ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿಯನ್ನ ದೇವರಂತೆ ಬಂದು ಕಾಪಾಡಿದ: ವಿಡಿಯೋ ನೋಡಿದ್ರೆ ಮೈಜುಂ ಎನ್ನುತ್ತೆ!

ಈ ಘಟನೆ ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಇದರ ಸಿಸಿಟಿವಿ ವಿಡಿಯೋವನ್ನು ಆರ್‌ಪಿಎಫ್ ಇಂಡಿಯಾದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಶೌರ್ಯ ಮತ್ತು ಧೈರ್ಯದ ಮತ್ತೊಂದು ಕಥೆ ಎಂದು ಬರೆಯಲಾಗಿದೆ.

Written by - Bhavishya Shetty | Last Updated : Sep 24, 2022, 07:58 PM IST
    • ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿಯನ್ನ ಪ್ರಾಣ ಪಣಕ್ಕಿಟ್ಟು ಕಾಪಾಡಿದ ಸಿಬ್ಬಂದಿ
    • ಈ ಘಟನೆ ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ
    • ಇದರ ಸಿಸಿಟಿವಿ ವಿಡಿಯೋ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ
ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿಯನ್ನ ದೇವರಂತೆ ಬಂದು ಕಾಪಾಡಿದ: ವಿಡಿಯೋ ನೋಡಿದ್ರೆ ಮೈಜುಂ ಎನ್ನುತ್ತೆ! title=
Indian Railway

ರೈಲು ನಿಲ್ದಾಣದಲ್ಲಿ ರೈಲು ನಿಂತಾಗ, ಅನೇಕ ಪ್ರಯಾಣಿಕರು ಅದಕ್ಕೂ ಮೊದಲು ಹತ್ತಲು ಬಯಸುತ್ತಾರೆ. ಅನೇಕ ಪ್ರಯಾಣಿಕರು ಸಹ ನಿಲ್ಲುವ ಮೊದಲು ತರಾತುರಿಯಲ್ಲಿ ಇಳಿಯುತ್ತಿರುತ್ತಾರೆ. ಆದರೆ ಅಂತಹ ಕೃತ್ಯವು ಕೆಲವೊಮ್ಮೆ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಚಲಿಸುತ್ತಿದ್ದ ರೈಲು ಮತ್ತು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ನಡುವೆ ವ್ಯಕ್ತಿಯೊಬ್ಬ ಬಿದ್ದಿರುವ ಇಂತಹ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಆದರೆ ಅದೃಷ್ಟವಶಾತ್ ಆರ್‌ಪಿಎಫ್ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ. 

ಇದನ್ನೂ ಓದಿ: King Cobra with Nagamani : ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ದೃಶ್ಯ ವೈರಲ್!

ಈ ಘಟನೆ ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಇದರ ಸಿಸಿಟಿವಿ ವಿಡಿಯೋವನ್ನು ಆರ್‌ಪಿಎಫ್ ಇಂಡಿಯಾದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಶೌರ್ಯ ಮತ್ತು ಧೈರ್ಯದ ಮತ್ತೊಂದು ಕಥೆ ಎಂದು ಬರೆಯಲಾಗಿದೆ.

ಆರ್‌ಪಿಎಫ್ ಎಎಸ್‌ಐ ಅರುಣ್‌ಜೀತ್ ಮತ್ತು ಲೇಡಿ ಹೆಚ್‌ಸಿ ಪಿಪಿ ಮಿನಿ, ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಕೊಯಮತ್ತೂರು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಾಗ ಪ್ರಯಾಣಿಕರನ್ನು ಕಾಪಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಇನ್ನೂ ಓಡುತ್ತಿದ್ದು, ಪ್ರಯಾಣಿಕರು ಇದ್ದಕ್ಕಿದ್ದಂತೆ ಮಧ್ಯದಲ್ಲಿ ಬಿದ್ದಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಮಾಹಿತಿ ಪ್ರಕಾರ ಆತ ಸೇಲಂ ಜಿಲ್ಲೆಯ ಮೆಟ್ಟೂರು ನಿವಾಸಿಯಾಗಿದ್ದು, ಆತನ ಹೆಸರು ಶಿವಕುಮಾರ್. ಕೊಯಮತ್ತೂರು ಜಂಕ್ಷನ್‌ನಲ್ಲಿ ಚಲಿಸುತ್ತಿದ್ದ ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಿಂದ ಇಳಿಯಲು ಯತ್ನಿಸಿದ್ದಾನೆ. ಆದರೆ ಆತ ಸಮತೋಲನ ಕಳೆದುಕೊಂಡು ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರಕ್ಕೆ ಬಿದ್ದಿದ್ದಾನೆ. 

ಇದನ್ನೂ ಓದಿ: ಲಾಟರಿಯಲ್ಲಿ 25 ಕೋಟಿ ರೂ. ಗೆದ್ದರೂ ಮನಶಾಂತಿ ಇಲ್ಲ : ಶತ್ರುಗಳು ಹೆಚ್ಚಾದರು..!

ಇದಾದ ತಕ್ಷಣ ಅಲ್ಲಿದ್ದ ಕೆಲವು ಆರ್‌ಪಿಎಫ್ ಸಿಬ್ಬಂದಿ ಆತನನ್ನು ರಕ್ಷಿಸಲು ಮುಂದಾಗಿದ್ದಾರೆ. ನಂತರ, ಭಾಗಶಃ ಗಾಯಗೊಂಡ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಈ ಘಟನೆಯ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News