Viral Video: ವಿಷಕಾರಿ ಹಾವಿನೊಂದಿಗೆ ವ್ಯಕ್ತಿಯ ಅಪಾಯಕಾರಿ ಸಾಹಸ ಹೇಗಿದೆ ನೋಡಿ!

ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ವಿಷಕಾರಿ ಹಾವು ಹಿಡಿದು ಅದರ ಜೊತೆಗೆ ಚೆಲ್ಲಾಟವಾಡಿದ್ದಾನೆ.

Written by - Puttaraj K Alur | Last Updated : Sep 18, 2022, 06:52 AM IST
  • ವಿಷಕಾರಿ ಹಾವಿನ ಜೊತೆಗೆ ವ್ಯಕ್ತಿಯೊಬ್ಬ ಚೆಲ್ಲಾಟವಾಡಿದ್ದಾನೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ
  • ಯಾವುದೇ ಭಯವಿಲ್ಲದೆ ಹಾವು ಹಿಡಿದ ವ್ಯಕ್ತಿಯ ಧೈರ್ಯ ಹೇಗಿದೆ ನೋಡಿ
Viral Video: ವಿಷಕಾರಿ ಹಾವಿನೊಂದಿಗೆ ವ್ಯಕ್ತಿಯ ಅಪಾಯಕಾರಿ ಸಾಹಸ ಹೇಗಿದೆ ನೋಡಿ! title=
ವಿಷಕಾರಿ ಹಾವಿನ ಜೊತೆ ಚೆಲ್ಲಾಟ!

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ಕೆಲವು ನೋಡಲು ಫನ್ನಿಯಾಗಿದ್ದರೆ, ಇನ್ನು ಕೆಲವು ಭಯಾನಕವಾಗಿರುತ್ತವೆ. ಇಂತಹ ವಿಡಿಯೋ ನೋಡಿದ್ರೆ ನೀವು ಭಯ ಬೀಳುವುದು ಗ್ಯಾರಂಟಿ. ವಿಷಕಾರಿ ಹಾವಿನೊಂದಿಗೆ ವ್ಯಕ್ತಿಯೊಬ್ಬ ಅಪಾಯಕಾರಿ ಸಾಹಸ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.  

ವಿಷಕಾರಿ ಹಾವಿನ ಜೊತೆಗೆ ವ್ಯಕ್ತಿಯೊಬ್ಬ ಚೆಲ್ಲಾಟವಾಡಿದ್ದಾನೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಹೌಹಾರಿದ್ದಾರೆ. ಹಾವುಗಳೆಂದರೆ ಬಹುತೇಕರು ಓಡಿ ಹೋಗುತ್ತಾರೆ. ಅಂತಹದ್ದರಲ್ಲಿ ಈ ವ್ಯಕ್ತಿ ಆ ವಿಷಜಂತುವಿನ ಜೊತೆಗೆ ಚೆಲ್ಲಾಟವಾಡಿದ್ದಾನೆ.

ಇದನ್ನೂ ಓದಿ: ಮುಂಬೈನಲ್ಲಿ ಶಾಲೆಯ ಲಿಫ್ಟ್‌ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿ ಸಾವು

ಕೋಪಗೊಂಡ ಹಾವು!

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಯಾವುದೇ ಭಯವಿಲ್ಲದೆ ಹಾವು ಹಿಡಿಯುವುದನ್ನು ನೀವು ಕಾಣಬಹುದು. ಆ ವಿಷಕಾರಿ ಹಾವು ಪದೇ ಪದೇ ವ್ಯಕ್ತಿಯ ಕೈಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಈತ ಮಾತ್ರ ಅದನ್ನು ಬಿಡದೆ ಅದರ ಜೊತೆಗೆ ಚೆಲ್ಲಾಟವಾಡಿದ್ದಾನೆ. ಆ ಕಡೆ ಈ ಕಡೆ ಎಳೆದಾಡುವ ಮೂಲಕ ತಾನು ಹಿಡಿದಿರುವ ವಿಷಕಾರಿ ಹಾವಿನ ಬಗ್ಗೆ ವಿವರಣೆ ನೀಡಿದ್ದಾನೆ. ಈ ವೇಳೆ ಸದ್ದು ಮಾಡುತ್ತಾ ಆ ಹಾವು ವ್ಯಕ್ತಿಯ ಮೇಲೆ ಕೋಪಿಸಿಕೊಂಡಿರುವುದನ್ನು ನೀವು ಕಾಣಬಹುದು. ಆದರೆ ವ್ಯಕ್ತಿ ಮಾತ್ರ ಹಾವಿಗೆ ಯಾವುದೇ ಕಾರಣಕ್ಕೂ ಹೆದರಿಲ್ಲ. ಕೈಯಲ್ಲಿ ಹಿಡಿದು ಅದನ್ನು ಎಳೆದಾಡಿದ್ದಾನೆ. ಹಾವು ಹಿಡಿಯುವ ನಿಪುಣತೆ ಹೊಂದಿರುವ ಆತನ ಮುಖದಲ್ಲಿ ಯಾವುದೇ ರೀತಿಯ ಭಯ ಕಂಡುಬಂದಿಲ್ಲ.

ವೈರಲ್ ಆಗಿರುವ ವಿಡಿಯೋ

ಶೇರ್ ಆದ ಕೆಲವೇ ಗಂಟೆಗಳಲ್ಲಿ ಹಾವು ಹಿಡಿಯುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಹಾವು ಹಿಡಿದಿರುವ ವ್ಯಕ್ತಿಯ ಧೈರ್ಯವನ್ನು ಕೆಲವರು ಮೆಚ್ಚಿಕೊಂಡು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ವಿಷಕಾರಿ ಹಾವುಗಳ ಜೊತೆ ಈ ರೀತಿಯ ಚೆಲ್ಲಾಟ ಸರಿಯಲ್ಲವೆಂದು ಆ ವ್ಯಕ್ತಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಜಾನ್ಸನ್ ಬೇಬಿ ಪೌಡರ್ ಉತ್ಪಾದನಾ ಪರವಾನಗಿ ರದ್ದುಗೊಳಿಸಿದ ಈ ರಾಜ್ಯ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News