂಬಾರ್ ಸೇವಿಸುವಾಗ ಹಲ್ಲಿ ಪತ್ತೆಯಾಗಿದೆ. ದಕ್ಷಿಣ ಭಾರತದ ಪ್ರಸಿದ್ಧ ರೆಸ್ಟೋರೆಂಟ್‍ನಲ್ಲಿಯೇ ಈ ಗತಿಯಾದರೆ ನಮ್ಮ ಕಥೆಯೇನು ಅಂತಾ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನ್ಯೂ ಇಯರ್‌ ಮೂಡ್‌ನಲ್ಲಿ ಏಡಿ ಬಿಯರ್‌ ಹಿಡಿದು ಸಿಗರೇಟ್‌ ಸೇದುತ್ತಿರುವ ವಿಡಿಯೋ ವೈರಲ್!

ನಂತರ ಘಟನೆಯ ಬಗ್ಗೆ ದೂರು ದಾಖಲಾಗಿದ್ದು, ರೆಸ್ಟೋರೆಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೆಸ್ಟೋರೆಂಟ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿ, ಅಡುಗೆಯವರ ವಿವರಗಳು, ಸಾಂಬಾರ್ ಮಾಡಲು ಬಳಸುವ ಪದಾರ್ಥಗಳು ಮತ್ತು ರೆಸ್ಟೋರೆಂಟ್ ಪರವಾನಗಿಯನ್ನು ಕೇಳಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News