King Cobra with Nagamani : ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ದೃಶ್ಯ ವೈರಲ್!

King Cobra with Nagamani : ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ನಾಗಮಣಿಯನ್ನು ನಾಗರಹಾವು ಕಾವಲು ಕಾಯುತ್ತಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Written by - Chetana Devarmani | Last Updated : Sep 24, 2022, 04:03 PM IST
  • ಹಿಂದೂ ಪುರಾಣಗಳಲ್ಲಿ ನಾಗರಹಾವು ಅಥವಾ ಕಾಳಿಂಗ ಸರ್ಪಕ್ಕೆ ವಿಶೇಷ ಸ್ಥಾನವಿದೆ
  • ಆದುದರಿಂದಲೇ ಶಿವನನ್ನು ಪೂಜಿಸುವ ಪ್ರತಿಯೊಬ್ಬರೂ ನಾಗರ ಹಾವನ್ನು ಕೂಡ ಪೂಜಿಸುತ್ತಾರೆ
  • ನಾಗಮಣಿಯನ್ನು ನಾಗರಹಾವು ಕಾವಲು ಕಾಯುತ್ತಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ
King Cobra with Nagamani : ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ದೃಶ್ಯ ವೈರಲ್!  title=
ನಾಗರಹಾವು

King Cobra with Nagamani : ಹಿಂದೂ ಪುರಾಣಗಳಲ್ಲಿ ನಾಗರಹಾವು ಅಥವಾ ಕಾಳಿಂಗ ಸರ್ಪಕ್ಕೆ ವಿಶೇಷ ಸ್ಥಾನವಿದೆ. ಶಿವನು ಕೊರಳಲ್ಲಿ ನಾಗರ ಹಾವನ್ನು ಧರಿಸಿರುತ್ತಾನೆ. ಆದುದರಿಂದಲೇ ಶಿವನನ್ನು ಪೂಜಿಸುವ ಪ್ರತಿಯೊಬ್ಬರೂ ನಾಗರ ಹಾವನ್ನು ಕೂಡ ಪೂಜಿಸುತ್ತಾರೆ. ಶಿವನ ಜೊತೆಗೆ ಜನರು ಶಿವರಾತ್ರಿಯಂದು ನಾಗರ ಹಾವನ್ನು ಪೂಜಿಸುತ್ತಾರೆ. ಹಿಂದೂಗಳು ನಾಗರಚೌತಿಯಂದು ನಾಗರ ಹಾವಿಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಹುತ್ತಕ್ಕೆ ಹಾಲು ಸುರಿದು ಭಕ್ತಿಯಿಂದ ಪೂಜಿಸಲಾಗುತ್ತದೆ. 

ಇದನ್ನೂ ಓದಿ : ದಸರಾ ಹಬ್ಬ: ಶಾಲೆಗಳಿಗೆ 4 ದಿನ ಹೆಚ್ಚುವರಿ ರಜೆ ಘೋಷಣೆ

ನಾಗರಹಾವು ಭಗವಾನ್ ಶಿವನ ವಾಹನವಾಗಿದೆ ಎಂದು ಪುರಾಣಗಳು ಹೇಳುತ್ತವೆ. ಶಿವನ ದೇವಸ್ಥಾನದಲ್ಲಿ ನಾಗರಹಾವು  ಇದ್ದೇ ಇರುತ್ತದೆ. ಕೆಲವು ದೇವಾಲಯಗಳಲ್ಲಿ ನಾಗರಹಾವು ಶಿವಲಿಂಗ ಅಥವಾ ನಾಗಮಣಿಯನ್ನು ಕಾಪಾಡುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ನಾಗರ ಹಾವಿಗೆ ಕಾವಲು ಕಾಯುತ್ತಿರುವುದನ್ನು ನಾವು ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನೋಡಿದ್ದೇವೆ. 

ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ನಾಗಮಣಿಗೆ ನಾಗರಹಾವು ಕಾವಲು ಕಾಯುವ ದೃಶ್ಯವೊಂದು ಇದೀಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಪ್ಪು ಕಾಳಿಂಗ ಸರ್ಪವೊಂದು ನಾಗಮಣಿ ಕಾವಲು ಕಾಯುತ್ತಿದೆ. ರಾತ್ರಿಯಲ್ಲೂ ಆ ಹಾವು ಕಾವಲು ಕಾಯುತ್ತಿರುತ್ತದೆ. ಹಾಗಾಗಿ ನಾಗಮಣಿಯನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ. ಇದೀಗ ಈ ವಿಡಿಯೋ ನೋಡಿದವರೆಲ್ಲಾ ಶಾಕ್ ಆಗಿದ್ದಾರೆ.  

ಇದನ್ನೂ ಓದಿ: Nostradamus : ನಾಸ್ಟ್ರಾಡಾಮಸ್‌ನ ಈ ಭಯಾನಕ ಭವಿಷ್ಯವಾಣಿ ನಿಜವಾಗುವುದೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News